Sunday, September 8, 2024

ಆರೋಗ್ಯದ ಬದ್ಧತೆ, ಇಲ್ಲಿ ಗಾಳಿಯ ಶುದ್ಧತೆ: ಸಿಬಿಸಿ

ಕುಂದಾಪುರ: ಒಳಾಂಗಣ ಕ್ರೀಡಾಂಗಣಗಳಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಪ್ರಮುಖವಾದುದು. ಈ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ನೂತನವಾಗಿ ಆರಂಭಗೊಂಡ COSTA BADMINTON CENTER ನಲ್ಲಿ ಉತ್ತಮ ಗುಣಮಟ್ಟದ ಟರ್ಬೋ ಫ್ಯಾನ್‌ಗಳನ್ನು ಬಳಸಲಾಗಿದೆ, ಆಟಗಾರರ ಆರೋಗ್ಯ, ಫಿಟ್ನೆಸ್‌ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಬ್ಯಾಡ್ಮಿಂಟನ್‌ ಅಕಾಡೆಮಿಯ ನಿರ್ದೇಶಕ ಅಜಿತ್‌ ಐವಾನ್‌ ಡಿಕೋಸ್ಟಾ ಅವರು ಹೇಳಿದ್ದಾರೆ. For quality air Costa Badminton Center installed Turbo Fans.

“ಉತ್ತಮ ಸೌಲಭ್ಯಗಳನ್ನು ಒದಗಿಸುವುದರ ಜೊತೆಯಲ್ಲಿ ಅಕಾಡೆಮಿಯ ಒಳಗಡೆ ಉತ್ತಮ ಗಾಳಿಯನ್ನು ಕಾಯ್ದುಕೊಳ್ಳುವುದು ಕೂಡ ಮುಖ್ಯ. ಈ ಕಾರಣಕ್ಕಾಗಿ ನೈಸರ್ಗಿಕವಾಗಿ ಕಾರ್ಯನಿರ್ವಹಿಸುವ ಎರಡು ಬೃಹತ್‌ ಟರ್ಬೋ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಇದನ್ನು ತಜ್ಞರೊಂದಿಗೆ ಚರ್ಚಿಸಿ ಅಳವಡಿಸಲಾಗಿದೆ, ಇದು 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿರುತ್ತದೆ. ನಮಗೆ ಆಟಗಾರರ ಆಟದ ಜೊತೆಯಲ್ಲಿ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ಇದೆ,” ಎಂದು ಅಜಿತ್‌ ಹೇಳಿದ್ದಾರೆ.

ಕ್ರೀಡಾಂಗಣದ ಒಳಗಿನ ತಾಪಪಾನ, ತೇವಾಂಶ ಹಾಗೂ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣ ಇವುಗಳನ್ನು ನಿಯಂತ್ರಿಸುವುದು ಮುಖ್ಯ. ಈ ಕಾರಣಕ್ಕಾಗಿಯೇ ಒಳಾಂಗಣ ಕ್ರೀಡಾಂಗಣ ಮತ್ತು ಕೈಗಾರಿಕಾ ಕಟ್ಟಡಗಳಲ್ಲಿ ಟರ್ಬೋ ಫ್ಯಾನ್‌ಗಳನ್ನು ಅಳವಡಿಸಿರುತ್ತಾರೆ.

ಟರ್ಬೋ ಫ್ಯಾನ್‌ ಅಳವಡಿಕೆಯಿಂದ ಕ್ರೀಡಾಂಗಣದ ಒಳಗಡೆ ತೇವಾಂಶವನ್ನು ಕಾಯ್ದುಕೊಳ್ಳಬಹುದು, ಇದು ಅಂಗಣದ ಒಳಗಿನ ಗಾಳಿಯನ್ನು ಹೊರತಳ್ಳುವುದು ಮಾತ್ರವಲ್ಲ, ಹೊರಗಿನ ಗಾಳಿಯನ್ನೂ ಒಳಕ್ಕೆ ಬರುವಂತೆ ಮಾಡುತ್ತದೆ. ಇದರಿಂದ ಆಟಗಾರರು ಯಾವುದೇ ತೊಂದರೆ ಇಲ್ಲದೆ ಆಟವನ್ನು ಆಡಬಹುದು. ಕ್ರೀಡಾಂಗಣದ ಒಳಗಿನ ಉತ್ತಮ ಗಾಳಿಯು ಆಟಗಾರನ ಉತ್ತಮ ಪ್ರದರ್ಶನಕ್ಕೆ ನೆರವಾಗುತ್ತದೆ. ಉತ್ತಮ ವಾತಾಯನ ವ್ಯವಸ್ಥೆಯು ಸ್ನಾಯುಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಬ್ಯಾಡ್ಮಿಂಟನ್‌ ಆಡುವಾಗ ದೇಹದ ಎಲ್ಲ ಅಂಗಾಂಗಗಳೂ ಅತ್ಯಂತ ಕ್ರಿಯಾಶೀಲವಾಗಿರುತ್ತವೆ. ಹಾಗಾಗಿ ಉತ್ತಮ ಗಾಳಿಯ ಅಗತ್ಯವಿರುತ್ತದೆ. ಟರ್ಬೋ ಫ್ಯಾನ್‌ಗಳನ್ನು ಒಳಾಂಗಣ ಕ್ರೀಡಾಂಗಣಲ್ಲಿ ಬಳಸುವ ಉದ್ದೇಶವೇ ಇದಾಗಿದೆ. ಪಂದ್ಯದ ಆರಂಭದಲ್ಲಿ ಕಂಡ ಉತ್ಸಾಹ ಕೊನೆಯ ವರೆಗೂ ಉಳಿಸಿಕೊಳ್ಳುವಲ್ಲಿ ಉತ್ತಮ ಗಾಳಿಯ ವ್ಯವಸ್ಥೆ ಅನಿವಾರ್ಯವಾಗಿರುತ್ತದೆ. ಉತ್ತಮ ಗಾಳಿಯ ವ್ಯವಸ್ಥೆಗೆ ಟರ್ಬೋ ಫ್ಯಾನ್‌ಗಳು ನೆರವಾಗಲಿವೆ. ಇದರಿಂದ ಅಲರ್ಜಿ, ದೂಳು ಇವುಗಳಿಂದ ಆಟಗಾರ ಸುರಕ್ಷಿತವಾಗಿರುತ್ತಾರೆ.

ಕೃತಕ ಗಾಳಿ ಮತ್ತು ಏರ್‌ಫ್ರೆಷ್ನರ್‌, ಏರ್‌ ಫೂರಿಫೈಯರ್‌ಗಳನ್ನು ಬಳಸುವುದು ಸೂಕ್ತವಲ್ಲ. ನೈಸರ್ಗಿಕ ಗಾಳಿಯನ್ನು ನೀಡುವ, ಕಾರ್ಬನ್‌ ಡೈ ಆಕ್ಸೈಡನ್ನು ಹೊರ ಹಾಕುವ ಟರ್ಬೋ ಫ್ಯಾನ್‌ಗಳು ಪರಿಸರವನ್ನು ಕಾಯುವಲ್ಲಿ ನೆರವಾಗುತ್ತವೆ. ಅಂತಾರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ಏರ್‌ ಕಂಡೀಷವ್‌ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಕಡಿಮೆ ಜನರು ಆಡುವ ಮತ್ತು ಚಿಕ್ಕಪುಟ್ಟ ನಗರಗಳಲ್ಲಿರುವ ಬ್ಯಾಡ್ಮಿಂಟನ್‌ ಕ್ರೀಡಾಂಗಣಗಳಲ್ಲಿ ಹೆಚ್ಚಾಗಿ ಬಳಸುವುದೇ ಟರ್ಬೋ ಫ್ಯಾನ್‌ಗಳನ್ನು.

Related Articles