Thursday, March 28, 2024

ವಿಶ್ವಕಪ್: ನೆದರ್‌ಲೆಂಡ್‌ಗೆ ಭರ್ಜರಿ ಜಯ

ಭುವನೇಶ್ವರ:

ನೆದರ್‌ಲೆಂಡ್ ತಂಡದ ಅಮೋಘ ಪ್ರದರ್ಶನದಿಂದ 14ನೇ ಹಾಕಿ ವಿಶ್ವಕಪ್‌ನಲ್ಲಿ ಮಲೇಷ್ಯಾ ಎದುರು 7-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್ ಉತ್ತಮ ಆಟವಾಡುವ ಮೂಲಕ ಲೀಗ್‌ನ ಮೊದಲ ಜಯ ದಾಖಲಿಸಿ ಸಂಭ್ರಮಿಸಿತು.

ಪಂದ್ಯ ಆರಂಭದ 11ನೇ ನಿಮಿಷದಲ್ಲಿ ನೆದರ್‌ಲೆಂಡ್‌ನ ಜಿರೋನ್ ಹೆರ್ಟ್‌ಜ್‌‌ಬರ್ ತಂಡಕ್ಕೆೆ ಮೊದಲ ಗೋಲಿನ ಕಾಣಿಕೆ ನೀಡಿದರು. 21 ನಿಮಿಷದಲ್ಲಿ ಮಿಕ್ರೊ ಎರಡನೇ ಗೋಲನ್ನು ಬಾರಿಸಿದರೆ, 29ನೇ ನಿಮಿಷದಲ್ಲಿ ಜಿರೋನ್ ಉತ್ತಮ ಪ್ರದರ್ಶನದೊಂದಿಗೆ ಮೂರನೇ ಗೋಲನ್ನು ತಂಡಕ್ಕೆೆ ನೀಡಿದರು. ಈ ಮೂಲಕ ನೆದರ್‌ಲೆಂಡ್ ತಂಡ ಮಲೇಷ್ಯಾ ಎದುರು 3-0 ಮುನ್ನಡೆಯಾಯಿತು.
ಮಲೇಷ್ಯಾ ಆಟಗಾರರು ಗೋಲು ಗಳಿಸಲು ನೆದರ್‌ಲೆಂಡ್ ಎದುರು ತೀವ್ರ ಪೈಪೋಟಿ ನಡೆಸಿದರೂ ಅದು ಫಲ ಸಿಗಲಿಲ್ಲ. 35ನೇ ನಿಮಿಷದಲ್ಲಿ ಮಿಂಕ್ ವೆರ್ಡೆನ್ ಮತ್ತು 42 ನೇ ನಿಮಿಷದಲ್ಲಿ ರೊಬರ್ಟ್ ಕೆಂಪೆರ್‌ಮನ್ ಗೋಲು ಸಿಡಿಸುವಲ್ಲಿ ಸಫಲರಾದರು. ನೆದರ್‌ಲೆಂಡ್ ಆಟಗಾರರು ತಮ್ಮ ಆಟದ ಲಯ ಮುಂದುವರಿಸುವಲ್ಲಿ ಯಶಸ್ವಿಯಾಗುವ ಮೂಲಕ 57ನೇ ನಿಮಿಷದಲ್ಲಿ ಥಿರೆ ಬ್ರಿಂಕ್ ಮನ್ ಆರನೇ ಗೋಲನ್ನು ತಂಡದ ಅಂಕಪಟ್ಟಿಗೆ ಸೇರಿಸಿದರೆ, ಜಿರೋನ್ ಅದ್ಭುತ ಪ್ರದರ್ಶನದಿಂದ 60ನೇ ನಿಮಿಷದಲ್ಲಿ ಮೂರನೇ ಗೋಲನ್ನು ಸಿಡಿಸಿ ತಂಡಕ್ಕೆೆ ಅಂತಿಮ ಪಾಯಿಂಟ್ ತಂದುಕೊಟ್ಟರು. ಕೊನೆಗೂ ಮಲೇಷ್ಯಾ ಆಟಗಾರರು ಗೋಲು ಸಾಧಿಸುವಲ್ಲಿ ವಿಫಲವಾಗಿ 0-7 ಗೋಲುಗಳಿಂದ ಹೀನಾಯ ಸೋಲನುಭವಿಸಿದರು. ಎರಡು ತಂಡಗಳು ಒಟ್ಟಾರೆ ಟೂರ್ನಿಗಳಲ್ಲಿ ಮೂರು ಬಾರಿ ಮುಖಾಮುಖಿಗಳಾದರೆ, ಅದರಲ್ಲಿ ನೆದರ್‌ಲೆಂಡ್ ತಂಡಕ್ಕೆೆ ಮೂರು ಬಾರಿ ಜಯ ಸಂದಿದೆ. ವಿಶ್ವಕಪ್‌ನಲ್ಲಿ ಐದು ಬಾರಿ ಎದುರಾಗುವ ಮೂಲಕ ಒಂದು ಪಂದ್ಯದಲ್ಲಿ ಮಲೇಷ್ಯಾ ಜಯ ಗಳಿಸಿದರೆ, ನಾಲ್ಕು ಪಂದ್ಯಗಳಲ್ಲಿ ನೆದರ್‌ಲೆಂಡ್ ಗೆದ್ದಿದೆ.

Related Articles