Friday, November 22, 2024

ಹಾಕಿ ಕರ್ನಾಟಕಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷ

ಸ್ಪೋರ್ಟ್ಸ್ ಮೇಲ್ ವರದಿ

2016-17 ಮತ್ತು 2017=18ರ ವಾರ್ಷಿಕ ಮಹಾಸಭೆಯನ್ನು ನಡೆಸಿದ ಹಾಕಿ ಕರ್ನಾಟಕ  ೨೦೨೨ರ ವರೆಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಉದ್ಯಮಿ ಎಸ್.ವಿ.ಎಸ್. ಸುಬ್ರಹ್ಮಣ್ಯ ಗುಪ್ತಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭಾರತ ಹಾಕಿ ತಂಡದ ಮಾಜಿ ಆಟಗಾರ ಡಾ. ಎ.ಬಿ. ಸುಬ್ಬಯ್ಯ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಪಿ.ಎ. ಅಯ್ಯಪ್ಪ ಕಾರ್ಯನಿರ್ವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಹಾಕಿ ತಂಡದ ಮಾಜಿ ನಾಯಕ ವಿ.ಆರ್. ರಘುನಾಥ್ ಹಾಕಿ ಕರ್ನಾಟಕದ  ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
೨೪ ಜಿಲ್ಲಾ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಾಕಿ ಇಂಡಿಯಾದಿಂದ ಭೋಲನಾಥ್ ವೀಕ್ಷಕರಾಗಿ ಆಗಮಿಸಿದ್ದರು. ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ಕಾರ್ಯದರ್ಶಿ ಅನಂತ ರಾಜು ವೀಕ್ಷಕರಾಗಿದ್ದರು. ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ- ಎಸ್ ವಿ ಎಸ್. ಸುಬ್ರಹ್ಮಣ್ಯ ಗುಪ್ತಾ,
ಪ್ರಧಾನ ಕಾರ್ಯದರ್ಶಿ- ಡಾ. ಎ.ಬಿ. ಸುಬ್ಬಯ್ಯ
ಖಜಾಂಚಿ- ಪಿ.ಎ. ಅಯ್ಯಪ್ಪ
ಹಿರಿಯ  ಉಪಾಧ್ಯಕ್ಷ – ರಿಕಿ ಗಣಪತಿ
ಉಪಾಧ್ಯಕ್ಷರು- ವಿ.ಆರ್. ರಘುನಾಥ್, ಪವಿನ್ ಪೊನ್ನಣ್ಣ ಎ, ಚಂಪಾ ದಿಲೀಪ್, ಜಮುನಾ ಅನೂಪ್.
ಜಂಟಿ  ಕಾರ್ಯದರ್ಶಿಗಳು- ಹೀರಾ ಶೆಟ್ಟಿ, ಲಕ್ಷ್ಮೀ ಸುಬೇದಾರ್, ಕೆ.ಕೆ. ಪೂಂಚಾ, ಬಿ.ಜೆ. ಕಾರಿಯಪ್ಪ, ಎಸ್.ಬಿ. ರಮೇಶ್.
ಕಾರ್ಯಕಾರಿ ಸಮಿತಿ 
ವಿಕ್ರಮ್ ಕಾಂತ್, ಸೋಮಣ್ಣ ಕೆ.ಎಂ. ವಿನಯ್ ವಿಎಸ್. ನೀಲೇಶ್ ಕೊಗೆಟಿರಾ, ಕಂಬೆಯಾಂಡ ಮೋಹನ್, ಕೀರ್ತಿಕಾ ಕೆ.ಕೆ, ಅಪ್ಪಣ್ಣ ಕೆ.ಎಸ್. ಚೆನಯ್ಯಣ್ಣ ಎ.ಬಿ.

Related Articles