Friday, November 22, 2024

ಡ್ರಾಗೆ ತೃಪ್ತಗೊಂಡ ಭಾರತ

ಭುವನೇಶ್ವರ: 

ಸಾವಿರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ವಿಶ್ವಕಪ್ ಟೂರ್ನಿಯ ಪಂದ್ಯ ಅಂತಿಮವಾಗಿ ಡ್ರಾಗೆ ಮುಕ್ತಾಯವಾಯಿತು. ಇದರೊಂದಿಗೆ ಎರಡನೇ ಗೆಲುವಿನ ಆಶಯದಲ್ಲಿದ್ದ ಉಭಯ ತಂಡಗಳಿಗೆ ತೀವ್ರ ನಿರಾಸೆ ಉಂಟಾಯಿತು.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ  ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಆರಂಭದಿಂದಲೂ ಭಾರಿ ಕಾದಾಟ ನಡೆಸಿದವು. 8ನೇ ನಿಮಿಷದಲ್ಲೆೆ ಹೆಂಡ್ರಿಕ್ ಅಲೆಗ್ಸಾಾಂಡರ್ ಬೆಲ್ಜಿಯಂಗೆ  ಗೋಲಿನ ಖಾತೆ ತೆರೆದರು. ಇದರೊಂದಿಗೆ ಆರಂಭದಲ್ಲಿ ಬೆಲ್ಜಿಯಂ, ಭಾರತ ವಿರುದ್ಧ 1-0 ಮುನ್ನಡೆ ಪಡೆಯಿತು.
ನಂತರ ಎಚ್ಚೆೆತ್ತುಕೊಂಡ ಭಾರತ ಆಕ್ರಮಣಕಾರಿ ಆಟಕ್ಕೆೆ ಮೊರೆ ಹೋಯಿತು. 39ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗಳಿಸಿದ ಗೋಲಿನಿಂದ ಭಾರತ 1-1 ಸಮಬಲ ಮಾಡಿಕೊಂಡಿತು. ನಂತರ, 47ನೇ ನಿಮಿಷದಲ್ಲಿ ಸಿಮ್ರಾನ್‌ಜಿತ್ ಸಿಂಗ್ ಗಳಿಸಿದ ಗೋಲು ತಂಡಕ್ಕೆೆ 2-1 ಮುನ್ನಡೆ ಸಿಕ್ಕಿತು. ಇದರಿಂದ ಕೆರಳಿದ ಬೆಲ್ಜಿಯಂ ಆಟಗಾರರು, ಭಾರಿ ಕಾದಾಟಕ್ಕೆೆ ಇಳಿದರು. 56ನೇ ನಿಮಿಷದಲ್ಲಿ ಗೌನಾರ್ಡ್ ಸಿಮೊನ್ ಗೋಲು ಗಳಿಸುವ ಮೂಲಕ 2-2 ಬೆಲ್ಜಿಯಂ ಸಮಬಲ ಸಾಧಿಸಿಕೊಂಡಿತು. ಅಂತಿಮವಾಗಿ ಪಂದ್ಯ ಡ್ರಾಗೆ ಮುಗಿಯಿತು.

Related Articles