ಕರಾಚಿ:
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತಂಡ ಇದೇ 28 ರಿಂದ ಓಡಿಶಾದ ಭುವನೇಶ್ವರದಲ್ಲಿ ನೆಡಯುವ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
ವಿಶ್ವಕಪ್ ಭಾಗವಹಿಸಲು ಪಾಕಿಸ್ತಾನ ತಂಡಕ್ಕೆ ತಗುಲುವ ಖರ್ಚು ಭರಿಸಲು ಪಾಕಿಸ್ತಾನ ಹಾಕಿ ಫೆಡರೇಷನ್, ಕ್ರಿಕೆಟ್ ಮಂಡಳಿಗೆ ಸಾಲ ನೀಡುವಂತೆ ಮನವಿ ಮಾಡಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದನ್ನು ತಿರಸ್ಕಾರ ಮಾಡಿದೆ. ಆದ್ದರಿಂದ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವುದು ಇನ್ನೂ ಸ್ಪಷ್ಟವಾಗಿಲ್ಲ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಳಿ ಸಾಲ ನೀಡುವಂತೆ ಮನವಿ ಸಲ್ಲಿಸಲು ಗುರವಾರ ದಿನಾಂಕ ನಿಗದಿಯಾಗಿತ್ತು. ಆದರೆ, ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನೂ ಕೆಲವೇ ದಿನಗಳ ಬಾಕಿ ಇರುವುದರಿಂದ ಫೋನ್‌ನಲ್ಲಿ ಮಂಡಳಿಯ ಅಧ್ಯಕ್ಷ ಇಹ್ಸಾನ್ ಮನಿ ಅವರನ್ನು ಸಂಪರ್ಕಿಸಲಾಯಿತು. ಆದರೆ, 2000 ರಲ್ಲಿ ನೀಡಿದ್ದ ಸಾಲವೇ ಇನ್ನೂ ಮರುಪಾವತಿಸಿಲ್ಲ. ಹಾಗಾಗಿ, ಮತ್ತೊಮ್ಮೆ ಸಾಲ ನೀಡಲಾಗುವುದಿಲ್ಲ ಎಂದು ಕ್ರಿಕೆಟ್ ಮಂಡಳಿ ಅಧ್ಯಕ್ಷರು ನಿರಾಕರಿಸಿದ್ದಾರೆ. ಹಾಗಾಗಿ, ತಂಡದ ಖರ್ಚು ಭರಿಸುವ ಮೂಲಗಳು ಇನ್ನೂ ಲಭ್ಯವಾಗಿಲ್ಲ ಎಂದು ಹಾಕಿ ತಂಡದ ತರಬೇತುದಾರ ತಾಕೀರ್ ದಾರ್ ತಿಳಿಸಿದ್ದಾರೆ.