ಏಜೆನ್ಸಿಸ್ಮ ಲೇಷ್ಯಾ:
ವರುಣ್ ಕುಮಾರ್ (24ನೇ ನಿಮಿಷ) ಹಾಗೂ ಸಿಮ್ರಾನ್ಜೀತ್ ಸಿಂಗ್ (55ನೇ ನಿಮಿಷ) ಅವರು ಗಳಿಸಿದ ಗೋಲಿನ ನೆರವಿನಿಂದ ‘ಭಾರತ ತಂಡ ಏಷ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು 2-0 ಗೋಲಿನಿಂದ ಮಣಿಸಿ ಅಜ್ಲಾನ್ ಶಾ ಹಾಕಿ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಕಂಡಿದೆ. ಪಂದ್ಯದುದ್ದಕ್ಕೂ ಸ್ಥಿರ ಪ್ರದರ್ಶನ, ದಾಳಿಯಲ್ಲಿ ಏಕಾಗ್ರತೆ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಸಮತೋಲವನ್ನು ಕಾಯ್ದುಕೊಂಡ ‘ಭಾರತ ತಂಡ ಬಲಿಷ್ಠ ಜಪಾನ್ ವಿರುದ್ಧ ಜಯ ಗಳಿಸಲು ಪ್ರಮುಖ ಕಾರಣವಾಯಿತು.
ಪಂದ್ಯದ ಮೊದಲ ಕ್ವಾರ್ಟರ್ ವಿ‘ಭಾಗ ಗೋಲಿಲ್ಲದೆ ಅಂತ್ಯಗೊಂಡಿತು. ಎರಡನೇ ಅವಧಿಯ ಎಂಟನೇ ನಿಮಿಷದಲ್ಲಿ ‘ಭಾರತಕ್ಕೆ ಪೆನಾಲ್ಟಿ ಗೋಲಿನ ಅವಕಾಶ. ವರುಣ್ ಕುಮಾರ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿ‘ಭಾಯಿಸಿ ತಂಡಕ್ಕೆ 1-0 ಮುನ್ನಡ ಕಲ್ಪಿಸಿದರು. 24ನೇ ನಿಮಿಷದಲ್ಲಿ ದಾಖಲಾದ ಈ ಗೋಲು ಜಪಾನ್ ತಂಡದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡಿತು.
ಮಿಡ್ಫೀಲ್ಡ್ನಲ್ಲಿ ಅನುಭವಿ ಆಟಗಾರರಾದ ಮನ್ಪ್ರೀತ್ ಸಿಂಗ್ ಹಾಗೂ ಕೊಥಾಜಿತ್ ಸಿಂಗ್ ಜಪಾನ್ ತಂಡಕ್ಕೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಎರಡನೇ ಅವಧಿಯ ಅಂತಿಮ ಕ್ಷಣದಲ್ಲಿ ಸುಮಿತ್ ಕುಮಾರ್ಗೆ ಗೋಲು ಗಳಿಸುವ ಅವಕಾಶ ಸಿಕ್ಕರೂ ಇಟ್ಟ ಗುರಿಮಾತ್ರ ಗೋಲ್ಬಾಕ್ಸ್ ತಲಪುವಲ್ಲಿ ವಿಲವಾಗಿತ್ತು. ಮೂರನೇ ಕ್ವಾರ್ಟರ್ನಲ್ಲಿ ಜಪಾನ್ನ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಅನುಭವಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಜಪಾನ್ ಸಮಬಲಕ್ಕೆ ಅವಕಾಶ ನೀಡಲಿಲ್ಲ. 55ನೇ ನಿಮಿಷದಲ್ಲಿ ಜಪಾನ್ ತಂಡ ಹೆಚ್ಚುವರಿ ಆಟಗಾರನಿಗಾಗಿ ಗೋಲ್ಕೀಪರ್ಗೆ ಮುಕ್ತ ಅವಕಾಶ ನೀಡಿತು. ‘ಭಾರತ ಇದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿತು. ಸಿಮ್ರಾನ್ಜೀತ್ ಗಳಿಸಿದ ಗೋಲಿನಿಂದ ಭಾರತ 2-0 ಗೋಲಿನಿಂದ ಜಯ ಖಚಿತಪಡಿಸಿಕೊಂಡಿತು. ಎರಡು ನಿಮಿಷ ಬಾಕಿ ಇರುವಾಗ ಜಪಾನ್ಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಗೋಲಾಗಲಿಲ್ಲ. ಏಷ್ಯನ್ ಗೇಮ್ಸ್ ಚಾಂಪಿಯನ್ ವಿರುದ್ಧ ಆರಂಭದಲ್ಲೇ ಸಿಕ್ಕ ಈ ಜಯ ತಂಡದ ಮನೋಬಲವನ್ನು ಹೆಚ್ಚಿಸಿತು. ‘ಭಾನುವಾರ ‘ಭಾರತ ತಂಡ ಕೊರಿಯಾ ವಿರುದ್ಧ ಸೆಣಸಲಿದೆ. ವರುಣ್ ಕುಮಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.