Thursday, October 31, 2024

ಕೊನೆಗೂ ಪಾಕಿಸ್ತಾನ ಹಾಕಿಗೆ ಪ್ರಾಯೋಜಕರು ಸಿಕ್ಕರು

ಕರಾಚಿ:

ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಪಾಕಿಸ್ತಾನ ಹಾಕಿ ಫೆಡರೇಷನ್‍ಗೆ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಪ್ರಾಂಚೈಸಿ ಪೇಶಾವರ ಝೈಮಿ ತಂಡದ ಮಾಲೀಕ ಜಾವೆದ್ ಅಫ್ರಿದಿ ಆಸರೆಯಾಗಿದ್ದಾರೆ. ಹಾಗಾಗಿ, ಭಾರತದಲ್ಲಿ ನಡೆಯುವ ಹಾಕಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಭಾಗವಹಿಸುತ್ತಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಷನ್ ಕಾರ್ಯದರ್ಶಿ ಶಹಬಾಜ್ ಅಹಮದ್ ತಿಳಿಸಿದ್ದಾರೆ.

ಪಾಕಿಸ್ತಾನ ಹಾಕಿ ಹಿರಿಯರ ಹಾಗೂ ಕಿರಿಯರ ತಂಡದ ಅಂತಾರಾಷ್ಟ್ರೀಯ ಪ್ರವಾಸಗಳಿಗೂ ಜಾವೆದ್  ಅಫ್ರಿದಿ ಅವರು ಪ್ರಾಯೋಜಕತ್ವ ನೀಡಲಿದ್ದಾರೆ. ದೇಶೀಯ ಟೂರ್ನಿಗಳಿಗೂ ಸಹಕರಿಸಲಿದ್ದಾರೆ. 2020ರ ವರೆಗೆ ಈ ಒಂಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ಪ್ರಾಯೋಜಕತ್ವದ ಮೊತ್ತವನ್ನು ಬಹಿರಂಗಪಡಿಸಲು ನಿರಾಕರಿಸಿರುವ ಜಾವೆದ್ ಅಫ್ರಿದಿ ದೇಶದ ಹಾಕಿ ಕ್ರೀಡೆಗೆ ಸಹಕಾರ ನೀಡಲಾಗುವುದು ಎಂದಿದ್ದಾರೆ, ಇದರಿಂದ ಪಾಕಿಸ್ತಾನ ಹಾಕಿ ತಂಡಕ್ಕೆ ಎದುರಾಗಿದ್ದ ಆರ್ಥಿಕ ಸಂಕಷ್ಟ ಶಮನವಾಯಿತು. ಇದೀಗ, ಭುವನೇಶ್ವರದಲ್ಲಿ 28ರಿಂದ ಆರಂಭವಾಗುವ ವಿಶ್ವಕಪ್ ಟೂರ್ನಿಗೆ ಪಾಕ್ ಆಗಮಿಸಲಿದೆ.

Related Articles