Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

AIU ಅಂತರ್‌ ವಿವಿ ಬ್ಯಾಡ್ಮಿಂಟನ್‌ ಬೆಂಗಳೂರು ಉತ್ತರಕ್ಕೆ ಜಯ

ಬೆಂಗಳೂರು: ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ (AIU), ಬೆಂಗಳೂರು ಉತ್ತರ ವಿಶ್ವನಿದ್ಯಾನಿಲಯ ಹಾಗೂ ನ್ಯೂ ಹಾರಿಜಾನ್‌ ಕಾಲೇಜು ಸಂಯಕ್ತ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಆತಿಥೇಯ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಜಯದೊಂದಿಗೆ ಅಭಿಯಾನ ಆರಂಭಿಸಿವೆ. Host Bangalore North University registered victories at AIU Inter University Ball Badminton Championship

ದಿನದ ಮೊದಲ ಪಂದ್ಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಮೌಲಾನಾ ಆಜಾದ್‌ ವಿಶ್ವವಿದ್ಯಾನಿಲಯದ ವಿರುದ್ಧ ವಾಕ್‌ಓವರ್‌ ಪಡೆದು ಮುನ್ನಡೆಯಿತು. ನಂತರ ಎರಡನೇ ಪಂದ್ಯದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಲಿಯಂ ಎನರ್ಜಿ ವಿರುದ್ಧ 35-12, 35-18 (2-0) ಅಂತರದಲ್ಲಿ ಜಯ ಗಳಿಸಿತು. ದಿನದ ಮೂರನೇ ಪಂದ್ಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಎಸ್‌ಎಲ್‌ಎನ್‌ಎಸ್‌ಬಿಎಸ್‌ ದೆಹಲಿ ವಿಶ್ವವಿದ್ಯಾನಿಲಯದ ವಿರುದ್ಧ 35-09, 35-16 ಅಂತರದಲ್ಲಿ ವಿಜಯ ಸಾಧಿಸಿತು.

ದಾವಣಗೆರೆ ವಿಶ್ವವಿದ್ಯಾನಿಲಯ 20-35, 35-27, 35-30 (2-1) ಅಂತರದಲ್ಲಿ ಲಲಿತ ನಾರಾಯಣ ಮಿತ್ತಲ್‌ ವಿಶ್ವವಿದ್ಯಾನಿಲಯದ ವಿರುದ್ಧ ರೋಚಕ ಜಯ ಗಳಿಸಿತು. ಇದಕ್ಕೂ ಮುನ್ನ ದಾವಣಗೆರೆ ವಿಶ್ವವಿದ್ಯಾನಿಲಯ ತನ್ನ ಮೊದಲ ಪಂದ್ಯದಲ್ಲಿ ಎಸ್‌ಆರ್‌ಟಿಎಂ ವಿಶ್ವವಿದ್ಯಾನಿಯಲದ ವಿರುದ್ಧ 35-31, 31-35, 35-33 (2-1) ಅಂತರದಲ್ಲಿ ಜಯ ಗಳಿಸಿತ್ತು.  ಬೆಂಗಳೂರು ವಿಶ್ವವಿದ್ಯಾನಿಲಯ 35-16, 35-20 (2-1) ಅಂತರದಲ್ಲಿ ಹಾಸನ ವಿಶ್ವವಿದ್ಯಾನಿಲಯದ ವಿರುದ್ಧ ಜಯ ಗಳಿಸಿ ಮುನ್ನಡೆಯಿತು. ಬೆಂಗಳೂರು ವಿಶ್ವವಿದ್ಯಾನಿಲಯವು ತನ್ನ ಮೊದಲ ಪಂದ್ಯದಲ್ಲಿ ಶಿವಮೊಗ್ಗದ ಕೆಎಸ್‌ಎನ್‌ಯು ವಿಶ್ವವಿದ್ಯಾನಿಲಯದ ವಿರುದ್ಧ 35-27, 35-26 (2-1) ಅಂತರದಲ್ಲಿ ಜಯ ಗಳಿಸಿತ್ತು.

ಬಳ್ಳಾರಿಯ ಶ್ರೀ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯವು ಕವಯಿತ್ರಿ ಬಿ ಚಾವು ವಿಶ್ವವಿದ್ಯಾನಿಲಯದ ವಿರುದ್ಧ 35-26, 35-19 ಅಂತರದಲ್ಲಿ ಜಯ ಗಳಿಸಿತು.

ಮಂಗಳೂರು ವಿಶ್ವವಿದ್ಯಾನಿಲಯವು ಪಾಟಲೀಪುತ್ರ ವಿಶ್ವವಿದ್ಯಾನಿಲಯದ ವಿರುದ್ಧ 35-28, 35-29 (2-0) ಅಂತರದಲ್ಲಿ ಮೊದಲ ಪಂದ್ಯದಲ್ಲಿ ಜಯ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದ ವಿರುದ್ಧ 35-17, 37-35 (2-0) ಅಂತರದಲ್ಲಿ ಜಯ ಗಳಿಸಿ ಮುನ್ನಡೆಯಿತು.


administrator