Thursday, November 21, 2024

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಲಾರ್ಡ್

ಲಂಡನ್:ಕ್ರಿಸ್ ವೋಕ್ಸ್ (ಔಟಾಗದೆ 120) ಹಾಗೂ ಜಾನಿ ಬೈರ್‌ಸ್ಟೋವ್ (93) ಅವರ ಅದ್ಭುತ ಬ್ಯಾಟಿಂಗ್‌ನೆರವಿನಿಂದ  ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದೆ.

 ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 107 ರನ್‌ಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 250 ರನ್‌ಗಳ ಮುನ್ನಡೆ ಕಂಡಿದೆ. 159 ಎಸೆತಗಳನ್ನೆದುರಿಸಿದ ಕ್ರಿಸ್ ವೋಕ್ಸ್  18 ಬೌಂಡರಿ ನೆರವಿನಿಂದ ಅಜೇಯ120 ರನ್ ಗಳಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಬೈರ್‌ಸ್ಟೋವ್ 144 ಎಸೆತಗಳನ್ನೆದುರಿಸಿ 12 ಬೌಂಡರಿ ನೆರವಿನಿಂದ 93 ರನ್ ಗಳಿಸಿ ಶತಕದಿಂದ ವಂಚಿತರಾದರು. ಆರನೇ ವಿಕೆಟ್ ಜತೆಯಾಟದಲ್ಲಿ ವೋಕ್ಸ್ ಹಾಗೂ ಬೈರ್‌ಸ್ಟೋವ್ 189 ರನ್ ಗಳಿಸಿ ಇಂಗ್ಲೆಂಡ್‌ನ ಬೃಹತ್ ಮುನ್ನಡೆಗೆ ಕಾರಣದಾರು.
ಒಂದು ಹಂತದಲ್ಲಿ ಇಂಗ್ಲೆಂಡ್ 89 ರನ್ ಗಳಿಸಿ4೪ ಅಮೂಲ್ಯ ವಿಕೆಟ್ ಕಳೆದುಕೊಂಡಿತ್ತು.  ಭಾರತದ ಪರ ಮೊಹಮ್ಮದ್ ಶಮಿ (74ಕ್ಕೆ 3) ಹಾಗೂ ಹಾರ್ದಿಕ್ ಪಾಂಡ್ಯಾ (66ಕ್ಕೆ2೨) ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಇಂಗ್ಲೆಂಡ್‌ನ ರನ್ ಗಳಿಕೆಗೆ ಕಡಿವಾಹಣ ಹಾಕಲಾಗಲಿಲ್ಲ. ಮೊದಲ ದಿನದ ಪಂದ್ಯ ಮಳೆಗೆ ಬಲಿಯಾದ ಕಾರಣ ಇನ್ನು ಎರಡು ದಿನಗಳ ಪಂದ್ಯ ಬಾಕಿ ಉಳಿದಿದ್ದು, ಭಾರತ ತಂಡ ಮತ್ತೊಂದು ಸೋಲಿನ ಆತಂಕದಲ್ಲಿದೆ.

Related Articles