Wednesday, December 4, 2024

ಮನೆಯಲ್ಲಿ ಹೀರೋ ಹೊರಗಡೆ ಜೀರೋ

ಲಾರ್ಡ್ಸ್:ಮನೆಯಂಗಣದಲ್ಲಿ ಮಿಂಚಿ ಹೊರಗಡೆ ಸೋಲುವ ಭಾರತದ ನಡೆ ಮತ್ತೆ ಮುಂದುವರಿದಿದೆ. ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 159 ರನ್‌ಗಳ ಹೀನಾಯ ಸೋಲನುಭವಿಸಿದ  ಭಾರತ ಐದು ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆ ಕಂಡಿದೆ.

ದ್ವಿತೀಯ ಇನಿಂಗ್ಸ್‌ನಲ್ಲಿ  ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿ ಡಿಕ್ಲೇರ್ ಷೋಷಿಸಿತ್ತು. ಕ್ರಿಸ್ ವೋಕ್ಸ್ ಅಜೇಯ 137 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಭಾರತ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 130 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಆರ್. ಅಶ್ವಿನ್ ಹೊರತುಪಡಿಸಿದರೆ  ಉಳಿದ ಆಟಗಾರರು ವೇಗದ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಲರಾದರು. ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ 4 ವಿಕೆಟ್ ಗಳಿಸಿ ತಂಡದ ಜಯಕ್ಕೆ ಕಾರಣದಾರು.
ಭಾರತ 130, ವೋಕ್ಸ್ 137*
 ಭಾರತದ ಎಲ್ಲ ಆಟಗಾರರು ಗಳಿಸಿದ ರನ್ ಕ್ರಿಸ್ ವೋಕ್ಸ್ ಒಬ್ಬರೇ ಗಳಿಸಿದ ಮೊತ್ತವನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಅದ್ಭುತ ಪ್ರದರ್ಶನ ತೋರಿದ ವೋಕ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 252 ನಿಮಿಷಗಳ ಕಾಲ ಕ್ರೀಸಿನಲ್ಲಿದ್ದ ವೋಕ್ಸ್ 177 ಎಸೆತಗಳನ್ನು ಎದುರಿಸಿ 21 ಬೌಂಡರಿ ನೆರವಿನಿಂದ ಅಜೇಯ 137 ರನ್ ಗಳಿಸಿದರು.  ಭಾರತ ಎಲ್ಲ ಆಟಗಾರರು ಗಳಿಸಿದ್ದ ಕೇವಲ 17 ಬೌಂಡರಿ. ಅಶ್ವಿನ್ ಮಾತ್ರ ಕೆಲಹೊತ್ತ ಇಂಗ್ಲೆಂಡ್‌ನ ಬೌಲಿಂಗ್ ದಾಳಿಯನ್ನು ಎದುರಿಸಿ 33ರನ್ ಗಳಿಸಿದ್ದು ವಿಶೇಷವಾಗಿತ್ತು.
ರಾಹುಲ್ ವೈಫಲ್ಯ
 ಟಿ 20 ಪಂದ್ಯಗಳಲ್ಲಿ ಅಬ್ಬರದ ಆಟವಾಡಿದ್ದ ರಾಹುಲ್‌ಟೆಸ್ಟ್‌ನಲ್ಲಿ ಮಾತ್ರ ಕ್ರಿಕೆಟ್‌ನ ಪಾಠ ಕಲಿಯುತ್ತಿರುವವರಂತೆ ಆಡಿದರು. ಎರಡು ಪಂದ್ಯಗಳಲ್ಲಿ ರಾಹುಲ್ ಗಳಿಸಿದ್ದು ಕೇವಲ 35ರನ್. ಮೊದಲ ಇನಿಂಗ್ಸ್‌ನಲ್ಲಿ 4 ಮತ್ತು 13, ಎರಡನೇ ಇನಿಂಗ್ಸ್‌ನಲ್ಲಿ 8 ಮತ್ತು 10 ಇದು ರಾಹಲ್ ಎರಡು ಟೆಸ್ಟ್ ಪಂದ್ಯಗಳಲ್ಲಿ ತೋರಿದ ಪ್ರದರ್ಶನ.

Related Articles