Thursday, April 25, 2024

‘ಶಾ’ಬ್ಬಾಸ್ ಪ್ರಥ್ವಿ

ಏಜೆನ್ಸಿಸ್ ರಾಜ್ ಕೋಟ್  

ಯುವ ಆಟಗಾರ ಪ್ರಥ್ವಿ ಶಾ ರಾಜ್ ಕೋಟ್ ನಲ್ಲಿ   ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಅತ್ಯಂತ ಕಿರಿಯ ಆಟಗಾರರೆನಿದರು. ಸಚಿನ್ ತೆಂಡೂಲ್ಕರ್ ಭಾರತದ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ.

154 ಎಸೆತಗಳನ್ನು ಎದುರಿಸಿದ ಶಾ 19 ಬೌಂಡರಿ ನೆರವಿನಿಂದ 134 ರನ್ ಗಳಿಸಿದರು.

18 ವರ್ಷ  329 ದಿನಗಳ ಪ್ರಾಯದ ಶಾ, ಭಾರತದ ಪರ ಟೆಸ್ಟ್ ಪಂದ್ಯವನ್ನಾಡಿದ 293ನೇ ಆಟಗಾರ. ಸಚಿನ್ ತೆಂಡೂಲ್ಕರ್ ಶತಕ ಗಳಿಸಿದಾಗ 17 ವರ್ಷ 107 ದಿನಗಳು. ಶಾ  ಭಾರತದ ಪರ ಶತಕ ಗಳಿಸಿದ ಅತ್ಯಂತ ಕಿರಿಯ ಆರಂಭಿಕ ಆಟಗಾರರಲ್ಲೂ ಎರಡನೆಯವರು. ವಿಜಯ್ ಮೆಹ್ರಾ ನ್ಯೂಜಿಲ್ಯಾಂಡ್ ವಿರುದ್ಧ ಶತಕ ಗಳಿಸಿದಾಗ ಅವರಿಗೆ 17 ವರ್ಷ 265 ದಿನಗಳಾಗಿತ್ತು. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಶಾ.  ಒಟ್ಟಾರೆ ಟೆಸ್ಟ್ ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಜಗತ್ತಿನ 106ನೇ ಹಾಗೂ ಭಾರತದ 15ನೇ ಆಟಗಾರ.

ಚೊಚ್ಚಲ ಪಂದ್ಯದಲ್ಲಿ ಶತಕ ಸಾಧನೆ

ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದವರಲ್ಲಿ ಶಾ ಭಾರತದ ೧೫ನೇ ಆಟಗಾರ ಎನಿಸಿದ್ದಾರೆ. ಲಾಲ್ ಅಮರನಾಥ್, ದೀಪಕ್ ಶೋಧನ್, ಎ.ಜಿ. ಕೃಪಾಲ್ ಸಿಂಗ್, ಅಬ್ಬಾಸ್ ಅಲಿ ಬೇಗ್, ಹನುಮಂತ್ ಸಿಂಗ್, ಗುಂಡಪ್ಪ ವಿಶ್ವನಾಥ್, ಸುರೇಂದರ್ ಅಮರನಾಥ್, ಮೊಹಮ್ಮದ್ ಅಜರುದ್ದೀನ್, ಪ್ರವೀಣ್ ಆಮ್ರೆ, ಸೌರವ್ ಗಂಗೂಲಿ, ವೀರೇಂದ್ರ ಸೆಹವಾಗ್, ಸುರೇಶ ರೈನಾ, ಶಿಖರ್ ಧವನ್, ರೋಹಿತ್ ಶರ್ಮಾ.

ವೇಗದ ಶತಕ 

99 ಎಸೆತಗಳಲ್ಲಿ ಶತಕ ಪೂರ್ಣಗೊಳಿಸುವ ಮೂಲಕ ಶಾ ಟೆಸ್ಟ್ ಕ್ರಿಕೆಟ್ ನ ಚೊಚ್ಚಲ ಪಂದ್ಯದಲ್ಲಿ  ಆರಂಭಿಕ ಆಟಗಾರನಾಗಿ ಅತ್ಯಂತ ವೇಗದಲ್ಲಿ ಶತಕ ಗಳಿಸಿದ ಮೂರನೇ ಆಟಗಾರರೆನಿಸಿದರು. 2013ರಲ್ಲಿ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ 85 ಎಸೆತಗಳಲ್ಲಿ ಶತಕ ಗಳಿಸಿದ್ದು, 2004ರಲ್ಲಿ ವಿಂಡೀಸ್ ನ ದ್ವೇನ್ ಸ್ಮಿತ್ 93 ಎಸೆತಗಳಲ್ಲಿ ಶತಕ ಗಳಿಸಿದ್ದರು.

Related Articles