ವಾಂಗರೆ:
ವಿಜಯ್ ಶಂಕರ್(60*) ಹಾಗೂ ಅಭಿಮನ್ಯು ಈಶ್ವರನ್(56) ಅವರ ಅಮೋಘ ಅರ್ಧ ಶತಕಗಳ ನೆರವಿನಿಂದ ಭಾರತ(ಎ) ತಂಡ ಮೂರನೇ ಅನಧಿಕೃತ ಟೆಸ್‌ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ನ್ಯೂಜಿಂಲೆಂಡ್(ಎ) ವಿರುದ್ಧ ಮೊದಲ ದಿನದ ಮುಕ್ತಾಯಕ್ಕೆೆ ಗೌರವ ಮೊತ್ತ ದಾಖಲಿಸಿದೆ.
ಕೊಭಾಮ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ(ಎ) ತಾನು ರೂಪಿಸಿದ ಯೋಜನೆಗೆ ತಕ್ಕಂತೆ ತಂಡದ ಬ್ಯಾಟ್ಸ್ ಮನ್‌ಗಳು ಉತ್ತಮ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ರವಿಕುಮಾರ್ ಸಮರ್ಥ್ ಹಾಗೂ ಅಭಿಮನ್ಯು ಈಶ್ವರನ್ ಜೋಡಿ ಮೊದಲ ವಿಕೆಟ್‌ಗೆ 98 ರನ್ ದಾಖಲಿಸಿ ತಂಡಕ್ಕೆೆ ಭರ್ಜರಿ ಆರಂಭ ನೀಡಿತು.
47 ರನ್ ಗಳಿಸಿ ಸೊಗಸಾಗಿ ಬ್ಯಾಟಿಂಗ್ ಮಾಡಿದ ರವಿಕುಮಾರ್ ಸಮರ್ಥ್ ಅರ್ಧ ಶತಕದಂಚಿನಲ್ಲಿ ಬ್ರೆೆಸ್‌ವೆಲ್‌ಗೆ ಔಟ್ ಆದರು. ಅಭಿಮನ್ಯು ಈಶ್ವರನ್ 108 ಎಸೆತಗಳಲ್ಲಿ 56 ರನ್ ಗಳಿಸಿ ಟಿಕ್ಕರ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ, ಅಂಕಿತ್ ಬಾವ್ನೆೆ(10) ಬೇಗ ನಿರ್ಗಮಿಸಿದರು. ನಂತರ, ನಾಯಕ ಕರುಣ್ ನಾಯರ್(19) ಫರ್ಗೂಸನ್‌ಗೆ ವಿಕೆಟ್ ನೀಡಿ ನಿರಾಸೆಯಿಂದ ಪೆವಿಲಿಯನ್ ಸೇರಿದರು.
ನಂತರ, ಜತೆಯಾದ ಶುಭ್‌ಮನ್ ಗಿಲ್ ಹಾಗೂ ವಿಜಯ ಶಂಕರ್ ಜೋಡಿ 148 ರನ್ ಜತೆಯಾಟವಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಯಿತು. 78 ಎಸೆತಗಳನ್ನು ಎದುರಿಸಿದ ವಿಜಯ್ ಶಂಕರ್ ಅಜೇಯ 60 ರನ್ ಗಳಿಸಿದರೆ, ಗಿಲ್ 47 ರನ್ ಗಳಿಸಿ ಅರ್ಧ ಶತಕದಂಚಿನಲ್ಲಿದ್ದಾಾರೆ. ಒಟ್ಟಾರೆ ಭಾರತ(ಎ) ಮೊದಲ ದಿನ ಮುಕ್ತಾಯಕ್ಕೆೆ 69 ಓವರ್‌ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆೆ 248 ರನ್ ಗಳಿಸಿದೆ.