Friday, March 29, 2024

ಇಂಡಿಯಾ ಬ್ಲೂ ತಂಡಕ್ಕೆ ಚಾಲೆಂಜರ್ ಟ್ರೋಫಿ

ಸ್ಪೋರ್ಟ್ಸ್ ಮೇಲ್ ವರದಿ 

ಪೂನಂ ಯಾದವ್ ಹಾಗೂ ರಾಧಾ  ಯಾದವ್ ಅವರ ಅದ್ಬುತ ಬೌಲಿಂಗ್ ನೆರವಿನಿಂದ ಇಂಡಿಯಾ ರೆಡ್ ತಂಡವನ್ನು 4 ರನ್‌ಗಳ ಅಂತರದಲ್ಲಿ ಸೋಲಿಸಿದ ಇಂಡಿಯಾ ಬ್ಲೂ ತಂಡ ವನಿತೆಯರ ಟಿ20 ಚಾಲೆಂಜರ್ ಟ್ರೋಫಿ ಗೆದ್ದುಕೊಂಡಿದೆ.

ಆಲೂರು ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 132 ರನ್ ಜಯದ ಗುರಿ ಹೊತ್ತ ಇಂಡಿಯಾ ರೆಡ್ ಪೂನಂ ರಾವುತ್ ಅವರ ಅರ್ಧ ಶತಕದ ನಡುವೆಯೂ ಗುರಿ ತಲಪುವಲ್ಲಿ ವಿಲವಾಯಿತು.
ಮಿಥಾಲಿ ರಾಜ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅಂಜುಮ್ ಪಾಟೀಲ್, ಪಡೆ ಹೇಮಲತಾ ಹಾಗೂ ವಿ.ಆರ್. ವನಿತಾ ಅವರು 54 ರನ್ ಜತೆಯಾಟ ಆಡುವುದರೊಂದಿಗೆ ಉತ್ತಮ ಆರಂಭ  ಕಂಡಿತ್ತು. ಮೂರನೇ ವಿಕೆಟ್ ಜತೆಯಾಟದಲ್ಲಿ ಹೆಮಲತಾ ಹಾಗೂ ತಾನಿಯಾ ಭಾಟಿಯಾ 38 ರನ್ ಸೇರಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಲವಾದ ಇಂಡಿಯಾ ಬ್ಲೂ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು.
ಇಂಡಿಯಾ ರೆಡ್ ಅಲ್ಪ ಮೊತ್ತದ ಗುರಿ ತಲುಪಲು ಉತ್ತಮ ಆರಭ  ಕಂಡಿತ್ತು. ರಾವುತ್ ಹಾಗೂ ದೀಪ್ತಿ ಶರ್ಮಾ 87 ರನ್ ಜತೆಯಾಟವಾಡಿದರು.14 ಓವರ್‌ಗಳ ವರೆಗೂ ಬ್ಲೂ ತಂಡಕ್ಕೆ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಆದರೆ ಅನುಜಾ, ಪೂನಂ ಹಾಗೂ ರಾಧಾ  7 ವಿಕೆಟ್ ಹಂಚಿಕೊಳ್ಳುವುದರೊಂದಿಗೆ ರೆಡ್ ತಂಡ ಆಘಾತ ಅನುಭವಿಸಿತು.  ಪೂನಂ ರಾವುತ್ 52 ಹಾಗೂ ದೀಪ್ತಿ ಶರ್ಮಾ 45 ಉತ್ತಮ ಬ್ಯಾಟಿಂಗ್ ನಡುವೆಯೂ ರೆಡ್ ಪಂದ್ಯ ಗೆಲ್ಲುವಲ್ಲಿ ವಿಲವಾಯಿತು. 106 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ರೆಡ್, 115 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು. ಕೊನೆಯ 10 ಎಸೆತಗಳಲ್ಲಿ 17 ರನ್ ಗಳಿಸಬೇಕಾಗಿದ್ದ ರೆಡ್ ಕೇವಲ 12 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪೂನಂ ಯಾದವ್ 25 ರನ್‌ಗೆ 3 ವಿಕೆಟ್ ಗಳಿಸಿದರೆ, ರಾಧಾ  20 ರನ್‌ಗೆ 2 ವಿಕೆಟ್ ಗಳಿಸಿ ಜಯದ ರೂವಾರಿ ಎನಿಸಿದರು.

Related Articles