ಏಜೆನ್ಸೀಸ್ ಜಕಾರ್ತ
ಪುರುಷರ ತಂಡ ಏಷ್ಯನ್ ಗೇಮ್ಸ್‌ನಿಂದ ನಿರ್ಗಮಿಸಿದ ೨೪ ಗಂಟೆಯೊಳಗೆ ಮಹಿಳಾ ತಂಡವೂ ಫೈನಲ್‌ನಲ್ಲಿ ಸೋತು ಚಿನ್ನದಿಂದ ವಂಚಿತವಾಯಿತು. ಮಹಿಳಾ ತಂಡವೂ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಎಡವಿತು. ಇರಾನ್ ೨೭-೨೪ ಅಂತರದಲ್ಲಿ ಗೆದ್ದು ಇದೇ ಮೊದಲ ಬಾರಿಗೆ ಚಿನ್ನಕ್ಕೆ ಮುತ್ತಿಟ್ಟಿತು.
ಗುರುವಾರ ಭಾರತ ಪುರುಷರ ತಂಡ ಕೂಡ ಇರಾನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟಿತ್ತು. ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದ ಹಾಲಿ ಚಾಂಪಿಯನ್ಭಾ ರತ ಬೆಳ್ಳಿ ಗೆಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಇರಾನ್ ತಂಡ ಒತ್ತಡಕ್ಕೆ ಸಿಲುಕದೆ ಮುನ್ನಡೆಯನ್ನು ಕಾಯ್ದುಕೊಂಡು ಚಿನ್ನ ಗೆದ್ದಿತು.
ಪಳ್ಳಿಕಲ್‌ಗೆ ಪದಕ ಖಚಿತ
ಜಪಾನಿನ ಮಿಸಾಕಿ ಕೊಬ್ಯಾಶಿ ವಿರುದ್ಧ ೩-೦ ಅಂತರದಲ್ಲಿ ಜಯ ಗಳಿಸಿದ ಭಾರತದ ದೀಪಿಕಾ ಪಳ್ಳಿಕಲ್ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ. ಸೆಮಿಫೈನಲ್ ತಲುಪಿದ ಇಬ್ಬರು ಆಟಗಾರರಿಗೆ ಕಂಚಿನ ಪದಕ ಲಭಿಸುವುದರಿಂದ ದೀಪಿಕಾ ಅವರ ಪದಕ ಖಚಿತವಾಗಿದೆ.
ಶ್ರೀಕಾಂತ್‌ಗೆ ಶಾಕ್
ಪದಕ ಗೆಲ್ಲುವ ಭವರಸೆ ಮೂಡಿಸಿದ್ದ ಭಾರತ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ವಿಂಗ್ ಕಿ ವಾಂಗ್ ವಿನ್ಸೆಂಟ್ ವಿರುದ್ಧ ನೇರ್ ಗೇಮ್‌ಗಳಿಂದ ಸೋತಿದ್ದಾರೆ. ವಿಶ್ವದಲ್ಲಿ ೨೮ನೇ ಶ್ರೇಯಾಂಕ ಹೊಂದಿರುವ ಹಾಂಕಾಂಗ್‌ನ ವಾಂಗ್ ೩೨ನೇ ಸುತ್ತಿನ ಪಂದ್ಯದಲ್ಲಿ ೨೩-೨೧, ೨೧-೧೯ ಅಂತರದಲ್ಲಿ ಜಯ ಗಳಿಸಿದರು.
ಕಣ್ಣೀರಿಟ್ಟ ದೀಪಾ
ಆರ್ಚರಿಯಲ್ಲಿ ಪದಕ ಗೆಲ್ಲುವ ಫೇವರಿಟ್ ಎಸಿದ ಭಾರತ ತಂಡ ದುರ್ಬಲ ಮಂಗೋಲಿಯಾದ ವಿರುದ್ಧ ಅಚ್ಚರಿಯ ಆಘಾತ ಅನುಭವಿಸಿತು. ರಿಕರ್ವ್ ಮಿಕ್ಸೆಡ್‌ಟೀಮ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಸೋಲನುಭವಿಸುತ್ತಿದ್ದಂತೆ ಅಂಗಣದಿಂದ ಹೊರ ನಡೆದ ದೀಪಾ ಕುಮಾರಿ ಮುಖಕ್ಕೆ ಕರವಸ್ತ್ರ ಸುತ್ತಿ ಕಣ್ಣೀರಿಟ್ಟರು. ಅವರ ತಂಡದ ಸಹ ಆಟಗಾರ ಅತನು ದಾಸ್ ಹಾಗೂ ಕೋಚ್ ಸಾವಿಯಾನ್ ಮಾಂಜಿ ಸಾಂತ್ವಾನಗೊಳಿಸಿದರು.