ಇಂಡಿಯಾ ಪ್ಯಾಡಲ್ ಫೆಸ್ಟಿವಲ್: ಅಲೆಅಲೆಯಲ್ಲೂ ತೇಲಿದ ಸಂಭ್ರಮ
ಮಂಗಳೂರು: ಭಾರತದ ಏಕೈಕ ಅಂತರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಈವೆಂಟ್ ಆಗಿರುವ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ನ ಎರಡನೇ ಸೀಸನ್ ಇಂದು ಸಸಿಹಿತ್ಲು ಬೀಚ್ನಲ್ಲಿ ಉದ್ಘಾಟನೆಯಾಯಿತು. ದಕ್ಷಿಣ ಕನ್ನಡದಿಂದ ಲೋಕಸಭಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025ರ ಅಂತರಾಷ್ಟ್ರೀಯ ಎಸ್ಯುಪಿ ಚಾಂಪಿಯನ್ಷಿಪ್ ಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಹಿಲನ್ ಎಂ.ಪಿ, ಕರ್ನಾಟಕ ಸರ್ಕಾರದ ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ, ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ವಸಂತ್ ಬರ್ನಾಡ್, APP ಸಿಇಒ ಟ್ರಿಸ್ಟನ್ ಬೊಸ್ಫೊರ್ಡ್ ಮತ್ತು WrkWrkನ ವ್ಯವಸ್ಥಾಪಕ ನಿರ್ದೇಶಕ ಶ್ರೀ ರೋಹಿತ್ ಭಟ್ ಉಪಸ್ಥಿತರಿದ್ದರು. India Paddle Festival 2025 Kicks Off with a Grand Opening Ceremony
ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರಾ ಸರ್ಫ್ ಕ್ಲಬ್ ಅವರಿಂದ ಆಯೋಜಿಸಲಾಗಿರುವ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025, WrkWrkನೊಂದಿಗೆ ಸಹಯೋಗದಲ್ಲಿ ಮತ್ತು ಇನ್ಕ್ರೆಡಿಬಲ್ ಇಂಡಿಯಾ ಹಾಗೂ ಕರ್ನಾಟಕ ಟೂರಿಸಂ ಅವರ ಪ್ರಸ್ತುತಿ ಅಡಿಯಲ್ಲಿ ಇಂದಿನಿಂದ ಮಾರ್ಚ್ 9ರವರೆಗೆ ನಡೆಯಲಿದೆ. ಇದು ಅತ್ಯುತ್ತಮ ಎಸ್ಯುಪಿ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಹಬ್ಬಗಳ ಉತ್ಸಾಹಭರಿತ ಸಂಯೋಜನೆಯನ್ನು ನೀಡುವ ಪ್ರತಿಜ್ಞೆ ಮಾಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಇಂಡಿಯಾ ಪ್ಯಾಡಲ್ ಫೆಸ್ಟಿವಲ್ನಂತಹ ಈವೆಂಟ್ಗಳ ಮೂಲಕ ಪ್ರವಾಸೋದ್ಯಮ ಮತ್ತು ನೀರಿನ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಪ್ರಯತ್ನಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸ್ಥಳೀಯ ಸಂಸ್ಥೆಗಳು ಮತ್ತು ಸಂಸ್ಥಾನಗಳು ಒಗ್ಗೂಡಬೇಕು. ಮುಂದಿನ ವರ್ಷ ಈ ಈವೆಂಟ್ ನ ಮಟ್ಟವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಾನು ಬೆಂಬಲವನ್ನುಒದಗಿಸುತ್ತೇನೆ. ಈ ಈವೆಂಟ್ ಕೇವಲ ಸ್ಪರ್ಧೆಯಷ್ಟೇ ಅಲ್ಲ, ಇದು ನಮ್ಮ ಕರಾವಳಿ ಪ್ರವಾಸೋದ್ಯಮ ಮತ್ತು ಕ್ರೀಡಾ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದೆ. ನಮ್ಮ ಕರಾವಳಿಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ ಎಂದಿದ್ದಾರೆ.
ಅಂತರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲರ್ಗಳಾದ ಡ್ಯಾನಿಯಲ್ ಹಸುಲ್ಯೋ, ಕ್ರಿಶ್ಚಿಯನ್ ಆಂಡರ್ಸನ್, ಸೆಕರ್ ಪಚ್ಚೈ ಮತ್ತು ಮಣಿಕಂದನ್ ಯುವ ಸ್ಥಳೀಯ ಪ್ಯಾಡ್ಲರ್ಗಳೊಂದಿಗೆ ಉತ್ಸಾಹಭರಿತ ಪ್ರದರ್ಶನ ರೇಸ್ನಲ್ಲಿ ಭಾಗವಹಿಸಿದರು. ಮುಖ್ಯ ಅತಿಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಂದ ಈ ಈ ರೇಸ್ ಉದ್ಘಾಟನೆಯಾಯಿತು.
ಈ ಈವೆಂಟ್ ಗೆ ಮತ್ತಷ್ಟು ಮೆರಗುಗೊಳಿಸಲು ವಿಭಿನ್ನ ತುಳು ಫೋಕ್ ಬ್ಯಾಂಡ್ ‘ಆಳ್ವ ಕುಟು’ ಅವರ ಲೈವ್ ಸಂಗೀತ ಪ್ರದರ್ಶನ ಕೂಡ ಆಯೋಜಿಸಲಾಯಿತು. ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025 ಮುಂದುವರಿಯುತ್ತಿದ್ದಂತೆ, ಎರಡನೇ ದಿನ ಸಸಿಹಿತ್ಲು ಬೀಚ್ನಲ್ಲಿ ಹೈ-ಆಕ್ಟೇನ್ ರೇಸ್ಗಳು, ಸಾಂಸ್ಕೃತಿಕ ಉತ್ಸವಗಳು ಮತ್ತು ಅಪ್ರತಿಮ ಕ್ರೀಡಾ ಪ್ರದರ್ಶನ ಅಂತರಾಷ್ಟ್ರೀಯ ಎಸ್ಯುಪಿ ಚಾಂಪಿಯನ್ಷಿಪ್ನ ರೋಮಾಂಚಕ ಕ್ಷಣಗಳಿಗೂ ಸಾಕ್ಷಿಯಾಗಲಿದೆ.
ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಜೂನಿಯರ್, ಓಪನ್ ಮೆನ್ಸ್ ಮತ್ತು ವುಮೆನ್ಸ್ ವಿಭಾಗಗಳಿಗಾಗಿ APP ತಾಂತ್ರಿಕ ದೂರದ ರೇಸ್ಗಳನ್ನು ಒಳಗೊಂಡಿದ್ದು, ಇಲ್ಲಿ ಪ್ರಮುಖ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳು ಪರಸ್ಪರ ಸ್ಪರ್ಧಿಸಲಿದ್ದಾರೆ.
ಶನಿವಾರ ಉತ್ಸವಕ್ಕೆ ಹೆಚ್ಚು ರೋಮಾಂಚನವನ್ನು ನೀಡುವ ಮಂತ್ರಾ ಅಡ್ವೆಂಚರ್ ಫಿಲ್ಮ್ ಫೆಸ್ಟಿವಲ್, ಭಾರತದ ಜಾನಪದ ಚಲನಚಿತ್ರಗಳ ಆಯ್ಕೆಯನ್ನು ಪ್ರದರ್ಶಿಸಲಿದೆ. ಈ ಚಿತ್ರಗಳು ದೇಶದಾದ್ಯಂತದ ಸಾಹಸ ಮತ್ತು ಅತಿ ದೈಹಿಕ ಕ್ರೀಡೆಗಳ ಉತ್ಸಾಹವನ್ನು ಒತ್ತಿ ಹೇಳಲಿದೆ.