ಹೊಸದಿಲ್ಲಿ: ಸೋಮವಾರ ಆರಂಭಗೊಂಡ ಮೊದಲ ಖೋ ಖೋ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಪುರುಷರ ತಂಡ ನೇಪಾಳ ನೀಡಿದ ದಿಟ್ಟ ಹೋರಾಟದ ನಡುವೆಯೂ 42-37 ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. India Triumphs Over Nepal in Thrilling Kho Kho World Cup 2025 Opener.
ಮೊದಲ ಟರ್ನ್‌ನಲ್ಲಿ ಭಾರತ ಕೇವಲ 60 ಸೆಕೆಂಟುಗಳ ಅವಧಿಯಲ್ಲಿ ನೇಪಾಳದ ಮೂವರು ಡಿಫೆಂಡರ್ಸ್‌ಗಳನ್ನು ಹೊರಗಟ್ಟುವಲ್ಲಿ ಯಶಸ್ವಿಯಾಯಿತು. ಪ್ರತಿಕ್ ವೈಕರ್ ಹಾಗೂ ರಾಮ್‌ಜಿ ಕಶ್ಯಪ್ ಅವರ ಮಿಂಚಿನ ನೆಗೆತದ ಪರಿಣಾಮ ಮೊದಲ ಅವಧಿ ಮುಗಿಯಲು ಮೂರು ನಿಮಿಷ ಬಾಕಿ ಇರುವಾಗ ಭಾರತ 14 ಅಂಕಗಳಿಂದ ಮುನ್ನಡೆ ಕಂಡಿತು. ನೇಪಾಳದ ಡಿಫೆಂಡರ್ಸ್‌ಗಳನ್ನು ಎರಡು ಬಾರಿ ಹೊರಗಟ್ಟಿತು.
ಎರಡನೇ ಅವಧಿಯಲ್ಲಿ ನೇಪಾಳ ಆರು ಅಂಕ ಗಳಿಸಲು ಒಟ್ಟು ಎರಡು ನಿಮಿಷಗಳನ್ನು ತೆಗೆದುಕೊಂಡಿತು. ಸಚಿನ್ ಭಾರ್ಗೊ ಸ್ಕೈ ಡೈವ್ ಮೂಲಕ ಅದ್ಭುತ ಆಟ ಪ್ರದರ್ಶಿಸುವುದರೊಂದಿಗೆ ಭಾರತ ಮಧ್ಯಂತರದಲ್ಲಿ 24 ಅಂಕ ಗಳಿಸಿತ್ತು. ಇದರಿಂದ ನೇಪಾಳದ ಡ್ರೀಮ್ ರನ್‌ಗೆ ತಡೆಯಾಯಿತು.
ಎರಡನೇ ಅವಧಿಯಲ್ಲಿ ನೇಪಾಳ ದಿಟ್ಟ ಹೋರಾಟ ನೀಡಿತು. ಭಾರತದ ಡಿಫೆಂಡರ್‌ಗಳಿಗೆ ಡ್ರೀಮ್ ರನ್‌ಗೆ ಅವಕಾಶ ಕೊಡಲಿಲ್ಲ. ಈ ಅವಧಿಯಲ್ಲಿ ನೇಪಾಳ 20 ಅಂಕಗಳನ್ನು ಗಳಿಸಿತು. ನೇಪಾಳದ ಆಲ್ರೌಂಡರ್ ಜೋಗಿಂದರ್ ರಾಣಾ ಆಕ್ರಮಣಕಾರಿ ಆಟ ಪ್ರದರ್ಶಿಸಿ ಎರಡು ಡೈವ್ಸ್ ಸೇರಿದಂತೆ ನಾಲ್ಕು ಅಂಗಳನ್ನು ಗಳಿಸಿದರು. ಇದರೊಂದಿಗೆ ನೇಪಾಳದ ದಿಟ್ಟ ಹೋರಾಟ ಮುಂದುವರಿಯಿತು.
ಮೊದಲ ಖೋ ಖೋ ವಿಶ್ವಕಪ್‌ನ ಮೊದಲ ಡ್ರೀಮ್ ರನ್ ಸಾಧನೆ ಮಾಡಿದ ಕೀರ್ತಿಗೆ ನೇಪಾಳದ ಭರತ್ ಸರಣ್ ಭಾಜನರಾದರು. ಆದರೆ ಭಾರತದ ವಿರುದ್ಧ ಮುನ್ನಡೆಯಲು ಇದು ಸಾಕಾಗಲಿಲ್ಲ. ಭಾರತ 24 ರಿಂದ 42 ಅಂಕಗಳಿಗೆ ಜಿಗಿಯಿತು. ನಾಲ್ಕನೇ ಅವಧಿಯಲ್ಲಿ ಭಾರತ 21 ಅಂಕಗಳಿಂದ ಮುನ್ನಡೆ ಕಂಡಿತು. ನಾಲ್ಕನೇ ಅವಧಿಯಲ್ಲಿ ನೇಪಾಳ ಉತ್ತಮ ಪೈಪೋಟಿ ನೀಡಿದರೂ ಐದು ಅಂಕಗಳಿಂದ ಹಿನ್ನಡೆ ಕಂಡು ಸೋಲೊಪ್ಪಿಕೊಂಡಿತು.
ಭಾರತದ ಶಿವ ರೆಡ್ಡಿ ಪಂದ್ಯದ ಉತ್ತಮ ಅಟ್ಯಾಕರ್ ಗೌರವಕ್ಕೆ ಪಾತ್ರರಾದರು. ನೇಪಾಳದ ರೋಹಿತ್ ಕುಮಾರ್ ಉತ್ತಮ ಡಿಫೆಂಡರ್ ಪ್ರಶಸ್ತಿ ಗಳಿಸಿದರು. ಹಾಗೂ ಭಾರತದ ಆದಿತ್ಯ ಗನ್ಪುಲೆ ಪಂದ್ಯದ ಉತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.