ಬರ್ಮಿಂಗ್ ಹ್ಯಾಮ್
ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ೧೯೪ ರನ್ ಜಯದ ಗುರಿ ಹೊತ್ತ ಭಾರತ ೧೬೨ ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ ೩೧ ರನ್ ಗಳ ಸೋಲನುಭವಿಸಿತು. ಬೆನ್ ಸ್ಟೋಕ್ಸ್ ೪ ವಿಕೆಟ್ ಗಳಿಸಿ ಭಾರತದ ಸೋಲಿಗೆ ಪ್ರಮುಖ ಕಾರಣರಾದರು.
ವಿರಾಟ್ ಕೊಹ್ಲಿ (೫೧) ದಿನೇಶ್ ಕಾರ್ತಿಕ್ (೨೦) ಕ್ರೀಸಿನಲ್ಲಿ ಇರುವ ತನಕ ಭಾರತದ ಜಯದ ಹಾದಿ ಸುಗಮ ಆಗಿತ್ತು. ಆದರೆ ಕೊಹ್ಲಿ ಹಾಗೂ ಕಾರ್ತಿಕ್ ನಿರ್ಗಮಿಸಿದ ನಂತರ ಭಾರತ ಸೋಲಿನ ಕಡೆಗೆ ವಾಲಿತು. ಹಾರ್ದಿಕ್ ಪಾಂಡ್ಯ (೩೧) ಕೆಲ ಹೊತ್ತು ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಸಮರ್ಪಕವಾಗಿ ಎದುರಿಸಿದರು. ಆದರೆ ತಂಡವನ್ನು ಸೋಲಿನಿಂದ ಪಾರುಮಾಡಲಾಗಲಿಲ್ಲ. ಸ್ಯಾಮ್ ಕರಮ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
೫ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ೧-೦ಯಲ್ಲಿ ಮುನ್ನಡೆ ಕಂಡುಕೊಂಡಿತು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್– 282
ಭಾರತ ಮೊದಲ ಇನ್ನಿಂಗ್ಸ್ –274
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ –180
ಭಾರತ ದ್ವಿತೀಯ ಇನ್ನಿಂಗ್ಸ್ –162
ಎರಡನೇ ಟೆಸ್ಟ್, ಲಂಡನ್ ನಲ್ಲಿ ಆಗಸ್ಟ್ 9 ರಿಂದ 13