Thursday, October 31, 2024

ಟಿ-ಟ್ವೆಂಟಿಗೆ ಪಂತ್ ಅವಕಾಶ ನೀಡಲು ಧೋನಿ ಕಾರಣ

ತಿರುವನಂತರಪುರಂ:

ಉದಯೋನ್ಮುಖ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಟಿ-20ಯಲ್ಲಿ ಸ್ಥಾನ ನೀಡಬೇಕೆಂಬ ಉದ್ದೇಶದಿಂದಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಮುಂಬರುವ ವಿಂಡೀಸ್ ವಿರುದ್ಧ ಚುಟುಕು ಕ್ರಿಕೆಟ್ ನಿಂದ ದೂರ ಸರಿದಿದ್ದಾರೆಂದು ಭಾರತ ತಂಡದ ನಾಯಕ  ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದರು.

ಆ ಮೂಲಕ ಧೋನಿ ಕ್ರಿಕೆಟ್ ಅಧ್ಯಾಯ ಮುಗಿದು ಹೋಯಿತು ಎಂಬಂತೆ ಎದ್ದಿದ್ದ ಎಲ್ಲ ವಾದ-ವಿವಾದಗಳಿಗೆ ಕೊಹ್ಲಿ ತೆರೆ ಎಳೆದರು.
ಇನ್ನೂ ಮುಂದೆ ಯುವ ಆಟಗಾರಿಗೆ ಅವಕಾಶ ನೀಡಲು ಬಿಸಿಸಿಐ ಆಯ್ಕೆ ಸಮಿತಿ ಧೋನಿ ಅವರನ್ನು ವಿಂಡೀಸ್ ಬಳಿಕ ಆಸೀಸ್ ಸರಣಿಗೂ ಪರಿಗಣಿಸಿಲ್ಲ. ಆದರೆ, ಧೋನಿ ಏಕದಿನ ಮಾದರಿಯಲ್ಲಿ ಮುಂದುವರಿಯಲಿದ್ದಾರೆ ಎಂದರು.

Related Articles