Tuesday, December 3, 2024

ಅಮೆರಿಕದ ಸೇನೆಗೆ ಶಾಕ್‌ ನೀಡಿದ ಭಾರತದ ಯೋಧರು!

ಹೊಸದಿಲ್ಲಿ: ಭಾರತದ ಯೋಧರನ್ನು ಅಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ಸೋತು ಹೋಗುವ ಯೋಧರು ಎಂದು ಗ್ರಹಿಸಿದ್ದರು. ಆದರೆ ಅಲ್ಲಿ ಹೋಗಿರುವುದು ಭಾರತದ ಸೇನೆಯ ಚಾಂಪಿಯನ್ನರು. ಅಮೆರಿಕದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಅನುಭವಿಗಳಿದ್ದರೂ ಭಾರತದ ಯೋಧರು ಯಶಸ್ಸು ಕಂಡು, ಅಮೆರಿಕ ತಂಡವನ್ನು ಹೀನಾಯವಾಗಿ ಸೋಲಿಸಿದ್ದಾರೆ. ಇದು ಸಮರದ ಕತೆಯಲ್ಲ. ಬದಲಾಗಿ ಕ್ರೀಡಾ ಸಮರದ ಯಶ್ಸಿನ ಕತೆ. ಭಾರತದ ಸೇನೆಯ ಪೋಲೋ ತಂಡ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಮೆರಿಕ ಸೇನಾ ತಂಡದ ವಿರುದ್ಧದ ಪೋಲೋ ಚಾಂಪಿಯನ್‌ಷಿಪ್‌ನಲ್ಲಿ 13-10 ಅಂತರದಲ್ಲಿ ರೋಚಕ ಜಯ ಗಳಿಸಿದೆ. Indian Army Defeats US Army in California Polo.

ಈ ಮೂಲಕ ಭಾರತ ಪೋಲೋ ತಂಡ 2019ರ ನಂತರ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದೆ. ಲೆಫ್ಟಿನೆಂಟ್‌ ಕರ್ನಲ್‌ ಪ್ರಥ್ವಿ ಸಿಂಗ್‌, ಲೆಫ್ಟಿನೆಂಟ್‌ ಕರ್ನಲ್‌ ಯತೀಂದರ್‌ ಕುಮಾರ್‌, ಮೇಜರ್‌ ಮೃತ್ಯುಂಜಯ ಸಿಂಗ್‌ ಹಾಗೂ ರಿಸರ್ವ್‌ ಆಟಗಾರ ಲೆಫ್ಟಿನೆಂಟ್‌ ಕರ್ನಲ್‌ ಆರ್‌.ಕೆ. ಗೌತಮ್‌ ಅವರನ್ನೊಳಗೊಂಡ ತಂಡ ಅದ್ಭುತ ಪ್ರದರ್ಶನ ತೋರಿ ಈ ಐತಿಹಾಸಿಕ ಜಯ ಗಳಿಸಿದೆ. ಅಮೆರಿಕ ತಂಡದಲ್ಲಿ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಪ್ರಮುಖ ಆಟಗಾರರಿದ್ದರು. ಭಾರತವನ್ನು ಅತ್ಯಂತ ದುರ್ಬಲ ತಂಡವೆಂದು ಪರಿಗಣಿಸಿದ್ದರು.

Related Articles