Tuesday, December 3, 2024

ಫುಟ್ಬಾಲ್‌: ಸಮಬಲ ಸಾಧಿಸಿದ ಬೆಂಗಳೂರು, ಹೈದರಾಬಾದ್‌

ಹೈದರಾಬಾದ್‌: ಮೊಹಮ್ಮದ್‌ ಯಾಸಿರ್‌ (35ನೇ ನಿಮಿಷ) ಹಾಗೂ ರೆಯಾನ್‌ ವಿಲಿಯಮ್ಸ್‌ (58ನೇ ನಿಮಿಷ) ತಲಾ ಒಂದು ಗೋಲು ಗಳಿಸುವ ಮೂಲಕ ಬೆಂಗಳೂರು ಮತ್ತು ಹೈದರಾಬಾದ್‌ ನಡುವಿನ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಪಂದ್ಯ ಸಮಬಲದಲ್ಲಿ ಕೊನೆಗೊಂಡಿದೆ. Bengaluru FC and Hyderabad FC play out 1-1 draw in Gachibowli

ಇಲ್ಲಿನ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡ್ರಾ ಸಾಧಿಸಿದ ಬೆಂಗಳೂರು ಅಂಕ ಪಟ್ಟಿಯಲ್ಲಿ 8ನೇ ಸ್ಥಾನ ತಲುಪಿತು. ಬೆಂಗಳೂರು ಆಡಿರುವ ಆರು ಪಂದ್ಯಗಳಿಂದ ಐದು ಅಂಕ ಗಳಿಸಿದೆ. ಹೈದರಾಬಾದ್‌ ಇನ್ನೂ ಋತುವಿನ ಮೊದಲ ಜಯಕ್ಕಾಗಿ ಹಾತೊರೆಯುತ್ತಿದೆ.

ಪಂದ್ಯದ ಆರಂಭದಲ್ಲೇ ಬೆಂಗಳೂರಿನ ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಸಂಧೂಗೆ ಬ್ರೆಜಿಲ್ ಮೂಲದ ಮಿಡ್‌ಫೀಲ್ಡರ್‌ ಜೊಆವ್‌ ವಿಕ್ಟರ್‌ ಅವರಿಂದ ಕಠಿಣ ಸವಾಲು, ಆದರೆ ಬಿಎಫ್‌ಸಿಯ ಗೋಡೆಗೆ ಅದನ್ನು ತಡೆಯುವುದು ಕಷ್ಟವಾಗಿರಲಿಲ್ಲ.

ಮೊಹಮ್ಮದ್‌ ಯಾಸಿರ್‌ 35 ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಆತಿಥೇಯ ಹೈದರಾಬಾದ್‌ ತಂಡ ಮೇಲುಗೈ ಸಾಧಿಸಿತು. ಈ ನಡುವೆ ಬೆಂಗಳೂರು ತಂಡ ಸಿಕ್ಕ ಕೆಲವು ಅವಕಾಶಗಳನ್ನು ಕೈ ಚೆಲ್ಲಿತ್ತು. ಅಂತಿಮವಾಗಿ ರೆಯಾನ್‌ ವಿಲಿಯಮ್ಸ್‌ ಗಳಿಸಿದ ಗೋಲಿನಿಂದ ಬೆಂಗಳೂರು ಸಮಬಲ ಸಾಧಿಸಿತು.

Related Articles