Thursday, March 28, 2024

ಸೌತ್ ನಲ್ಲೂ ಬೆಸ್ಟ್ ನಾರ್ತ್ ಈಸ್ಟ್

ಚೆನ್ನೈ  ಅಕ್ಟೋಬರ್ 18

ಬಾರ್ತಲೋಮ್ಯೋ ಒಗ್ಬಚೆ (29, 37, 39ನೇ ನಿಮಿಷ ) ಅವರ ಹ್ಯಾಟ್ರಿಕ್ ಗೋಲು ಹಾಗೂ ರೌಲಿನ್ ಬೊರ್ಗೆಸ್ (54ನೇ ನಿಮಿಷ) ಅವರ ಜಯದ ಗೋಲಿನ ನೆರವಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ವಿರುದ್ಧದ ರೋಚಕ ಪಂದ್ಯದಲ್ಲಿ   4-3 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.

ಪ್ರಥಮಾರ್ಧದಲ್ಲಿ  ಇತ್ತಂಡಗಳು 3-3 ಗೋಲಿನಿಂದ ಸಮಬಲ ಸಾಧಿಸಿದ್ದವ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಚೆನ್ನೈ ಸತತ ಮೂರನೇ ಸೋಲನುಭವಿಸಿತು.

ಸಮಬಲ ಬಲ 3-3

ಬಾರ್ತಲೋಮ್ಯೋ ಒಗ್ಬಚೆ 37 ಹಾಗೂ 39ನೇ ನಿಮಿಷಗಳಲ್ಲಿ ಎರಡು ಗೋಲು ಗಳಿಸಿ ಹ್ಯಾಟ್ರಿಕ್ ಸಾಧನೆ ಮೂಲಕ ಪಂದ್ಯ 3-3 ಗೋಲುಗಳಲ್ಲಿ ಸಮಬಲಗೊಂಡಿತು. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಪ್ರಥಮಾರ್ಧದಲ್ಲಿ ಮುನ್ನವೇ ಆರು ಗೋಲುಗಳು ದಾಖಲಾದವು. ನಾರ್ತ್  ಈಸ್ಟ್ ಯುನೈಟೆಡ್ ದಿಟ್ಟ ಹೋರಾಟ ನೀಡಿ ಸಮಬಲ ಸಾಧಿಸಿತು.

ಚೆನ್ನೈ 3-1

32ನೇ ನಿಮಿಷದಲ್ಲಿ ತೋಹಿ ಸಿಂಗ್ ವೈಯಕ್ತಿಕ ಎರಡನೇ ಗೋಲು ಗಳಿಸುವುದರೊಂದಿಗೆ ಚೆನ್ನೈನಲ್ಲಿ ಗೋಲಿನ ಮಳೆಯಾಯಿತು. ರೊಲ್ ಆಗಸ್ಟೋ ನೀಡಿದ ಪಾಸನ್ನು ತೋಹಿ ಸಿಂಗ್ ಅತ್ಯಂತ ಪ್ರಯಾಸದಲ್ಲಿ ನೆಟ್‌ಗೆ ತಲುಪಿಸುವಲ್ಲಿ ಯಶಸ್ವಿಯಾದರು.

ತಿರುಗೇಟು ನೀಡಿದ ನಾರ್ತ್ ಈಸ್ಟ್

ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಗೋಲಿನ ಮಳೆ. 0-2 ಅಂತರದಿಂದ ಹಿಂದೆ ಬಿದ್ದಿದ್ದ ನಾರ್ತ್ ಈಸ್ಟ್ ಅಂತಿಮವಾಗಿ ಚೇತರಿಸಿಕೊಂಡಿತು. 29ನೇ ನಿಮಿಷದಲ್ಲಿ ಬಾರ್ತ್‌ಲೋಮ್ಯೊ ಒಗ್ಬೆಚೆ ಗಳಿಸಿದ ಗೋಲಿನಿಂದ ತಂಡ ತಕ್ಕ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಫೆಡ್ರಿಕೊ ಗಲ್ಲೆಗೋ ಅವರ ಹೊಡೆತವು ಪೆನಾಲ್ಟಿ ವಲಯದಲ್ಲಿ ತಡೆಯಲ್ಪಟ್ಟಿತು. ಎಲಿ ಸಾಬಿಯಾ ಅವರಿಗೆ ಎರಡು ಬಾರಿ ಚೆಂಡನ್ನು ಬೇರೆಡೆಗೆ ತಳ್ಳುವ ಅವಕಾಶವಿದ್ದಿತ್ತು. ಆದರೆ ಒಗ್ಬೆಚೆ ಅತ್ಯಂತ ಎಚ್ಚರಿಕೆಯಿಂದ ಚೆಂಡನ್ನು ಕರಣ್‌ಜಿತ್ ಸಿಂಗ್ ಅವರನ್ನು ವಂಚಿಸಿ ಗೋಲಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಚೆನ್ನೈ  2-0

ಆಕ್ರಮಣಕಾರಿ ಆಟ ಮುಂದುವರಿಸಿದ ಚೆನ್ನೈಯಿನ್ ತಂಡಕ್ಕೆ 15ನೇ ನಿಮಿಷದಲ್ಲಿ ಎರಡನೇ ಯಶಸ್ಸು. ಈ ಬಾರಿ ಜೆರ್ರಿ ನೀಡಿದ ಪಾಸ್ ಮೂಲಕ ತೋಹಿ ಸಿಂಗ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಭಾರತದ ಆಟಗಾರ ಆರಂಭದಿಂದಲೂ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಪವನ್ ಕುಮಾರ್ ಅವರನ್ನು ವಂಚಿಸಿ ಚೆಂಡನ್ನು ಗೋಲ್ ಬಾಕ್ಸ್ ತಲುಪಿಸುವಲ್ಲಿ ಯಶಸ್ವಿಯಾದರು. ಚೆನ್ನೈಯಿನ್ ತಂಡಕ್ಕೆ ಆರಂಭದಲ್ಲೇ 2-0ಮುನ್ನಡೆ.

ಆರಂಭದಲ್ಲೇ ಉಡುಗೊರೆ

5ನೇ ನಿಮಿಷದಲ್ಲಿ ರೌಲಿಂಗ್ ಬೋರ್ಗಸ್ ನೀಡಿದ ಉಡುಗೊರೆ ಗೋಲಿನಿಂದ ಚೆನ್ನೈಯಿನ್ ತಂಡ ಮುನ್ನಡೆ ಕಾಯ್ದುಕೊಂಡಿತು. ಎಲಿ ಸಾಬಿಯಾ ಹಾಗೂ ಬೋರ್ಗಸ್ ಚೆಂಡಿಗಾಗಿ ಹಣಾಹಣಿ ನಡೆಸುತ್ತಿದ್ದರು. ಇವರಿಬ್ಬರ ಹೋರಾಟದ ನಡುವೆ ಚೆಂಡು ನೆಟ್ ಸೇರಿತ್ತು. ಸಾಬಿಯಾ ತಾನು ಗೋಲು ಗಳಿಸಿದ್ದು ಎಂದು ಸಂಭ್ರಮಿಸಿದ್ದರು. ಆದರೆ ಅದು ಬೋರ್ಗಸ್ ಸ್ಪರ್ಷದೊಂದಿಗೆ ನೆಟ್ ಸೇರಿರುವುದು ಆ ನಂತರ ಸ್ಪಷ್ಟವಾಯಿತು. ಏನೇ ಆದರೂ ಚೆನ್ನೈಯಿನ್ ತಂಡ ಗೋಲಿನೊಂದಿಗೆ ಮೇಲುಗೈ ಸಾಧಿಸಿತು.
ಇಂಡಿಯನ್ ಸೂಪರ್ ಲೀಗ್‌ನ 11ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಹಾಲಿ ಚಾಂಪಿಯನ್ ಚೆನ್ನೆ‘ಯಿನ್ ತಂಡ ಇಂಡಿಯನ್ ಸೂಪರ್ ಲೀಗ್‌ನ ಮೊದಲ ಜಯದ ನಿರೀಕ್ಷೆಯೊಂದಿಗೆ ಅಂಗಣಕ್ಕೆ ಕಾಲಿಟ್ಟಿತು. ತಂಡ ಋತುವಿನ ಮೊದಲ ಅಂಕದ ನಿರೀಕ್ಷೆಯಲ್ಲಿದೆ. ಬೆಂಗಳೂರು ಎಫ್ಸಿ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ತಂಡ 0-1 ಗೋಲಿನಿಂದ ಸೋಲನುಭವಿಸಿತ್ತು. ನಂತರ ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪರಾಭವಗೊಂಡಿತ್ತು

Related Articles