ಚೆನ್ನೈನಲ್ಲೇ ಆರಂಭ, ಚೆನ್ನೈನಲ್ಲೇ ವಿದಾಯ ಹೇಳಿದ ಶರತ್ ಕಮಲ್
ಚೆನ್ನೈ: ಭಾರತದ ಶ್ರೇಷ್ಠ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಲಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ಬಳಿಕ ವೃತ್ತಿಪರ ಟಿಟಿಗೆ ವಿದಾಯ ಹೇಳಲಿದ್ದಾರೆ. Indian TT great Sharath Kamal to call time on glorious career after WTT contender Chennai.
ಚೆನ್ನೈನಲ್ಲೇ ಟೇಬಲ್ ಟೆನಿಸ್ ವೃತ್ತಿ ಬದುಕನ್ನು ಆರಂಬಿಸಿದ ಶರತ್ ಕಮಲ್ ಚೆನ್ನೈನಲ್ಲೇ ವಿದಾಯ ಹೇಳುತ್ತಿರುವುದು ವಿಶೇಷ. ಮಾರ್ಚ್ 25 ರಿಂದ 30 ರವರೆಗೆ ಚೆನ್ನೈನಲ್ಲಿ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ನಡೆಯಲಿದೆ. “ನಾನು ನನ್ನ ಮೊದಲ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ಆಡಿದ್ದು ಚೆನ್ನೈನಲ್ಲೇ, ಕೊನೆಯ ಪಂದ್ಯವನ್ನಾಡುತ್ತಿರುವುದು ಚೆನ್ನೈನಲ್ಲೇ,” ಎಂದು ಸುಮಾರು ಎರಡು ದಶಕಗಳ ಕಾಲ ಭಾರತ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಪ್ರಭುತ್ವ ಸಾಧಿಸಿದ ಶರತ್ ಕಮಲ್ ಹೇಳಿದ್ದಾರೆ.
ಎರಡು ವರ್ಷದ ಮಗುವಾಗಿದ್ದಾಗ ಟಿಟಿ ರಾಕೆಟ್ ಹಿಡಿದಿದ್ದ ಶರತ್ ಕಮಲ್ ಐದು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು ಚಿನ್ನದ ಪದಕಗಳನ್ನು ಗೆದ್ದಿರುವ ಶರತ್ ಕಮಲ್, ಏಷ್ಯನ್ ಗೇಮ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಐದು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡರೂ ಪದಕ ಗೆಲ್ಲಲಾಗಲಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಿದ್ದ 42 ವರ್ಷದ ಶರತ್ ಕಮಲ್ ಈಗಲೂ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್‌ನಲ್ಲಿ ಉತ್ತಮ ರಾಂಕ್‌ನಲ್ಲಿರುವ ಆಟಗಾರ. ಪ್ರಸಕ್ತ ಶರತ್ ಕಮಲ್ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯಲ್ಲಿ ಅಥ್ಲೀಟ್ಸ್ ಕಮಿಷನ್‌ನ ಉಪಾಧ್ಯಕ್ಷರಾಗಿದ್ದಾರೆ.