ಆರ್ಲೇನ್ಸ್ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಆಯುಷ್ ಶೆಟ್ಟಿ
ಹೊಸದಿಲ್ಲಿ: ಫ್ರಾನ್ಸ್‌ನ ಆರ್ಲೇನ್ಸ್‌ನಲ್ಲಿ ನಡೆಯುತ್ತಿರುವ ಆರ್ಲೇನ್ಸ್ ಮಾಸ್ಟರ್ಸ್ 2025ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಚಕ ಜಯ ಗಳಿಸಿದ ಭಾರತದ ಪ್ರತಿನಿಧಿ ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಆಯುಷ್ ಶೆಟ್ಟಿ ಸೆಮಿಫೈನಲ್ ತಲುಪಿದ್ದಾರೆ. India’s Ayush Shetty reached semifinals of Orleans Masters Badminton.
ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ವಿರುದ್ಧ ನಡೆದ ಪಂದ್ಯದಲ್ಲಿ ಆಯುಷ್ 21-16, 21-23, 21-17 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ಪ್ರವೇಸಿದರು. 48ನೇ ರಾಂಕ್ ಹೊಂದಿರುವ ಆಯುಷ್ ಶೆಟ್ಟಿ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 38ನೇ ರಾಂಕ್ ಆಟಗಾರ ಹಾಂಕಾಂಗ್‌ನ ಜಾಸನ್ ಗುನಾವನ್ ವಿರುದ್ಧ 21-17, 21-17 ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಮಾಜಿ ವಿಶ್ವ ಚಾಂಪಿಯನ್ ಸಿಂಗಾಪುರದ ಲೊಹ್ ಕೇನ್ ಯಿವ್ ಅವರಿಗೆ ಆಘಾತ ನೀಡಿರುವುದು ಆಯಷ್ ಅವರ ಅದ್ಭುತ ಸಾಧನೆಯಾಗಿದೆ.
ವಿಶ್ವ ಮಾಜಿ ನಂಬರ್ 1 ಆಟಗಾರ ಭಾರತದ ಕಿದಂಬಿ ಶ್ರೀಕಾಂತ್ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 11-21, 17-21 ಅಂತರದಲ್ಲಿ ಸೋಲನುಭವಿಸಿದ್ದಾರೆ. ಭಾರತದ ಇನ್ನೋರ್ವ ಅನುಭವಿ ಆಟಗಾರ ಎಚ್ ಎಸ್ ಪ್ರಣಾಯ್ ಎರಡನೇ ಶ್ರೇಯಾಂಕಿತ ಆಟಗಾರ ಚೈನೀಸ್ ತೈಪೆಯ ಲಿನ್ ಚುನ್ ಯಿ ವಿರುದ್ಧ 18-21, 9-21 ಅಂತರದಲ್ಲಿ ಪರಾಭವಗೊಂಡು ನಿರ್ಗಸಮಿಸಿದ್ದಾರೆ.