Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕರ್ಣ ಕಡೂರ್‌-ಮೂಸಾ ಶರೀಫ್‌ ಜೋಡಿಗೆ ಥಾಯ್ಲೆಂಡ್‌ ಪ್ರಶಸ್ತಿ

ಬೆಂಗಳೂರು: ಭಾರತದ ಮೋಟಾರ್‌ ರ‍್ಯಾಲಿಯಲ್ಲಿ ಜನಪ್ರಿಯ ಹಾಗೂ ಯಶಸ್ವಿ ಜೋಡಿ ಎಂದೆನಿಸಿರುವ ಮಂಗಳೂರಿನ ಮೂಸಾ ಶರೀಫ್‌ ಹಾಗೂ ಬೆಂಗಳೂರಿನ ಕರ್ಣ ಕಡೂರ್‌ ಜೋಡಿ ಥಾಯ್ಲೆಂಡ್‌ನಲ್ಲಿ ನಡೆದ ಥಾಯ್ಲೆಂಡ್‌ ರ‍್ಯಾಲಿ  ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ. India’s Karna Kadur and Musa Sherif got second place at Thailand Rally Championship.

ಥಾಯ್ಲೆಂಡ್‌ ರ‍್ಯಾಲಿಯಲ್ಲಿ ಆಹ್ವಾನದ ಮೇರೆಗೆ ಕರ್ಣ ಕಡೂರ್‌ ಹಾಗೂ ಮೂಸಾ ಶರೀಪ್‌ ಜೋಡಿ Toyota TCD Asia ತಂಡವನ್ನು ಪ್ರತಿನಿಧಿಸಿದ್ದರು. ಇದು ಹಿಂದೆ TRD ತಂಡವೆಂದೇ ಖ್ಯಾತಿ ಪಡೆದಿತ್ತು. Toyota CHR 4WD ನಲ್ಲಿ ಕರ್ಣ ಕಡೂರ್‌ ಹಾಗೂ ಮೂಸಾ ಶರೀಫ್‌ ಅನುಕ್ರಮವಾಗಿ ಚಾಲಕ ಹಾಗೂ ಸಹಚಾಲಕರಾಗಿ ಮುನ್ನಡೆಸಿದ್ದರು.

ವಿವಿಧ ದೇಶಗಳಿಂದ ಸುಮಾರು 58 ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. ಇದು ನಾಲ್ಕು ಸುತ್ತುಗಳ ರ‍್ಯಾಲಿ ಆಗಿದ್ದು, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ, ವಿಯೆಟ್ನಾಂ, ಚೀನಾ, ಜಪಾನ್‌, ಭಾರತ ಹಾಗೂ ಥಾಯ್ಲೆಂಡ್‌ನ ಚಾಲಕರು ಈ ರ‍್ಯಾಲಿಯಲ್ಲಿ ಸ್ಪರ್ಧಿಸಿದ್ದರು.

Toyota CHR ಜೊತೆಯಲ್ಲಿ Mitsubishi EVO 9, EVO 7 ಹಾಗೂ Subaru Impreza, Honda Civic ಮತ್ತು ಯೂರೋಪ್‌ನಲ್ಲಿ ನಿರ್ಮಿತವಾದ Suzuki Swift Sport ಕಾರುಗಳು ರ‍್ಯಾಲಿಯ ಪ್ರಮುಖ ಆಕರ್ಷಣೆಯಾಗಿದ್ದವು.

ಪೋಡಿಯಂ ಫಿನಿಷ್‌ನಲ್ಲಿ ಸ್ಥಿರ ಪ್ರದರ್ಶನ ತೋರಿದ್ದ ಕರ್ಣ ಹಾಗೂ ಮೂಸಾ ಜೋಡಿ ಥಾಯ್ಲೆಂಡ್‌ ಚಾಂಪಿಯನ್‌ಷಿಪ್‌ನ ಒಂದು ಸುತ್ತಿನಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಏಕೆಂದರೆ ಇದೇ ಸಂದರ್ಭದಲ್ಲಿ ಇಂಡಿಯನ್‌ ರ‍್ಯಾಲಿ ಚಾಂಪಿಯನ್‌ಷಿಪ್‌ನ 3ನೇ ಸುತ್ತಿನಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿತ್ತು. ಇವೆರಡೂ ರ‍್ಯಾಲಿಗಳು ಒಂದು ಸುತ್ತು ಒಂದೇ ಸಮಯದಲ್ಲಿ ನಡೆಯುತ್ತಿದುದರಿಂದ ಭಾರತದ ಜೋಡಿ ಇಂಡಿಯನ್‌ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿತು.

ಮೊದಲ ಬಾರಿಗೆ ಅಂತಾರಾಷ್ಟ್ರೀಯ ರ‍್ಯಾಲಿಯಲ್ಲಿ ಜೊತೆಯಾಗಿ ಸ್ಪರ್ಧಿಸುತ್ತಿದ್ದ ಕರ್ಣ ಹಾಗೂ ಮೂಸಾ ಜೋಡಿ ಇಂಡಿಯನ್‌‌ ರ‍್ಯಾಲಿ ಚಾಂಪಿಯನ್‌ಷಿಪ್‌ ಗೆದ್ದುಕೊಂಡರು. ಅದೇ ರೀತಿ ಥಾಯ್ಲೆಂಡ್‌ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದರು. 2025ರಲ್ಲಿ ಹೊಸ ಯೋಜನೆ ಹಾಗೂ ಹೊಸ ಸಾಹಸಕ್ಕೆ ಕೈ ಹಾಕಿರುವ ಕನ್ನಡಿಗರಾದ ಕರ್ಣ ಕಡೂರ್‌ ಹಾಗೂ ಮೂಸಾ ಶರೀಪ್‌ ಜೋಡಿಗೆ ಈಗ ಜಯ ಹೊಸ ಉತ್ಸಾಹವನ್ನು ತಂದಿದೆ. ಮುಂದಿನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಈ ಸಾಧನೆ ಪ್ರೇರಣಗೆಯಾಗಲಿದೆ ಎಂದು ಕರ್ಣ ಕಡೂರ್‌ www.sportsmail.net ಗೆ ತಿಳಿಸಿದ್ದಾರೆ.


administrator