ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರ ತಮ್ಮ ಬ್ಯಾಟಿನಲ್ಲಿ ಓಂ ಚಿಹ್ನೆಯನ್ನು ಬಳಸಿದ್ದರು. ಅದೇ ರೀತಿ ಆಸ್ಟ್ರೇಲಿಯಾದ ಆಟಗಾರ ಉಸ್ಮನ್ ಖಾವಜಾ ತಮ್ಮ ಬ್ಯಾಟಿನಲ್ಲಿ ಹಾರುವ ಪಾರಿವಾಳದ ಚಿಹ್ನೆ ಬಳಸಿದ್ದರು. ಇದು ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚರ್ಚೆಯ ವಿಷಯವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಒಬ್ಬರಿಗೆ ಅವಕಾಶ ನೀಡಿ ಮತ್ತೊಬ್ಬರಿಗೆ ನೀಡದಿರುವುದು ಈ ವಿವಾದಕ್ಕೆ ಮುಖ್ಯ ಕಾರಣವಾಗಿದೆ. International Cricket Committee double Standards after getting barred Usman Khawaja from using Dove Logo on Bat.
ಭಾನುವಾರ ಎಂಸಿಜಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಶೂ ಮತ್ತು ಬ್ಯಾಟ್‌ನಲ್ಲಿ ಹಾರುವ ಪಾರಿವಾಳದ ಚಿಹ್ನೆಯನ್ನು ಶೂ ಮತ್ತು ಬ್ಯಾಟ್‌ನಲ್ಲಿ ಧರಿಸಲು ಖಾವಜಾ ಮನವಿ ಮಾಡಿದ್ದರು. ಆದರೆ ಅದಕ್ಕೆ ಐಸಿಸಿ ಸಮ್ಮತಿ ನೀಡಲಿಲ್ಲ. ಈ ಬಗ್ಗೆ ಉಸ್ಮಾನ್ ಖಾವಜಾ ಐಸಿಸಿಯ ಇಬ್ಬಗೆಯ ನಿಲುವಿನ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಉಸ್ಮಾನ್‌ಗೆ ಬೆಂಬಲ ನೀಡಿದ್ದಾರೆ. ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾ ತಂಡದ ಪರ ಆಡಿದ್ದ ಕೇಶವ ಮಹಾರಾಜ. ಇಲ್ಲಿನ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದರು. ಅಲ್ಲದೆ ಹಿಂದೂ ಧಾರ್ಮಿಕ ಸಂಕೇತವಾದ “ಓಂ” ಅನ್ನು ತನ್ನ ಬ್ಯಾಟಿನಲ್ಲಿ ಧರಿಸಿದ್ದರು. ಈ ಬಗ್ಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆವು.
ಪರ್ಥ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಉಸ್ಮಾನ್ ಅವರ ಈ ರೀತಿಯ ಚಿಹ್ನೆ ಧರಿಸುವುದಕ್ಕೆ ವಿರೋಧ ಬಂದಿತ್ತು. ಶೂನಲ್ಲಿ “All lives are equal” ಮತ್ತು “Freedom is a human right” ಎಂದು ಬರೆಸಿಕೊಂಡಿದ್ದರು. ಅದಕ್ಕೆ ವಿರೋಧವಾದ ಹಿನ್ನೆಲೆಯಲ್ಲಿ ಕಪ್ಪು ಪಟ್ಟಿಧರಿಸಿ, ಅದಕ್ಕೆ ಕಪ್ಪು ಬಣ್ಣದ ಟೇಪ್ ಅಂಟಿಸಿ ಆಡಿದ್ದರು. ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧದ ಹಿನ್ನೆಲೆಯಲ್ಲಿ ಉಸ್ಮಾನ್ ಅವರ ಈ ಕ್ರಮಕ್ಕೆ ಐಸಿಸಿ ವಿರೋಧ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾದ ಆಟಗಾರ ಮಾರ್ನಸ್ ಲಾಬುಷಾಗ್ನೆ ಬೈಬಲ್ ನುಡಿಯನ್ನು, ವೆಸ್ಟ್ ಇಂಡೀಸ್‌ನ ನಿಕೊಲಾಸ್ ಪೂರನ್ ಕ್ರಿಶ್ಚಿಯನ್ ಧರ್ಮದ ಸಂಕೇತ ಕ್ರಾಸ್ ಅನ್ನು ಮತ್ತು ಕೇಶವ ಮಹಾರಾಜ ಅವರ ಓಂ ಚಿಹ್ನೆಗೆ ಐಸಿಸಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಉಸ್ಮಾನ್ ಖಾವಜಾ ಅವರಿಗೆ ಮಾತ್ರ ವಿರೋಧ ವ್ಯಕ್ತಪಡಿಸಿರುವ ಐಸಿಸಿ ಕ್ರಮವನ್ನು ಆಆಸೀಸ್ ತಂಡದ ಆಟಗಾರರು ವಿರೋಧಿಸಿದ್ದಾರೆ. ಒಂದು ತಂಡದ ಆಟಗಾರನ ನಿಲುವಿನ ಬಗ್ಗೆ ಸುಮ್ಮನಿದ್ದು ಇನ್ನೊಬ್ಬ ಆಟಗಾರನಿಗೆ ವಿರೋಧ ವ್ಯಕ್ತಪಡಿಸುವ ಐಸಿಸಿ ಕೂಡ ತನ್ನ ನಿಯಮವನ್ನು ಎಲ್ಲ ತಂಡಗಳಿಗೂ ಅನ್ವಯವಾಗುವಂತೆ ಜಾರಿಗೆ ತರಬೇಕಾದ ಅಗತ್ಯವಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧದ ಸಂದರ್ಭದಲ್ಲಿ ಈ ರೀತಿಯ ಚಿಹ್ನೆ ಬಳಸುವುದು ಸೂಕ್ತವಲ್ಲ ಎಂಬುದು ಐಸಿಸಿಯ ಅಭಿಪ್ರಾಯ ಎಂದು ಹೇಳಲಾಗುತ್ತಿದೆ.