ಬೆಂಗಳೂರು : RCB vs SRH: ಇಂಡಿಯನ್ ಪ್ರೀಮಿಯರ್ ಲೀಗ್ ಮಹತ್ವದ ಘಟ್ಟ ತಲುಪಿದೆ. ಸನ್‌ರೈಸಸ್ ಹೈದ್ರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ಬಹುತೇಕ ಪ್ಲೇ ಆಫ್ ನಿಂದ ಹೊರಬಿದ್ದಿವೆ. ಉಳಿದಂತೆ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಪ್ರವೇಶಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇ ಆಫ್ ಪ್ರವೇಶಿಸುವುದು ಖಚಿತವಾಗಿದೆ. ಉಳಿದಂತೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಪಂಜಾಬ್ ಕಿಂಗ್ಸ್ ವಿರುದ್ದದ ಇಂದಿನ ಪಂದ್ಯ ಬೆಂಗಳೂರು ತಂಡಕ್ಕೆ ನಿರ್ಣಾಯಕವಾಗಲಿದೆ. ಮಾತ್ರವಲ್ಲ ಇಂದಿನ ಪಂದ್ಯದ ಮೇಲೆಯೇ ಮುಂಬೈ, ಲಕ್ನೋ, ಚೆನ್ನೂ ತಂಡಗಳ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಹತ್ತು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಕಳೆದ ಐಪಿಎಲ್ ಋತುವಿನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಭರ್ಜರಿ ಕಂಬ್ಯಾಕ್ ಮಾಡಿವೆ. ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಈ ಬಾರಿಯೂ ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ. ಉಳಿದಂತೆ ಲಕ್ನೋ ತಂಡ ನಾಯಕನ ಅನುಪಸ್ಥಿತಿಯ ನಡುವೆಯೂ ಸ್ಥಿರ ಪ್ರದರ್ಶನ ತೋರುತ್ತಿದೆ. ಇನ್ನೊಂದೆಡೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್‌ನಲ್ಲಿ ಭರ್ಜರಿ ಪ್ರದರ್ಶನವನ್ನು ತೋರುತ್ತಿದೆ.
ಇಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಈಗಾಗಲೇ 12 ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡ 12 ಅಂಕಗಳನ್ನು ಪಡೆದುಕೊಂಡಿದೆ. ಪ್ಲೈ ಆಫ್ ಪ್ರವೇಶಿಸಬೇಕಾದ್ರೆ ಆರ್‌ಸಿಬಿ ತಂಡ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಗುಜರಾತ್ ಟೈಟಾನ್ಸ್ ತಂಡ 13 ಪಂದ್ಯಗಳನ್ನು ಆಡಿದ್ದು, 9 ಪಂದ್ಯಗಳಲ್ಲಿ ಜಯಗಳಿಸಿ, 4 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಈ ಮೂಲಕ 18 ಅಂಕಗಳನ್ನು ಪಡೆಯುವ ಮೂಲಕ ಬಹುತೇಕ ಪ್ಲೇ ಆಫ್ ಪ್ರವೇಶಿಸಿದೆ. ಗುಜರಾತ್ ಟೈಟಾನ್ಸ್ ತಂಡ ಅಂತಿಮ ಪಂದ್ಯವನ್ನು ಬೆಂಗಳೂರೂ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ದ ಆಡಲಿದೆ. ಈ ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳನ್ನು ಆಡಿದ್ದು 7 ಸೋಲು 5 ಗೆಲುವಿನ ಮೂಲಕ 15 ಅಂಕಗಳನ್ನು ಪಡೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯವನ್ನು ಜಯಿಸಿದ್ರೆ ಸಿಎಸ್‌ಕೆ ಎರಡನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಆದರೆ ಮುಂದಿನ ಪಂದ್ಯ ಸಿಎಸ್‌ಕೆ ತಂಡಕ್ಕೆ ಮಹತ್ವದ್ದಾಗಿದೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ನಾಯಕ ಕೆ.ಎಲ್.ರಾಹುಲ್ ಐಪಿಎಲ್‌ನಿಂದ ಗಾಯಗೊಂಡು ಹೊರ ನಡೆದಿದ್ದು, ಸದ್ಯ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೆಕೆಆರ್ ವಿರುದ್ದದ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಲಕ್ನೋ ಸಿಲುಕಿದೆ. ಒಂದೊಮ್ಮೆ ಆರ್‌ಸಿಬಿಗೆ 2 ಪಂದ್ಯಗಳು ಬಾಕಿ ಉಳಿದಿದ್ದು, ಮುಂಬೈಗೆ 1 ಪಂದ್ಯ ಬಾಕಿ ಉಳಿದಿದೆ. ಎರಡೂ ತಂಡಗಳ ಪೈಕಿ ಒಂದು ತಂಡ ಒಂದು ಪಂದ್ಯವನ್ನು ಸೋತರೂ ಕೂಡ ಲಕ್ನೋ ಮುಂದಿನ ಹಂತಕ್ಕೆ ತೇರ್ಗಡೆಯಾಗಲಿದೆ.
RCB vs SRH : ಆರ್‌ಸಿಬಿಗೆ ಇಂದಿನ ಪಂದ್ಯ ನಿರ್ಣಾಯಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ವರ್ಷಂಪ್ರತಿ ಈ ಬಾರಿ ಕಪ್ ನಮ್ಮದೇ ಅನ್ನುತ್ತಿದ್ದಾರೆ. ಈ ಬಾರಿಯೂ ಅಭಿಮಾನಿಗಳು ಕಪ್ ನಮ್ಮದೇ ಘೋಷಣೆ ಮೊಳಗಿಸುತ್ತಿದ್ದಾರೆ. ಆದರೆ ಮೇಲ್ನೋಟಕ್ಕೆ ಬಲಿಷ್ಠ ತಂಡವೆನಿಸಿಕೊಂಡಿದ್ದರೂ ಕೂಡ ಆರ್‌ಸಿಬಿ ಸುಲಭ ಪಂದ್ಯಗಳನ್ನು ಕೈ ಚೆಲ್ಲಿದೆ. ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯವನ್ನು ಜಯಿಸಿದ್ರೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ರನ್‌ರೇಟ್ ಆಧಾರದಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಒಂದೊಮ್ಮೆ ಇಂದಿನ ಪಂದ್ಯವನ್ನು ಸೋತು, ಕೊನೆಯ ಪಂದ್ಯವನ್ನು ಜಯಿಸಿದ್ರೂ ಕೂಡ ಆರ್‌ಸಿಬಿಗೆ ಪ್ಲೇ ಆಫ್ ಪ್ರವೇಶಿಸಲು ಅವಕಾಶವಿದೆ. ಹಾಗಾಗಬೇಕಾದ್ರೆ ಮುಂಬೈ ತಂಡ ಡೆಲ್ಲಿ ತಂಡದ ಎದುರು ಹೀನಾಯವಾಗಿ ಸೋಲನ್ನು ಕಾಣಬೇಕು.
ಇದನ್ನೂ ಓದಿ : ಫೆಡರೇಷನ್ ಕಪ್ ಅಥ್ಲೆಟಿಕ್ಸ್: ರಾಜ್ಯದ ಪ್ರಿಯಾ ಚಿನ್ನದ ಸಾಧನೆ
ಇದನ್ನೂ ಓದಿ : ಬರೇ 15 ರನ್ ಗಳಿಸಿ 16.25 ಕೋಟಿ ರೂ. ಮನೆಗೆ ಕೊಂಡೊಯ್ದ!
ಹೈದ್ರಾಬಾದ್ vs ಬೆಂಗಳೂರು ಆಡುವ ಬಳಗ :
ಸನ್‌ರೈಸರ್ಸ್ ಹೈದರಾಬಾದ್ (SRH) :
ಅನ್ಮೋಲ್‌ಪ್ರೀತ್ ಸಿಂಗ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಫಜಲ್ಹಕ್ ಫಾರೂಕಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) :
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಮೈಕಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್