Friday, October 18, 2024

ಒಲಿಂಪಿಕ್ಸ್‌ ಚಿನ್ನದ ಪದಕದಲ್ಲಿ ನಿಜವಾಗಿಯೂ ಚಿನ್ನ ಇದೆಯಾ?

ಹೊಸದಿಲ್ಲಿ: ಒಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗುವುದು ಮತ್ತು ಅಲ್ಲಿ ಪದಕ ಗೆಲ್ಲುವುದು ಶ್ರೇಷ್ಠ ಸಾಧನೆಯಾಗಿರುತ್ತದೆ. ಕೆಲವು ಕ್ರೀಡಾಪಟುಗಳಿಗೆ ಪದಕ ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಮುಖ್ಯವಾದರೆ, ಇನ್ನು ಕೆಲವರಿಗೆ ಅಲ್ಲಿ ಹೋಗಿ ಪದಕ ಗೆಲ್ಲುವುದು, ಅದರಲ್ಲೂ ಚಿನ್ನ ಗೆಲ್ಲಬೇಕೆಂಬುದು ಜೀವನದ ಗುರಿಯಾಗಿರುತ್ತದೆ. ಆದರೆ ಈ ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕದಲ್ಲಿ ನಿಜವಾಗಿಯೂ ಚಿನ್ನ ಇರುತ್ತದೆಯಾ? ಅಲ್ಲಿ ಗೆಲ್ಲುವ ಪದಕವು ಚಿನ್ನಕ್ಕಿಂತ ಮೌಲ್ಯವಾದುದು. ಆದರೆ ಚಿನ್ನದ ಪದಕದಲ್ಲಿ ನೀವಂದುಕೊಂಡಷ್ಟು ಚಿನ್ನ ಇರುವುದಿಲ್ಲ. ಆದರೂ ಚಿನ್ನಕ್ಕಿಂತ ಬೆಲೆ ಹೆಚ್ಚು. ಭಾರತದಲ್ಲಿ ಈ ಚಿನ್ನದ ಪದಕದ ಮೌಲ್ಯಕ್ಕೆ ಬೆಲೆ ಕಟ್ಟಲಾಗದು.  Is Olympic Gold medal made by Gold?

ಹೌದು 412 ಗ್ರಾಂ ತೂಕದ ಚಿನ್ನದ ಪದಕದಲ್ಲಿ ಪೂರ್ತಿ ಚಿನ್ನ ಇರುವುದಿಲ್ಲ. ಅದರಲ್ಲಿ 24 ಕ್ಯಾರೆಟ್‌ನ 6 ಗ್ರಾಂ ಚಿನ್ನ ಮಾತ್ರ ಇರುತ್ತದೆ. ಉಳಿದದ್ದು ಬೆಳ್ಳಿ. ಬೆಳ್ಳಿಯ ಪದಕಕ್ಕೆ ಚಿನ್ನದ ಲೇಪನ ಮಾಡಲಾಗಿರುತ್ತದೆ. ಬೆಳ್ಳಿ ಪದಕವು ಬೆಳ್ಳಿಯಿಂದ ಮತ್ತು ಕಂಚಿನ ಪದಕವು ಕಂಚಿನಿಂದ ಕೂಡಿರುತ್ತದೆ. ಆದರೆ ಇವುಗಳಿಗೆ ಆಯಾಯ ದೇಶದಲ್ಲಿ ಚಿನ್ನಕ್ಕಿಂತಲೂ ಬಹುಪಟ್ಟು ಬೆಲೆ ಇರುತ್ತದೆ. ಪ್ರಾಚೀನ ಗ್ರೀಕ್‌ ಒಲಿಂಪಿಕ್ಸ್‌ನಲ್ಲಿ ಗೆದ್ದವರಿಗೆ ಪದಕಗಳನ್ನು ನೀಡಲಾಗುತ್ತಿರಲಿಲ್ಲ. ಆಲಿವ್‌ ಎಲೆಗಳನ್ನು ಸುತ್ತಿ ತಲೆಯ ಮೇಲೆ ಇಡುತ್ತಿದ್ದರು. 1896ರಿಂದ ಪದಕ ನೀಡುವ ಸಂಪ್ರದಾಯ ಜಾರಿಗೆ ಬಂದಿತು. ಮೊದಲ ಸ್ಥಾನ ಗೆದ್ದವರಿಗೆ ಬೆಳ್ಳಿ ಎರಡನೇ ಸ್ಥಾನ ಗೆದ್ದವರಿಗೆ ಕಂಚು ಮತ್ತು ಮೂರನೇ ಸ್ಥಾನ ಗೆದ್ದವರಿಗೆ ಹೆಣಿಗೆ (ZIP) ನೀಡಲಾಗುತ್ತಿತ್ತು. ಆ ನಂತರ 1904ರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ನೀಡುವ ಕ್ರಮ ಮೊದಲ ಬಾರಿಗೆ ಜಾರಿಗೆ ಬಂತು. ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಒಟ್ಟು 36,600 ಪದಕಗಳನ್ನು ನೀಡಲಾಗುತ್ತದೆ. ಇದರಲ್ಲಿ ಪ್ಯಾರಿಸ್‌ನ ಐತಿಹಾಸಿಕ Eiffel Towerನ ನಿರ್ಮಾಣಕ್ಕೆ ಬಳಸಲಾದ ಕಬ್ಬಿಣದ ಚಿಕ್ಕ ಚೂರು ಪ್ರತಿಯೊಂದು ಪದಕದಲ್ಲೂ ಇರುವುದು ವಿಶೇಷ.

Related Articles