Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಯಲ್‌ ಚಾಲೆಂಜರ್ಸ್‌ ಈ ಹೆಸರು ಬದಲಾದರೆ ಟ್ರೋಫಿ ಗೆಲ್ಲಬಹುದಾ?

ಬೆಂಗಳೂರು: “ಈ ಆರ್‌ಸಿಬಿಯ ಹೆಸರು ಬದಲಾಯಿಸಿದರೆ ಪ್ರಶಸ್ತಿ ಗೆಲ್ಲಬಹುದೇನೋ?” ಎಂದು ಆರ್‌ಸಿಬಿಯ ಅಭಿಮಾನಿಯೊಬ್ಬರು ಹೇಳಿದಾಗ “ಹೆಸರಲ್ಲೇನಿದೆ?” ಎಂದು ಉತ್ತರಿಸಿದೆ. “ಅಲ್ಲ ಅವರ ಹೆಸರಿನಲ್ಲಿ ವಿಸ್ಕಿ ಬ್ರಾಂಡ್‌ನ ಹೆಸರಿದೆ, ಅದೇ ಇರವರಿಗೆ ಅಡ್ಡಿ ಆಗುತ್ತಿರಬಹುದಾ?” ಎಂದು ಆ ಅಭಿಮಾನಿ ಮತ್ತೊಮ್ಮೆ ಕೇಳಿದರು. “ಹಾಗೇನಿಲ್ಲ” ಎಂದು ಹೇಳಿದ ನನಗೂ ಮತ್ತೊಮ್ಮೆ ಯೋಚಿಸುವಂತಾಯಿತು. ಉತ್ತಮ ಆಟಗಾರರನ್ನು ಹೊಂದಿದ್ದರೂ ಈ ಆರ್‌ಸಿಬಿ ಯಾಕೆ ಟ್ರೋಫಿ ಗೆಲ್ಲುತ್ತಿಲ್ಲ? ಮೂರು ಬಾರಿ ಫೈನಲ್‌ಗೆ ಹೋದರೂ, ಜಗತ್ತಿನ ಶ್ರೇಷ್ಠ ಆಟಗಾರರನ್ನು ಖರೀದಿ ಮಾಡಿದರೂ ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ? ಏನಿದೆ ದೋಷ? Is the name Royal Challenge is reason for Royal Challengers Bengaluru RCB fail to win the IPL Trophy?

 ಕೋಲ್ಕೋತಾದ ಈಡನ್‌ ಗಾರ್ಡನ್ಸ್‌ನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ Kolkata Knight Riders KKR ತಂಡ ಪೂಜೆ ಮಾಡಿ ಅಭ್ಯಾಸವನ್ನು ಆರಂಭಿಸಿದೆ. ಮಾರ್ಚ್‌ 22 ರಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೆಣಸಲಿದೆ.ರಾಯಲ್‌ ಚಾಲೆಂಜರ್ಸ್‌ ತಂಡ ಎಷ್ಟೇ ಸೋತರೂ ಕ್ರಿಕೆಟ್‌ ಜಗತ್ತಿನಲ್ಲಿ ಅಪಾರ ಅಭಿಮಾನಿಗಳನ್ನು ಒಳಗೊಂಡಿದೆ. ಅದೇ ಪ್ರೀತಿ, ಅದೇ ಅಭಿಮಾನಿ ಹಸಿರಾಗಿಯೇ ಇದೆ. ಎಷ್ಟೇ ಉತ್ತಮ ಆಟಗಾರರಿದ್ದರೂ ಫೈನಲ್‌ ವರೆಗೆ ತಲುಪಿ ಪ್ರಶಸ್ತಿಯಿಂದ ವಂಚಿತವಾಗುತ್ತಿದೆ. ಯಾಕೆ ಹೀಗೆ?

ಯೋಚಿಸಿ ನೋಡಿದಾಗ ಈ ತಂಡದ ಹೆಸರಲ್ಲೇ ದೋಷವಿದೆ ಅನಿಸುತ್ತಿದೆ. ಏಕೆಂದರೆ ಈ ತಂಡದ ಹೆಸರು ರಾಯಲ್‌ ಚಾಲೆಂಜ್‌ ಅಂದರೆ ಒಂದು ಮದ್ಯ ಅಂದರೆ ವಿಸ್ಕಿಯ ಹೆಸರು ಅದರಲ್ಲಿದೆ. ಈ ಮದ್ಯದ ಹೆಸರು ಇರುವುದರಿಂದಲೇ ಇವರು ಪ್ರಶಸ್ತಿಯಿಂದ ವಂಚಿತರಾಗುತ್ತಿರಬಹುದೇ? ಎಂಬುದು ಕ್ರಿಕೆಟ್‌ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆ.

ಈ ವಿಷಯದಲ್ಲಿ ಒಮ್ಮೆ ಯೋಚಿಸಬೇಕೆನಿಸಿತು. ಇದೆಲ್ಲ ನಂಬಿಕೆಯನ್ನು ಆಧರಿಸಿದೆ. ಕೆಕೆಆರ್‌ನವರು ಅಭ್ಯಾಸಕ್ಕೆ ಮುನ್ನ ಪೂಜೆ ಮಾಡಿಸಿದ್ದಾರೆ. ಹಾಗಂತ ಆರ್‌ಸಿಬಿಯವರು ಚಿನ್ನಸ್ವಾಮಿ ಅಂಗಣದಲ್ಲಿ ಪೂಜೆ ಮಾಡಿ ಅಭ್ಯಾಸ ಆರಂಭಿಸಬೇಕೆಂದಲ್ಲ. ಅದು ಅವರವರ ನಂಬಿಕೆ. ಮನಸ್ಸಿನಲ್ಲೇ ಮಾಡಿರಬಹುದು. ಬಿಸಿಸಿಐ ಕೂಡ ಹೊಸ ಪಿಚ್‌, ಹೊಸ ಕ್ರೀಡಾಂಗಣ ಯಾವುದೇ ಇರಲಿ ಪೂಜೆ ನೆರವೇರಿಸಿ ಮುಂದಿನ ಕಾರ್ಯ ಆರಂಭಿಸುತ್ತದೆ.

ಕ್ರಿಕೆಟ್‌ ಜಗತ್ತಿನ ಅತ್ಯಂತ ದೊಡ್ಡ ಬ್ರಾಂಡ್‌ ಆಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಟ್ಯಾಗ್‌ಲೈನ್‌ #PlayBold ಅದೇ ರೀತಿ ರಾಯಲ್‌ ಚಾಲೆಂಜ್‌ ವಿಸ್ಕಿಯ ಟ್ಯಾಗ್‌ಲೈನ್‌ ಕೂಡ #liveBold. ಹೀಗೆ ಮದ್ಯದ ಬ್ರಾಂಡ್‌ಗಳನ್ನು ಪ್ರಮೋಟ್‌ ಮಾಡುತ್ತಿರುವುದೇ ಆರ್‌ಸಿಬಿಯ ಜಯಕ್ಕೆ ಅಡ್ಡಿಯಾಗಿರಬಹುದೇ? ಒಬ್ಬ ಕ್ರಿಕೆಟ್‌ ಅಭಿಮಾನಿಗಳು ಕೇಳಿದ ಈ ಪ್ರಶ್ನೆ ಕೆಲಹೊತ್ತು ಕಾಡಿದರೂ ಕ್ರೀಡೆಯಲ್ಲಿ ಇದೆಲ್ಲ ಯಾಕೆ ಎಂಬ ಭಾವನೆ.

ಮದ್ಯ ಹಾಗೂ ತಂಬಾಕು ಬ್ರಾಂಡಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಮೋಟ್‌ ಮಾಡಬಾರದು ಎಂದು ಕೇಂದ್ರ ಆರೋಗ್ಯ ಇಲಾಖೆ ಐಪಿಎಲ್‌ ಆಡಳಿತ ಮಂಡಳಿಗೆ ಸೂಚಿಸಿದೆ. ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಕಾದು ನೋಡಬೇಕು. ವಿಸ್ಕಿಯ ಲಾಂಛನ ಬದಲಾಯಿಸಿದಾಗ ಆರ್‌ಸಿಬಿ ತನ್ನ ಲಾಂಛನವನ್ನೂ ಬದಲಾಯಿಸಿದೆ. ಅಥವಾ ಆರ್‌ಸಿಬಿಯ ಲಾಂಛನ ಬದಲಾದಾಗ ರಾಯಲ್‌ ಚಾಲೆಂಜರ್‌ ವಿಸ್ಕಿಯ ಲಾಂಛನವೂ ಬದಲಾಗಿದೆ.

ಒಟ್ಟಾರೆ ಚಾಂಪಿಯನ್‌ ಪಟ್ಟ ಗೆಲ್ಲಲು ಹಂಬಲಿಸುತ್ತಿರುವ ಆರ್‌ಸಿಬಿಯ ಬಗ್ಗೆ ಅದರ ಅಭಿಮಾನಿಗಳು ಫ್ರಾಂಚೈಸಿಯ ಮಾಲೀಕರಿಗಿಂತಲೂ ಹೆಚ್ಚು ಯೋಚಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.


administrator