Thursday, November 21, 2024

ಕಾಲ ಉರುಳಿ, ಋತುವು ಮರಳಿ ಬಂತು ನಮ್ಮ ಕಂಬಳ

ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಚಾಲನೆ ಸಿಕ್ಕಿದೆ. ಭತ್ತದ ಬೆಳೆ ಕೊಯಿಲು ಮುಗಿದು ಕೋಣಗಳು ಓಟಕ್ಕೆ ಸಜ್ಜಾಗಿವೆ. ಮಿಜಾರಿನ ಶ್ರೀನಿವಾಸ ಗೌಡ ಅವರು ಅತ್ಯಂತ ವೇಗದ ಓಟಗಾರ ಎಂಬ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿದ ನಂತರ ಕಂಬಳ ಮತ್ತಷ್ಟು ಜನಪ್ರಿಯತೆಯನ್ನು ಕಂಡುಕೊಂಡಿತು. ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನರು ರಾಜಧಾನಿಯಲ್ಲಿ ಕಂಬಳವನ್ನು ಆಯೋಜಿಸುವ ಮೂಲಕ ನಮ್ಮ ಜಾನಪದ ಕ್ರೀಡೆ ಜಾಗತಿಕ ಮಟ್ಟವನ್ನು ತಲುಪಿತು. Karavali’s traditional Sports KAMBALA season started. This year total 58 kambala will be held in three district.

ಆಧುನಿಕ ತಂತ್ರಜ್ಞಾನವೂ ಕಂಬಳಕ್ಕೆ ಪದಾರ್ಪಣೆ ಮಾಡಿತು. ಭಾರತೀಯ ಕ್ರೀಡಾಪ್ರಾಧಿಕಾರವನ್ನೂ ಆಕರ್ಷಿಸಿತು. ಕೋಣಗಳಿಗೆ ಬಾರುಕೋಲಿನಿಂದ ಹೊಡೆದು ಹಿಂಸೆ ನೀಡಲಾಗುತ್ತದೆ ಎಂದು ಪ್ರಾಣಿ ದಯಾ ಸಂಘದವರು ಕೋರ್ಟ್‌ ಮೆಟ್ಟಿಲೇರಿದರು. ಆದರೆ ಶರತ್ತಿನ ಮೇರೆಗೆ ಕೋರ್ಟ್‌ ಕಂಬಳ ನಡೆಸಲು ಅವಕಾಶ ನೀಡಿದೆ.

2024-25ರ ವೇಳಾಪಟ್ಟಿ ಪ್ರಕಟ: ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ನವೆಂಬರ್‌ನಿಂದ ಏಪ್ರಿಲ್‌ ವರೆಗೆ ನಡೆಯಲಿವೆ. ನವೆಂಬರ್‌ನಿಂದ ಏಪ್ರಿಲ್‌ ತನಕ ಸುಮಾರು 58 ಕಂಬಳಗಳು ನಡೆಯಲಿವೆ. ಕೆಲವು ದಿನಗಳಲ್ಲಿ ಜಿಲ್ಲೆಯ ಎರಡೆರಡು ಕಡೆ ಕಂಬಳ ನಡೆಯಲಿದೆ.

ಋತುವಿನ ಕೊನೆಯ ಕಂಬಳ ಏಪ್ರಿಲ್‌ 19, 2025 ರಂದು ಶಿವಮೊಗ್ಗದಲ್ಲಿ ನಡೆಯಲಿದೆ.

Related Articles