Thursday, September 19, 2024

ಅಥ್ಲೆಟಿಕ್ಸ್‌: ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್‌

ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್‌ ಜಿಲ್ಲಾ ಅಥ್ಲೆಟಿಕ್ಸ್‌ ಹಾಗೂ 23 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ತಂಡ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka state inter District Athletic championship Dakshina Kannada overall Champions.

ದಕ್ಷಿಣ ಕನ್ನಡ ಜಿಲ್ಲೆಯ ಅಥ್ಲೀಟ್‌ಗಳು 30 ಚಿನ್ನ, 20 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗೆದ್ದು ಪ್ರಭುತ್ವ ಸಾಧಿಸಿದರು. ಈ ತಂಡವು ಪುರುಷರ ವಿಭಾಗದಲ್ಲಿ 186 ಮತ್ತು ಮಹಿಳೆಯರ ವಿಭಾಗದಲ್ಲಿ 216 ಅಂಕಗಳನ್ನು ಗಳಿಸಿ ಎರಡೂ ವಿಭಾಗದ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು.

ಬೆಂಗಳೂರು ತಂಡವು 11 ಚಿನ್ನ 17 ಬೆಳ್ಳಿ ಹಾಗೂ 20 ಕಂಚಿನ ಪದಕಗಳನ್ನು ಗೆದ್ದು ಮೊದಲ ರನ್ನರ್‌ ಅಪ್‌ ಸ್ಥಾನ ತನ್ನದಾಗಿಸಿಕೊಂಡಿತು. 16 ಚಿನ್ನ, 9 ಬೆಳ್ಳಿ ಹಾಗೂ 16 ಕಂಚಿನ ಪದಕಗಳನ್ನು ಗೆದ್ದ ಬೆಳಗಾವಿ ತಂಡ ಎರಡನೇ ರನ್ನರ್‌ಅಪ್‌ ಸ್ಥಾನ ಗೆದ್ದುಕೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಲೋಹಿತ್‌ ಗೌಡ 14 ವರ್ಷ ವಯೋಮಿತಿಯ ವಿಭಾಗದಲ್ಲಿ ಶ್ರೇಷ್ಠ ಅಥ್ಲೀಟ್‌ ಗೌರವಕ್ಕೆ ಪಾತ್ರರಾದರು. ಕೆಪಿ ಅದ್ವಿಕಾ ವನಿತೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ ಎನಿಸಿದರು. 16 ವರ್ಷ ವಯೋಮಿತಿಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಆಯುಷ್‌ ಪ್ರಾಂಜಲ್‌ ಹಾಗೂ ಸುಚಿತ್ರಾ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು. 18 ವರ್ಷ ವಯೋಮಿತಿಯ ವಿಭಾಗದಲ್ಲಿ ಧಾರವಾಡದ ಸಯ್ಯದ್‌ ಸಬೀರ್‌ ಮತ್ತು ಉಡುಪಿಯ ಸ್ತುತಿ ಶೆಟ್ಟಿ ಶ್ರೇಷ್ಠ ಅಥ್ಲೀಟ್‌ ಎನಿಸಿದರು. 23 ವರ್ಷ ವಯೋಮಿತಿಯ ವಿಭಾಗದಲ್ಲಿ ಮೈಸೂರಿನ ಗಗನ್‌ ಗೌಡ, ಹಾಗೂ ಉಡುಪಿಯ ಎಸ್‌.ಕೀರ್ತನಾ ಶ್ರೇಷ್ಠ ಅಥ್ಲೀಟ್‌ ಎನಿಸಿದರು. 20 ವರ್ಷವಯೋಮಿತಿಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಸುಹಾಸ್‌ ಸುವರ್ಣ ಹಾಗೂ ಚಿಕ್ಕಮಗಳೂರಿನ ದಿಶಾ ಅಳಿಗೆ ಶ್ರೇಷ್ಠ ಅಥ್ಲೀಟ್‌ ಗೌರವಕ್ಕೆ ಪಾತ್ರರಾದರು.

Related Articles