Thursday, November 21, 2024

ಕನ್ನಡಿಗನ ಸಾಧನೆ: ಪಾಕ್‌ಗೆ ಶಾಕ್‌ ನೀಡಿದ ಭಾರತಕ್ಕೆ ಕಂಚು

ಬೆಂಗಳೂರು: ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್‌ ಆಫ್‌ ಜೊಹೊರ್‌ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಗೋಲ್‌ಕೀಪರ್‌ ಮೋಹಿತ್‌ ಹೊನ್ನೇನಹಳ್ಳಿ ನೀಡಿದ ದಿಟ್ಟ ಹೋರಾಟದ ಪರಿಣಾಮ ಭಾರತ ತಂಡ ಪಾಕಿಸ್ತಾನವನ್ನು 6-5 (3-3)  ಮಣಿಸಿ ಕಂಚಿನ ಪದಕ ಗೆದ್ದುಕೊಂಡಿದೆ. Karnataka’s goalkeeper Mohit Honnenahalli is star of India in Sultan of Johor Cup Hockey Championship

ಕನ್ನಡಿಗ ಮೋಹಿತ್‌ ಏಷ್ಯ ಜೂನಿಯರ್‌‌ ಹಾಕಿ ಚಾಂಪಿಯನ್‌ಷಿಪ್‌ನಲ್ಲೂ ಪಾಕಿಸ್ತಾನವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಉತ್ತಮ ಗೋಲ್‌ಕೀಪರ್‌ ಗೌರವಕ್ಕೆ ಪಾತ್ರರಾಗಿದ್ದರು. ಕಳೆದ ವರ್ಷದ ಜೊಹೊರ್‌ ಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೊಷುವಾ ಬ್ರೂಕ್ಸ್‌ ಗೋಲನ್ನು ತಡೆದು ಭಾರತ ಚಾಂಪಿಯನ್‌ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಶನಿವಾರ ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ನಿಗದಿತ ಅವಧಿಯಲ್ಲಿ 3-3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇಲ್ಲಿಯೂ ಮೋಹಿತ್‌ ಗೋಡಿಯಾಗಿ ನಿಂತು ಭಾರತಕ್ಕೆ ಆಧಾರವಾದರು. ಪೆನಾಲ್ಟಿ ಶೂಟೌಟ್‌ನಲ್ಲಿ ಇತ್ತಂಡಗಳು ಮೊದಲ ನಾಲ್ಕು ಅವಕಾಶಗಳಲ್ಲಿ ಗೋಲು ಗಳಿಸಿದವು. ಪಾಕಿಸ್ತಾನದ ಮುರ್ತಾಜಾ ಯಾಕೂಬ್‌ ಗೋಲು ಗಳಿಸುವಲ್ಲಿ ವಿಫಲರಾದರು. ಇದರಿಂದಾಗಿ ಭಾರತದ ಅಮನ್‌ದೀಪ್‌ಗೆ ಗೋಲು ಗಳಿಸಿ ಪಂದ್ಯ ಗೆಲ್ಲಿಸಿಕೊಡುವ ಅವಕಾಶವಿದ್ದಿತ್ತು. ಆದರೆ ಅಮನ್‌ದೀಪ್‌ ವಿಫಲರಾದ ಕಾರಣ ಪಂದ್ಯ ಶೂಟೌಟ್‌ನಿಂದ ಸಡನ್‌ ಡೆತ್‌ಗೆ ತಿರುಗಿತು.

ಸಡನ್‌ ಡೆತ್‌ನಲ್ಲಿ ಭಾರತದ ವಿಷ್ಣುಕಾಂತ್‌ ಸಿಂಗ್‌ ಯಶಸ್ಸು ಕಂಡರು. ಪಾಕಿಸ್ತಾನದ ಅರ್ಷದ್‌ ಲಿಯಾಕತ್‌ ಸಮಬಲ ಸಾಧಿಸಿದರು. ಆದರೆ ಆರನೇ ಸುತ್ತಿನಲ್ಲಿ ಭಾರತದ ಗೋಲ್‌ಕೀಪರ್‌ ಕರ್ನಾಟದಕ ಮೋಹಿತ್‌ ಹೊನ್ನೇನಹಳ್ಳಿ ಶಾಹಿದ್‌ ಪ್ರಯತ್ನವನ್ನು ತಡೆಯುವ ಮೂಲಕ ಭಾರತ ಜಯ ಗಳಿಸಿತು.  ಒಟ್ಟು 11 ಆವೃತ್ತಿಗಳಲ್ಲಿ ಪಾಲ್ಗೊಂಡಿರುವ ಭಾರತಕ್ಕೆ ಇದು 9ನೇ ಪದಕವಾಗಿದೆ.

Related Articles