ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ನವೀನ್, ಮೂಸಾ ಶರೀಫ್
ಬೆಂಗಳೂರು: ಕಾಸರಗೋಡಿನ ಮೂಸಾ ಶರೀಫ್ ಹಾಗೂ ಹೈದರಾಬಾದ್‌ನ ನವೀನ್ ಪುಲ್ಲಿಗಿಲ್ಲಾ ಅವರು ಭಾರತದ ರ್‍ಯಾಲಿ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. ಮಾರ್ಷ್ 20 ರಿಂದ 23 ರ ವರೆಗೆ ಕೀನ್ಯಾದಲ್ಲಿ ನಡೆಯಲಿರುವ ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್ World Rally Championship (WRC) ನ ಭಾಗವಾಗಿರುವ ಸಫಾರಿ ರ್‍ಯಾಲಿ ಕೀನ್ಯಾ 2025 Safari Rally Kenya 2025 ಶರೀಫ್ ಹಾಗೂ ನವೀನ್ ಭಾರತವನ್ನು ಪ್ರತಿನಿಧಿಸುವ ಮೊದಲ ರ್‍ಯಾಲಿ ಪಟುಗಳಾಗಿದ್ದಾರೆ. Kasaragod Musa Sherif and Naveen Pulligilla, set for historic WRC Safari Rally Kenya 2025 debut.
ಆಫ್ರಿಕಾ ಎಕೋ ಮೋಟಾರ್‌ಸ್ಪೋರ್ಟ್ ತಂಡಕ್ಕಾಗಿ ಸ್ಪರ್ಧಿಸಲಿರುವ ಈ ಜೋಡಿಯು ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಅತ್ಯಂತ ಕಠಿಣ ಸ್ಪರ್ಧೆ ಎನಿಸಿರುವ WRC3 ARC3 ಕ್ಲಾಸ್ (African Rally Championship) ಪಾಲ್ಗೊಳ್ಳಲಿದ್ದಾರೆ. ಕೀನ್ಯಾದ ನೈವಾಶದಲ್ಲಿ ನಡೆಯಲಿರುವ ಈ ರ್‍ಯಾಲಿಯು 1381.92 ಕಿಮೀ ದೂರದಿಂದ ಕೂಡಿದ್ದು, ಅತ್ಯಂತ ಕಠಿಣ ಸವಾಲಿನಿಂದ ಕೂಡಿದ 21 ಹಂತಗಳಿರುತ್ತವೆ. ಈ ಹಂತಗಳ ದೂರ 383.10 ಕಿಮೀ.
“ಸಫಾರಿ ರ್‍ಯಾಲಿಯು ಮೋಟಾರ್ ಸ್ಪೋರ್ಟ್‌ನಲ್ಲಿ ಅತ್ಯಂತ ಕಠಿಣ ಸವಾಲುಗಳಿಂದ ಕೂಡಿರುವುದಾಗಿದೆ. ಆ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ. ರ್‍ಯಾಲಿಯನ್ನು ಯಶಸ್ವಿಯಾಗ ಮುಗಿಸಿ ಅಮೂಲ್ಯವಾದ ಅನುಭವನ್ನು ಗಳಿಸುವುದು ನಮ್ಮ ಮೊದಲ ಉದ್ದೇಶವಾಗಿದೆ,” ಎಂದು ಸಹ ಚಾಲಕ ಮೂಸಾ ಶರೀಫ್ ಹೇಳಿದ್ದಾರೆ.
“ಇದು ಕನಸೊಂದು ನನಸಾದ ಕ್ಷಣ, WRC ಸಫಾರಿ ರ್‍ಯಾಲಿಯಲ್ಲಿ ಪಾಲ್ಗೊಳ್ಳುವುದೇ ಒಂದು ಗೌರವ, ನಾವು ಭಾರತದ ರ್‍ಯಾಲಿಯ ಸಾಮರ್ಥ್ಯವನ್ನು ಅಲ್ಲಿ ಪ್ರದರ್ಶಿಸುವೆವು.,” ಎಂದು ಚಾಲಕ ನವೀನ್ ಪುಲ್ಲಿಗಿಲ್ಲಾ ಹೇಳಿದ್ದಾರೆ. ನವೀನ್ ಅವರು ಇತ್ತೀಚಿಗೆ ಇಂಡೋನೇಷ್ಯಾದಲ್ಲಿ MRU Motorsport ಮಲೇಷ್ಯಾದ ತಾಂತ್ರಿಕ ನೆರವಿನಿಂದ ರ್‍ಯಾಲಿ ಪೂರ್ವ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದರು.
ಪುಲ್ಲಿಗಿಲ್ಲಾ ಹೈದರಾಬಾದ್ ಮೂಲದ ಆಫ್ ರೋಡ್ ಡ್ರೈವರ್. ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕಾಸರಗೋಡಿನ ರ್‍ಯಾಲಿಪಟು ಮೂಸಾ ಶರೀಫ್ 33 ವರ್ಷಗಳ ಅಪಾರ ಅನುಭವ ಹೊಂದಿರುವ ಸಹ ಚಾಲಕ. 10 ಬಾರಿ ರಾಷ್ಟ್ರೀಯ ಚಾಂಪಿಯನ್. 91 ಅಂತಾರಾಷ್ಟ್ರೀಯ ರ್‍ಯಾಲಿಗಳು ಸೇರಿದಂತೆ ಒಟ್ಟು 331 ರ್‍ಯಾಲಿಗಳಲ್ಲಿ ಸ್ಪರ್ಧಿಸಿದ್ದಾರೆ. ನವೀನ್ ಅವರ ನಿಖರ ಹಾಗೂ ಆಕ್ರಮಣಕಾಗಿ ಚಾಲನೆ ಮೂಸಾ ಅವರ ಅನುಭವದ ಸಲಹೆ ಹಾಗೂ ಮಾರ್ಗಸೂಚಿ ಇದರ ಸಮ್ಮಿಲನದಲ್ಲಿ ಭಾರತದ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
ಸಫಾರಿ ರ್‍ಯಾಲಿ ಕೀನ್ಯಾ 2025 ಇದು ವಿಶ್ವ ರ್‍ಯಾಲಿ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನ ರ್‍ಯಾಲಿ ಆಗಿದೆ. ಅನಿರೀಕ್ಷಿತವಾಗಿ ಬದಲಾಗುವ ಹವಾಮಾನ, ವಿಸ್ತಾರವಾದ ಭೂಪ್ರದೇಶ, ನಿಬ್ಬೆರಗುಗೊಳಿಸುವ ಪ್ರಕೃತಿ ಕೀನ್ಯಾ ರ್‍ಯಾಲಿಯ ವಿಶೇಷವಾಗಿದೆ, ರ್‍ಯಾಲಿಯ ತಾಂತ್ರಿಕ ಜಟಿಲತೆ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಪ್ರಸಿದ್ಧವೆನಿಸಿರುವ ಕ್ಯಾಂಪ್ ಮೊರನ್, ಲೋಲ್ಡಿಯಾ ಹಾಗೂ ಹೆಲ್ಸ್ ಗೇಟ್ ಮೊದಲಾದ ಸ್ಥಳಗಳಲ್ಲಿ ರ್‍ಯಾಲಿ ಹಾದುಹೋಗುತ್ತದೆ.
ಭಾರತದ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು. ನಮಗೆ ಸಿಕ್ಕ ಈ ಅವಕಾಶ ಭಾರತದ ಮತ್ತಷ್ಟು ಯುವ ರ್‍ಯಾಲಿಪಟುಗಳು ವಿದೇಶದ ನೆಲದಲ್ಲಿ ಸ್ಪರ್ಧೆ ಮಾಡಲು ಸ್ಪೂರ್ತಿಯಾಗಲಿ ಎಂದು ನವೀನ್ ಹೇಳಿದ್ದಾರೆ.