ಅಜಿಂಕ್ಯ ರಹಾನೆ ಕೋಲ್ಕೊತಾ ನೈಟ್ ರೈಡರ್ಸ್ ನಾಯಕ
ಕೋಲ್ಕೊತಾ: ಈ ಬಾರಿಯ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ TATA Indian Premier League ನಲ್ಲಿ ಕೋಲ್ಕೊತಾ ನೈಟ್ರೈಡರ್ಸ್ ತಂಡದ ನಾಯಕರಾಗಿ ಅಜಿಂಕ್ಯ ರಹಾನೆ ಹಾಗೂ ಉಪನಾಯಕರಾಗಿ ವೆಂಕಟೇಶ್ ಅಯ್ಯರ್ ಕಾರ್ಯನಿರ್ವಹಿಸಲಿದ್ದಾರೆ. KKR announce Ajinkya Rahane as captain, Venkatesh Iyer as vice-captain for 2025 TATA IPL
ಕೆಕೆಆರ್ ಫ್ರಾಂಚೈಸಿ ಸಿಇಒ, ವೆಂಕಿ ಮೈಸೂರು ಅವರು ಈ ಸುದ್ದಿಯನ್ನು ಪ್ರಕಟಿಸಿದ್ದು, “ಸಾಕಷ್ಟು ಅನುಭವ ಹಾಗೂ ಪ್ರಬುದ್ಧ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರನ್ನು ನಾಯಕನೆಂದು ಪ್ರಕಟಿಸಲು ಖುಷಿಯಾಗುತ್ತಿದೆ. ವೆಂಕಟೇಶ್ ಅಯ್ಯರ್ ಕೂಡ ಫ್ರಾಂಚೈಸಿ ಆಟಗಾರರಾಗಿದ್ದು, ಅವರಲ್ಲೂ ನಾಯಕತ್ವದ ಗುಣ ಇದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಈ ಇಬ್ಬರು ಆಟಗಾರರ ಪಾತ್ರ ಪ್ರಮುಖವಾಗಲಿದೆ,” ಎಂದರು.
“ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿರುವ ಕೆಕೆಆರ್ ತಂಡದ ನಾಯಕತ್ವ ವಹಿಸಿಲು ಕೇಳಿಕೊಂಡಿರುವುದು ನನ್ನ ಪಾಲಿಗೆ ಸಿಕ್ಕ ಗೌರವ. ನಮ್ಮದು ಅತ್ಯಂತ ಸಮತೋಲನದಿಂದ ಕೂಡಿದ ತಂಡ. ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಂಡದ ಎಲ್ಲರೊಂದಿಗೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವೆ,” ಎಂದು ನೂತನ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.
ಮಾರ್ಚ್ 22 ರ ಶನಿವಾರ ಈಡನ್ ಗಾರ್ಡನ್ಸ್ನಲ್ಲಿ ಕೆಕೆಆರ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಋತುವಿನ ಮೊದಲ ಪಂದ್ಯವನ್ನಾಡಲಿದೆ.