Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಈಡನ್‌ ಗಾರ್ಡನ್‌ನಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ಪೂಜೆ

ಕೋಲ್ಕೊತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಲಿ ಚಾಂಪಿಯನ್‌ ಕೋಲ್ಕೋತಾ ನೈಟ್‌ ರೈಡರ್ಸ್‌ ಪ್ರಸಕ್ತ ಸಾಲಿನ ಅಭ್ಯಾಸವನ್ನು ಈಡನ್‌ ಗಾರ್ಡನ್‌ನಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದೆ.

ಪ್ರಧಾನ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಅವರ ಮುಂದಾಳತ್ವದ ತರಬೇತಿ ಸಿಬ್ಬಂದಿ ಹಾಗೂ ಆಟಗಾರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. Kolkata Knight Riders Perform Traditional Pooja Ceremony at Eden Gardens Ahead of Training

ಬಾಲಿವುಡ್‌ ನಟ ಶಾರುಕ್‌ ಖಾನ್‌ ಮಾಲೀಕತ್ವದ ಕೆಕೆಆರ್‌ ತಂಡದ ನೂತನ ನಾಯಕ ಅಜಿಂಕ್ಯ ರಹಾನೆ ಹಾಗೂ ಪಿಚ್‌ ಕ್ಯುರೇಟರ್‌ ಸುಜನ್‌ ಮುಖರ್ಜಿ ಪೂಜಾ ವಿಧಿಗಳನ್ನು ಪೂರೈಸಿ ಮತ್ತೊಂದು ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಕೋಚ್‌ ಚಂದ್ರಕಾಂತ್‌ ಪಂಡಿತ್‌, ತರಬೇತಿಯ ಬಗ್ಗೆ ನಾವು ಈಗಾಗಲೇ ಯೋಜನೆ ರೂಪಿಸಿಕೊಂಡಿದ್ದೇವೆ, ಚಾಂಪಿಯನ್ಸ್‌ ಟ್ರೋಫಿಯಿಂದಾಗಿ ಕೆಲವು ಅಂತಾರಾಷ್ಟ್ರೀಯ ಆಟಗಾರರು ಲಭ್ಯವಿರಲಿಲ್ಲ. ಆದರೆ ನಮ್ಮ ಪ್ರಮುಖ ಆಟಗಾರರಲ್ಲಿ ಹೆಚ್ಚಿನವರು ಇಲ್ಲಿದ್ದರು. ನಮ್ಮ ಮನೆಯಂಗಣಕ್ಕೆ ಮರಳಿ ಬಂದಿರುವುದಕ್ಕೆ ಸಂಭ್ರಮ ಎನಿಸುತ್ತಿದೆ,” ಎಂದು ಹೇಳಿದರು.

ಹಾಲಿ ಚಾಂಪಿಯನ್‌ ಕೋಲ್ಕೊತಾ ನೈಟ್‌ರೈಡರ್ಸ್‌ ಋತುವಿನ ಮೊದಲ ಪಂದ್ಯದಲ್ಲಿ ಮಾರ್ಚ್‌ 22 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೆಣಲಿದೆ.


administrator