Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚಾಂಪಿಯನ್ಸ್‌ ಟ್ರೋಫಿ: ಉದ್ಘಾಟನಾ ಸಮಾರಂಭವೇ ರದ್ದು!

ಕರಾಚಿ: ಇದೇ ತಿಂಗಳ 19ರಿಂದ ಪಾಕಿಸ್ತಾನದಲ್ಲಿ ಆರಂಭಗೊಳ್ಳಲಿರುವ 2025ರ ಚಾಂಪಿಯನ್ಸ್‌ ಟ್ರೋಫಿಯ ಉದ್ಘಾಟನಾ ಸಮಾರಂಭವನ್ನೇ ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.

ಎರಡು ತಂಡಗಳು ತಡವಾಗಿ ಆಗಮಿಸುತ್ತಿರುವುದರಿಂದ ಉದ್ಘಾಟನಾ ಕಾರ್ಯಕ್ರಮ ರದ್ದುಗೊಳಿಸಲು ಮುಖ್ಯ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಪಾಕಿಸ್ತಾನದ ಕ್ರೀಡಾಂಗಣಗಳ ನವೀರಕನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುವುದೇ ಸಂಶಯವೆಂದು ಅಲ್ಲಿಯ ಮಾಧ್ಯಮಗಳು ಎರಡು ದಿನಗಳ ಹಿಂದೆ ವರದಿ ಮಾಡಿವೆ. ಎಂಟು ನಾಯಕರಿಂದ ಕೂಡಿದ ಛಾಯಾಗ್ರಹಣದ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಠಿಯನ್ನೂ ರದ್ದುಮಾಡಲಾಗಿದೆ ಎಂದು ತಿಳಿದುಬಂದಿದೆ. Late arrivals of the teams force to Pakistan cancelled the opening ceremony of Champions Trophy 2025.

ವರದಿಗಳ ಪ್ರಕಾರ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಹಾಗೂ ಕ್ರಿಕೆಟ್‌ ಆಸ್ಟ್ರೇಲಿಯಾ ತಮ್ಮ ಪ್ರವಾಸದ ವೇಳಾಪಟ್ಟಿಯನ್ನು ಐಸಿಸಿಗೆ ಈಗಾಗಲೇ ತಿಳಿಸಿವೆ. ಇಂಗ್ಲೆಂಡ್‌ ತಂಡ ಭಾರತ ಪ್ರವಾಸದಲ್ಲಿದ್ದರೆ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ ಟೆಸ್ಟ್‌ ಪಂದ್ಯವನ್ನಾಡುತ್ತಿದೆ. ಇಂಗ್ಲೆಂಡ್‌ ತಂಡ ಫೆಬ್ರವರಿ 18 ರಂದು ಲಾಹೋರ್‌ ತಲುಪಲಿದೆ. ಆಸ್ಟ್ರೇಲಿಯಾ ತಂಡ ಫೆಬ್ರವರಿ 19 ರಂದು ಲಾಹೋರ್‌ಗೆ ಆಗಮಿಸಲಿದೆ. ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಫೆಬ್ರವರಿ 15ರಂದು ದುಬೈ ತಲುಪಲಿವೆ. ಫೆಬ್ರವರಿ 12 ರಂದು ಅಫಘಾನಿಸ್ತಾನ ತಂಡ ಇಸ್ಲಾಮಾಬಾದ್‌ಗೆ ಆಗಮಿಸಲಿದೆ. ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಪಾಕಿಸ್ತಾನದಲ್ಲಿವೆ. ಈ ತಂಡಗಳು ಲಾಹೋರ್‌ನಲ್ಲಿ  ಪಾಕಿಸ್ತಾನದ ಜೊತೆ ಫೆಬ್ರವರಿ 8 ರಿಂದ 14 ರವರೆಗೆ ಏಕದಿನ ತ್ರಿಕೋನ ಸರಣಿಯನ್ನಾಡಲಿವೆ.

ಫೆಬ್ರವರಿ 19ರಂದು ಕರಾಚಿಯಲ್ಲಿ ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವದರೊಂದಿಗೆ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ ಸಿಗಲಿದೆ.


administrator