Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪ್ರಥ್ವಿ ಶಾ…. ರಾತ್ರಿ ಎಣ್ಣೆ ಪಾರ್ಟಿ, ಬೆಳಿಗ್ಗೆ 6 ಗಂಟೆಗೆ ಟೀಮ್‌!

ಮುಂಬಯಿ: ಪ್ರಥ್ವಿ ಶಾ ಅವರನ್ನು ಭವಿಷ್ಯದ ಸಚಿನ್‌ ತೆಂಡೂಲ್ಕರ್‌ ಮತ್ತು ವೀರೇಂದ್ರ ಸೆಹವಾಗ್‌ ಎಂದು ಬಿಂಬಿಸಿದ ಕಾಲವೊಂದಿತ್ತು. ಆದರೆ ಅಶಸ್ತಿನಿಂದ ವರ್ತಿಸಿದ ಈ ಆಟಗಾರ ಫಿಟ್ನೆಸ್‌‌ ಕಾಯ್ದುಕೊಳ್ಳದೆ, ತರಬೇತಿಗೆ ಹಾಜರಾಗದೆ ಈಗ ತಂಡದಿಂದ ಹೊರಗುಳಿದಿದ್ದಾರೆ. Late night parties, coming to hotel at 6am so Prithvi Shaw dropped.

ವಿಜಯ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗಿದ್ದ ಪ್ರಥ್ವಿ ಶಾ ಅವರನ್ನು ಮುಂಬೈ ಕ್ರಿಕೆಟ್ ಆಯ್ಕೆ ಸಮಿತಿ ತಂಡದಿಂದ ಹೊರಗಿಟ್ಟಿದೆ. ಪ್ರಥ್ವಿ ಶಾ ಸೋಷಿಯಲ್‌ ಮೀಡಿಯಾದಲ್ಲಿ ಅತ್ಯಂತ ಭಾವುಕರಾಗಿ ಬರೆದಿರುವುದು ಮುಂಬಯಿ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಪಂದ್ಯ ಮುಗಿದ ಬಳಿಕ ಶಾ ತಡರಾತ್ರಿಯ ಪಾರ್ಟಿಗಳಿಗೆ ಹೋಗುತ್ತಿದ್ದರು. ಕುಡಿದು ಅಲ್ಲೇ ಮಲಗಿ ಬೆಳಿಗ್ಗೆ 6 ಗಂಟೆಗೆ ತಂಡ ತಂಗಿದ್ದ ಹೊಟೇಲ್‌ಗೆ ಹಿಂದಿರುಗುತಿದ್ದರು. ತಂಡದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.

ಚೆಂಡನ್ನು ತಡೆಯಲಾಗುತ್ತಿಲ್ಲ: ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಚಾಂಪಿಯನ್‌ ಮುಂಬಯಿ ಕ್ರಿಕೆಟ್‌ ತಂಡ ಹಲವು ಪಂದ್ಯಗಳಲ್ಲಿ ಕೇವಲ 10 ಆಟಗಾರರೊಂದಿಗೆ ಫೀಲ್ಡಿಂಗ್‌ ಮಾಡಿತ್ತು. ಪ್ರಥ್ವಿ ಶಾ ಅವರನ್ನು ಅಡಗಿಸಿದ್ದೆವು ಎಂದು ಮುಂಬಯಿ ಕ್ರಿಕೆಟ್‌‌ ಸಂಸ್ಥೆಯವರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ಶಾ ಗೆ ಸಮರ್ಪಕವಾಗಿ ಬ್ಯಾಟಿಂಗ್‌ ಮಾಡಲಾಗುತ್ತಿಲ್ಲ, ಅವರ ಫಿಟ್ನೆಸ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವರ್ತನೆ, ಅಶಿಸ್ತು ಪ್ರಮುಖ. ಅವರಿಗಾಗಿ ನಾವು ಪ್ರತ್ಯೇಕ ನಿಯಮವನ್ನು ರೂಪಿಸಲು ಸಾಧ್ಯವಿಲ್ಲ ಎಂದು ಎಂಸಿಎ ಪದಾಧಿಕಾರಿಗಳು ತಿಳಿಸಿದ್ದಾರೆ.


administrator