Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೆಸ್ಸಿ 8 ಬೆರಳಿಗೆ 8 ಉಂಗುರ ಧರಿಸಿದ್ದು ಏಕೆ?

ಫುಟ್ಬಾಲ್‌ ಜತ್ತಿನ ದೊರೆ ಲಿಯೊನೆಲ್‌ ಮೆಸ್ಸಿ ಎಂಟನೇ ಬಾರಿಗೆ ಬ್ಯಾಲಾನ್‌ ಡಿʼಓರ್‌ ಪ್ರಶಸ್ತಿ ಗೆದ್ದ ನಂತರ ಎಂಟು ಬೆರಳಿಗೆ ಎಂಟು ಉಂಗುರ ಧರಿಸಿ ಕಾಣಿಸಿ ಕೊಂಡಿದ್ದು ಕ್ರೀಡಾ ಜಗತ್ತಿಗೆ ಅಚ್ಚರಿಯನ್ನುಂಟು ಮಾಡಿರುವುದು ಸಹಜ. Lionel Messi wore eight rings on his fingers for adidas promotion.

ಆದರೆ ಅದು ತನ್ನ ಪ್ರಾಯೋಜಕರಾದ adidas ಕಂಪೆನಿಯ ಪ್ರಮೋಷನ್‌ಗಾಗಿ. ಮೆಸ್ಸಿ ಎಂಟು ಬ್ಯಾಲಾನ್‌ ಡಿʼಓರ್‌ ಪ್ರಶಸ್ತಿ ಗೆದ್ದಿರುವ ಹಿನ್ನೆಲೆಯಲ್ಲಿ adidas 8 ವಿಶೇಷ ಉಂಗುರಗಳನ್ನು ತಯಾರಿಸಿತ್ತು. ಎನ್‌ಬಿಎ ದಂತಕತೆ ಬಿಲ್‌ ರಸೆಲ್‌‌ ಅವರಿಗೆ ಗೌರವ ನೀಡುವ ಉದ್ದೇಶದಿಂದ ಮೆಸ್ಸಿ ಎಂಟು ಬೆರಳುಗಳಿಗೆ ಅಡಿಡಾಸ್‌ ತಯಾರಿಸಿದ ಉಂಗುರಗಳನ್ನು ಧರಿಸಿ ರಸೆಲ್‌ ಅವರಂತೆಯೇ ಫೋಟೋಕ್ಕೆ ಫೋಸ್‌ ನೀಡಿದರು.

2022ರಲ್ಲಿ ಕತಾರ್‌ನಲ್ಲಿ ನಡೆದ FIFA World Cup ಗೆಲ್ಲುವ ಮೂಲಕ ಮೆಸ್ಸಿ ಅರ್ಜೆಂಟೀನಾಕ್ಕೆ ಮತ್ತೊಮ್ಮೆ ವಿಶ್ವಕಪ್‌ ತಂದುಕೊಟ್ಟರು. ಈ ಸಾಧನೆಗಾಗಿ ಅವರಿಗೆ ಬಂಗಾರದ ಚೆಂಡಿನ ಬ್ಯಾಲಾನ್‌ ಡಿʼಓರ್‌ ಪ್ರಶಸ್ತಿ ನೀಡಲಾಯಿತು. 1996ರಲ್ಲಿ ಅಮೆರಿಕದ ಎನ್‌ಬಿಎ ದಂತಕತೆ ರಸೆಲ್‌ ಅವರು ಇದೇ ರೀತಿಯ ಫೋಸ್‌ ನೀಡಿದ್ದರು. ಅದೇ ಭಾವಚಿತ್ರದಂತೆ ಮೆಸ್ಸಿ ಕೂಡ ಚಿನ್ನದ ಉಂಗುರ ಧರಿಸಿ ಅಮೆರಿದ ಕ್ರೀಡಾ ತಾರೆಗೆ ಗೌರವ ಸಲ್ಲಿಸಿದರು.


administrator