ಸ್ಪೋರ್ಟ್ಸ್ಮೇಲ್ ವರದಿ
ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು 8-6 ಗೋಲುಗಳ ಅಂತರದಲ್ಲಿ ಮಣಿಸಿದ ಮಹಾರಾಷ್ಟ್ರ ತಂಡ ಹಾಕಿ ಇಂಡಿಯಾ 2ನೇ ರಾಷ್ಟ್ರೀಯ ೫ ಎ ಸೈಡ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಈ ಚಾಂಪಿಯನ್ಷಿಪ್ ಪುರುಷ ಹಾಗೂ ಮಹಿಳಾ ಆಟಗಾರರ ಸಮ್ಮಿಶ್ರಣದಲ್ಲಿ ನಡೆಯಿತು.
ಮಹಾರಾಷ್ಟ್ರದ ಪರ ಟೈರಾನ್ ಪೆರೆರಾ ೩ ಮತ್ತು ೧೯ನೇ ನಿಮಿಷ, ಸಯ್ಯದ್ ನಿಯಾಜ್ ೭ ಮತ್ತು ೧೬ನೇ ನಿಮಿಷ, ಪ್ರೀತಿ ದುಬೈ ೧೧, ೧೩, ೧೪ ಹಾಗೂ ೨೦ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಉತ್ತರ ಪ್ರದೇಶದ ಪರ ಸೌಲಭ್ ಆನಂದ್ ೩ ಮತ್ತು ೧೨ನೇ ನಿಮಿಷ, ವಿಶಾಲ್ ಸಿಂಗ್ ೫ನೇ ನಿಮಿಷ, ರಾಜ್ ಕುಮಾರ್ ೬ನೇ ನಿಮಿಷ, ಶ್ಯಾಮ್ ಟಿಡ್ಗಾಮ್ ೧೫ನೇ ಮತ್ತು ೧೮ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಹಾಕಿ ಹರಿಯಾಣ ವಿರುದ್ಧ ೪-೨ ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು. ಉತ್ತರ ಪ್ರದೇಶ ತಂಡ ಹಾಕಿ ಕರ್ನಾಟಕ ವಿರುದ್ಧ ೫-೪ ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್ಗೆ ಲಗ್ಗೆ ಇಟ್ಟಿತು.