Friday, November 22, 2024

ಮಿಲಾಗ್ರಿಸ್‌ ಕಾಲೇಜಿಗೆ ಚಾಂಪಿಯನ್‌ ಪಟ್ಟ

sportsmail

ಕುಂದಾಪುರ ಫ್ರೆಂಡ್ಸ್‌ ವಾಲಿಬಾಲ್‌ ಕ್ಲಬ್‌ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕಾಲೇಜುಗಳ ಆಹ್ವಾನಿತ ವಾಲಿಬಾಲ್‌ ಚಾಂಪಿಯನ್ಷಿಪ್‌ನಲ್ಲಿ ಉಡುಪಿಯ ಕಲ್ಯಾಣಪುರದ ವನಿತೆಯರ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದು, ಪುರುಷರ ವಿಭಾಗದಲ್ಲಿ ಕುಂದಾಪುರದ ಬ್ಯಾರೀಸ್‌ ಕಾಲೇಜು ಅಗ್ರ ಸ್ಥಾನ ಪಡೆದಿದೆ.

ಕ್ರಿಕೆಟ್‌ನ ಅಬ್ಬರದಲ್ಲಿ ಇತರ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಕುಂದಾಪುರ ಫ್ರೆಂಡ್ಸ್‌ ವಾಲಿಬಾಲ್‌ ಕ್ಲಬ್‌ ಈ ಉತ್ತಮ ಚಾಂಪಿಯನ್ಷಿಪ್‌ ಆಯೋಜಿಸಿರುವುದು ಗಮನಾರ್ಹ.

ಆರು ತಂಡಗಳ ಲೀಗ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಕುಂದಾಪುರದ ಬ್ಯಾರೀಸ್‌ ಕಾಲೇಜು ತಂಡ ಬಲಿಷ್ಠ ಬಸ್ರೂರು ಶಾರದಾ ಕಾಲೇಜು ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಶಾರದಾ ಕಾಲೇಜು ಉತ್ತಮ ಹೋರಾಟದ ನಡುವೆಯೂ ಅಲ್ಪ ಅಂತರದಲ್ಲಿ ಚಾಂಪಿಯನ್‌ ಪಟ್ಟ ವಂಚಿತವಾಗಿ ರನ್ನರ್‌ ಅಪ್‌ಗೆ ತೃಪ್ತಿಟ್ಟಿತು.

ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜು ಮೂರನೇ ಸ್ಥಾನ ಗಳಿಸಿತು.

ಫೈನಲ್‌ ಪಂದ್ಯದಲ್ಲಿ ಕುಂದಾಪುರ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಕಾಲೇಜಿನ ತಂಡವನ್ನು ಮಣಿಸಿದ ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು.

ರೋಚಕವಾಗಿ ನಡೆದ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದರೂ ಅಲ್ಪ ಅಂತರದಲ್ಲಿ ಪ್ರಶಸ್ತಿಯಿಂದ ವಂಚಿತವಾದ ಕೊಟೇಶ್ವರ ವನಿತಾ ತಂಡ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತು.

ಕಲ್ಯಾಣಪುರದ ಏಸ್‌ ವಾಲಿಬಾಲ್‌ ಕ್ಲಬ್‌ ಮೂರನೇ ಸ್ಥಾನ ಪಡೆಯಿತು.

ಮೊದಲ ಸ್ಥಾನ ಗಳಿಸಿದ ತಂಡಗಳು 5,000ರೂ ನಗದು ಬಹುಮಾನದೊಂದಿಗೆ ಪ್ರತಿಷ್ಠಿತ ಟ್ರೋಫಿ ಗೆದ್ದುಕೊಂಡವು. ಎರಡನೇ ಸ್ಥಾನ ಗಳಿಸಿದ ತಂಡಗಳು ಟ್ರೋಫಿಯೊಂದಿಗೆ 3,000 ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡವು. ಮೂರನೇ ಸ್ಥಾನ ವಿಜೇತ ತಂಡಗಳು ಟ್ರೋಫಿ ಹಾಗೂ 2,000 ರೂ. ನಗದು ಬಹುಮಾನ ಗೆದ್ದವು.

ವನಿತೆಯರ ವಿಭಾಗದ ಬಹುಮಾನ ವಿತರಣೆಯನ್ನು ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲೋನಾ ಲೂಯಿಸ್‌ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ AIIMS ಹೈದರಾಬಾದ್‌ ಇದರ MD ಡಾ. ರಶ್ಮಿ, ಕುಂದಾಪುರ, ಆಯುರ್ವೇದ ತಜ್ಞೆ ಡಾ. ಸೋನಿ ಪಾಲ್ಗೊಂಡಿದ್ದರು.

ಪುರುಷರ ವಿಭಾಗದ ಬಹುಮಾನ ವಿತರಣೆಯನ್ನು ಕುಂದಾಪುರದ ಉದ್ಯಮಿ, ತಕಬಾ ದ ಕಿರಿಟ್‌ ಶೆಟ್ಟಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕುಂದಾಪುರ ಫ್ರೆಂಡ್ಸ್‌ ವಾಲಿಬಾಲ್‌ ಕ್ಲಬ್‌ ಇದರ ಅಧ್ಯಕ್ಷ ರಮಾನಂದ ಹಾಗೂ ಹಿರಿಯ ಸದಸ್ಯರಾದ ಗೋಪಾಲ್‌ ಹಾಜರಿದ್ದರು.

Related Articles