Friday, November 22, 2024

ಬೆಂಗಳೂರಿನಲ್ಲಿ ಭಾನುವಾರ ಗೇಮ್‌ಚೇಂಜರ್ 10ಕೆ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನಲ್ಲಿ ನಿತ್ಯವೂ ಕ್ರೀಡಾಕೂಟಗಳ ಸಡಗರ, ಈ ಸಡಗಕ್ಕೆ ಮತ್ತೊಂದು ಸೇರ್ಪಡೆ ಗೇಮ್ ಚೇಂಜರ್ 10ಕೆ ರನ್. ಆಗಸ್ಟ್ 26ರಂದು ಬೆಂಗಳೂರಿನ ಸಹಕಾರ ನಗರದಲ್ಲಿ ನಡೆಯಲಿರುವ ಈ ಓಟದಲ್ಲಿ ದೇಶದ ಪ್ರಮುಖ ಓಟಗಾರರು ಪಾಲ್ಗೊಳ್ಳಲಿದ್ದಾರೆ. ಸೇನೆ, ಭಾರತೀಯ ಕ್ರೀಡಾ ಪ್ರಾಧಿಕಾರ, ಕರ್ನಾಟಕ, ತಮಿಳುನಾಡು,  ಕೇರಳ ಹಾಗೂ ಆಂಂ‘್ರಪ್ರದೇಶದ ಪ್ರಮುಖ ಓಟಗಾರರು ಇಲ್ಲಿ ಸ್ಪರ್ಧಿಸಲಿದ್ದಾರೆ.

ಸಹಕಾರ ನಗರದ ಅಂಗಣದಲ್ಲಿ ಜಿಸಿ ೧೦ಕೆ ರನ್ ಆರಂಭಗೊಳ್ಳಲಿದೆ. ಭಾನುವಾರ ಬೆಳಿಗ್ಗೆ ೬ ಗಂಟೆಗೆ ಮ್ಯಾರಥಾನ್‌ಗೆ ಚಾಲನೆ ಸಿಗಲಿದೆ. ಬೆಂಗಳೂರು ಫುಟ್ಬಾಲ್ ತಂಡದ ಇಬ್ಬರು ಆಟಗಾರರು ಈ ಓಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟ್ರೈಕರ್ ಪರಾಗ್ ಶ್ರೀವಾಸ್ ಹಾಗೂ ಡಿಫೆಂಡರ್ ವಿಶ್ವಾಸ್ ಕುಮಾರ್ ದಾರ್ಜೀ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಗ್ರ ಸ್ಥಾನ ಪಡೆದವರಿಗೆ ರೂ. ೧೫,೦೦೦ ಹಾಗೂ ರನ್ನರ್ ಅಪ್ ಸ್ಥಾನ ಪಡೆದವರಿಗೆ ೧೦,೦೦೦ ರೂ. ನಗದು ಬಹುಮಾನ ಸಿಗಲಿದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದವರಿಗೆ ಅನುಕ್ರಮವಾಗಿ ೬,೦೦೦ ರೂ. ಹಾಗೂ ೪,೦೦೦ ರೂ. ನೀಡಲಾಗುವುದು. ೫ ರಿಂದ ೧೦ನೇ ಸ್ಥಾನ ಗಳಿಸಿದವರಿಗೆ ತಲಾ ೨,೦೦೦ ರೂ. ನಗದು ಬಹುಮಾನ ನೀಡಲಾಗುವುದು. ೫ಕೆ ಚಾರಿಟಿ ರನ್ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.
ಬೆಂಗಳೂರಿನ ಯುವಕರನ್ನು ಗಮನದಲ್ಲಿರಿಸಿಕೊಂಡು ಈ ಓಟವನ್ನು ಆಯೋಜಿಸಲಾಗುತ್ತಿದೆ. ಯುವಕರಲ್ಲಿ ಉತ್ಸಾಹ ತುಂಬುವುದು ಹಾಗೂ ಅವರು ಸ್ಫೂರ್ತಿಯಿಂದ ಜೀವನ ನಡೆಸುವಂತೆ ಮಾಡುವುದು ಈ ಓಟದ ಉದ್ದೇಶ ಎಂದು ಗೇಮ್‌ಚೇಂಜರ್‌ನ ನಿರ್ದೇಶಕ ರಕ್ಷಾ ರಾಮಯ್ಯ ಹೇಳಿದ್ದಾರೆ. ನಿರಾಶ್ರಿತ ಯುವಕರಿಗಾಗಿ ನೆರವು ನೀಡುವ ಎನ್‌ಜಿಒ ರೀಚಿಂಗ್ ಹ್ಯಾಂಡ್ ಕೂಡ ಈ ಓಟದಲ್ಲಿ ಕೈ ಜೋಡಿಸಿದೆ. ಕೇರಳ ಹಾಗೂ ಕೊಡಗಿನಲ್ಲಿ ನೆರೆ ಹಾವಳಿಗೆ ತುತ್ತಾದವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದ ೩೧೦ಕ್ಕೂ ಹೆಚ್ಚು ಸೇನಾ ಸಿಬ್ಬಂದಿಗಳು ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ೧೦ ಕೆ ಸ್ಪರ್ಧಾತ್ಮಕ ,  ೫ ಕೆ ಕಾರ್ಪೋರೇಟ್  ಸ್ಪರ್ಧಾತ್ಮಕ  ರನ್ ಹಾಗೂ ೫ಕೆ ಸಮಯ ಮಿತಿ ಇಲ್ಲದ ಓಟವನ್ನು  ಆಯೋಜಿಸಲಾಗಿದೆ.
ನೋಂದಣಿ ಭಾನುವಾರ ಬೆಳಿಗ್ಗೆ ೫ -೪೫ಕ್ಕೆ ನಡೆಯಲಿದೆ, ೬ ಗಂಟೆಗೆ ಉದ್ಘಾಟನೆ ಹಾಗೂ ೬-೩೦ಕ್ಕೆ ಓಟ ಆರಂಭವಾಗಲಿದೆ.

Related Articles