Thursday, September 19, 2024

ಭಾರತದ ಮೊದಲ ನೈಟ್ ಸ್ಟ್ರೀಟ್ ರೇಸ್ ಆಯೋಜಿಸಿದ ಮೊಬಿಲ್

ಬೆಂಗಳೂರು, 15 ಸೆಪ್ಟೆಂಬರ್ 2024: ಆಟೋಮೋಟಿವ್ ಲೂಬ್ರಿಕೆಂಟ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮೊಬಿಲ್™ ಸಂಸ್ಥೆಯು ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (ಆರ್ ಪಿ ಪಿ ಎಲ್) ಸಹಭಾಗಿತ್ವದಲ್ಲಿ ಚೆನ್ನೈ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್‌ನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆದ ‘ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2024’ ನಲ್ಲಿ ಭಾರತದ ಮೊದಲ ನೈಟ್ ಸ್ಟ್ರೀಟ್ ರೇಸ್ ಆಯೋಜಿಸಿತ್ತು. ಇದು ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಜೊತೆಗಿನ ಮೊಬಿಲ್ ಸಂಸ್ಥೆಯ ಮೂರನೇ ವರ್ಷದ ಸಹಯೋಗವಾಗಿದ್ದು, ಈ ಅತ್ಯಾಕರ್ಷಕ ಕಾರ್ಯಕ್ರಮದಲ್ಲಿ ವೇಗ, ಕೌಶಲ್ಯ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ಅದ್ಭುತ ಸಂಯೋಜನೆಯ ಪ್ರದರ್ಶನ ನಡೆಯಿತು. Mobil organized India’s first night street race at Chennai.

ಇಂಡಿಯನ್ ರೇಸಿಂಗ್ ಲೀಗ್ ಮತ್ತು ಫಾರ್ಮುಲಾ 4 ಚಾಂಪಿಯನ್‌ಶಿಪ್ ಎರಡಕ್ಕೂ ಅಧಿಕೃತ ಲೂಬ್ರಿಕೆಂಟ್ ಪಾಲುದಾರರಾಗಿರುವ ಮೊಬಿಲ್™  ಸಂಸ್ಥೆಯು ‘ಮೊಬಿಲ್ 1 ಮೂಲಕ ಕಾರ್ಯಕ್ಷಮತೆ’ ಎಂಬ ಕಾರ್ಯಕ್ರಮದ ಮೂಲಕ ಭಾರತೀಯ ಮೋಟಾರ್‌ಸ್ಪೋರ್ಟ್‌ ಕ್ಷೇತ್ರವನ್ನು ಮುನ್ನಡೆಸುವ ಬದ್ಧತೆಯನ್ನು ಸಾರಿದೆ. ಆರ್ ಪಿ ಪಿ ಎಲ್ ಆಯೋಜಿಸಿದ್ದ ಈ ಉತ್ಸವವು ದೇಶಾದ್ಯಂತ ನವೆಂಬರ್ 2024ರವರೆಗೆ ನಡೆಯಲಿದ್ದು, ಐದು ಸುತ್ತುಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾರತದಲ್ಲಿ 50 ವರ್ಷಗಳನ್ನು ಕಳೆದಿರುವ ಮೊಬಿಲ್1ರ 50 ವರ್ಷಗಳ ಸಂಭ್ರಮಾಚರಣೆ ಕೂಡ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿ ಎಕ್ಸಾನ್ ಮೊಬಿಲ್ ಲೂಬ್ರಿಕೆಂಟ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಓ ಶ್ರೀ ವಿಪಿನ್ ರಾಣಾ ಅವರು, “ಇಂಡಿಯಾ ರೇಸಿಂಗ್ ವೀಕ್‌ನ ಭಾಗವಾಗಲು ನಾವು ಹೆಮ್ಮೆ ಪಡುತ್ತೇವೆ. ಜಾಗತಿಕ ಮೋಟಾರ್‌ಸ್ಪೋರ್ಟ್‌ ಕ್ಷೇತ್ರವನ್ನು ಮುನ್ನಡೆಸುವ ನಮ್ಮ ಬದ್ಧತೆಯನ್ನು ಈ ಮೂಲಕ ಸಾರಲಾಗಿದೆ. ಜೊತೆಗೆ ಇದು ಭಾರತದಲ್ಲಿನ ರೇಸಿಂಗ್‌ ಭವಿಷ್ಯವನ್ನು ಉತ್ತಮಗೊಳಿಸುವ ಪ್ರಯತ್ನವಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಾವು ಮೊಬಿಲ್™ ಉತ್ಪನ್ನಗಳ ಮೂಲಕ ರೇಸರ್‌ಗಳಿಗೆ ಶಕ್ತಿ ತುಂಬಿದ್ದೇವೆ ಮತ್ತು ಅವರು ಅವರ ಸಾಮರ್ಥ್ಯ ಮೀರಿದ ಪ್ರದರ್ಶನ ನೀಡಲು ಪ್ರೇರೇಪಣೆ ನೀಡಿದ್ದೇವೆ” ಎಂದು ಹೇಳಿದರು.

ಆರ್ ಪಿ ಪಿ ಎಲ್ ನ ಅಧ್ಯಕ್ಷರಾದ ಶ್ರೀ ಅಖಿಲೇಶ್ ರೆಡ್ಡಿ ಅವರು ಮಾತನಾಡಿ , “ಮೊಬಿಲ್™ ಜೊತೆಗಿನ ಈ ಸಹಭಾಗಿತ್ವದ ಕುರಿತು ನಮಗೆ ಅಪಾರ ಸಂತೋಷ ಇದೆ. ಜೊತೆಗೆ ಭಾರತದ ಮೊದಲ ನೈಟ್ ಸ್ಟ್ರೀಟ್ ರೇಸ್ ಆಯೋಜಿಸಿದ್ದಕ್ಕೆ ಹೆಮ್ಮೆ ಇದೆ. ನಮ್ಮ ರೇಸರ್‌ಗಳ ಪ್ರತಿಭೆ ಮತ್ತು ಉತ್ಸಾಹ ಪ್ರದರ್ಶನಕ್ಕೆ ರಾತ್ರಿ ರೇಸ್ ಕಾರ್ಯಕ್ರಮವು ಮತ್ತಷ್ಟು ಉತ್ಸಾಹ ಮತ್ತು ಶಕ್ತಿ ತುಂಬಿದೆ. ಎಫ್4 ಮತ್ತು ಐ ಆರ್ ಎಲ್ ನ ಎಲ್ಲಾ ತಂಡಗಳಿಗೆ ಮತ್ತು ಅವರ ಅದ್ಭುತ ಪ್ರದರ್ಶನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಭವಿಷ್ಯದಲ್ಲಿಯೂ ಇದೇ ಪ್ರದರ್ಶನ ಮುಂದುವರಿಸಲು ಹಾರೈಸುತ್ತೇವೆ” ಎಂದು ಹೇಳಿದರು.

ಈ ಆಕರ್ಷಕ ಕಾರ್ಯಕ್ರಮದಲ್ಲಿ ತಂಡದ ಮಾಲೀಕರಾದ ಬಾಲಿವುಡ್ ತಾರೆಯರಾದ ಜಾನ್ ಅಬ್ರಹಾಂ ಮತ್ತು ಅರ್ಜುನ್ ಕಪೂರ್, ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಮತ್ತು ತೆಲುಗು ನಟ ನಾಗ ಚೈತನ್ಯ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡುವುದರೊಂದಿಗೆ ಈ ಅದ್ಭುತ ಕಾರ್ಯಕ್ರಮ ಮುಕ್ತಾಯಗೊಂಡಿತು. ಈ ಮೂಲಕ ಭಾರತದಲ್ಲಿ ಮೋಟಾರ್ ಸ್ಪೋರ್ಟ್ ಕ್ಷೇತ್ರದ ಭವಿಷ್ಯವನ್ನು ಉತ್ತಮಗೊಳಿಸುವ ಮೊಬಿಲ್1 ಪ್ರಯತ್ನ ಸಾರ್ಥಕ್ಯ ಕಂಡಿತು.

Related Articles