ಛೆಟ್ರಿಯ 100ನೇ ಪಂದ್ಯದ ಚಿತ್ರಕ್ಕೆ ISPA ಪ್ರಶಸ್ತಿ
ಬೆಂಗಳೂರು: ಮುಂಬಯಿಯ ನಿಖಿಲ್ ಪಾಟೀಲ್ ಅವರು ಸೆರೆ ಹಿಡಿದ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಅವರ 100ನೇ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದ ಅದ್ಭುತ ಚಿತ್ರ ಮೊದಲ ಇಂಡಿಯನ್ ಸ್ಪೋರ್ಟ್ಸ್ ಫೋಟೋಗ್ರಾಫಿ Inaugural Indian Sports Photography Award ISPA ಪ್ರಶಸ್ತಿಯಲ್ಲಿ ಅಗ್ರ ಸ್ಥಾನ ಗಳಿಸಿದೆ. Mumbai’s Nikhil Patil Clinches Top Prize at Inaugural Indian Sports Photography Awards
ಭಾರತದ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆಯಿತು.ಮಹಿಳಾ ವಿಭಾಗದಲ್ಲಿ ನೆಹಾ ಗನೇರಿವಾಲ್ ಅವರು ಪ್ರಶಸ್ತಿ ಪಡೆದರೆ, ಕ್ರಿಕೆಟ್ ವಿಭಾಗದಲ್ಲಿ ಸಂದೀಪ್ ಪರಶುರಾಮ್ ಪಾಂಗೇರ್ಕರ್ ಮೂರನೇ ಸ್ಥಾನ ಗಳಿಸಿದರು.
ಅಪಾರ ಸಂಖ್ಯೆಯಲ್ಲಿ ಪ್ರವೇಶ ಬಂದಿದ್ದು, ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ವಿಜೇತರರನ್ನು ಆಯ್ಕೆ ಮಾಡಿದೆ. ಗಗನ್ ನಾರಂಗ್ ಅವರ ಅನುಪಸ್ಥಿತಿಯಲ್ಲಿ ಖ್ಯಾತ ಕ್ರೀಡಾಪತ್ರಕರ್ತರಾದ ಶಾರ್ದಾ ಉಗ್ರಾ ಅವರು ವಿಜೇತರರನ್ನು ಪ್ರಕಟಿಸಿದರು.
ಪಾಸಿಟಿವ್ ಸ್ಪೋರ್ಟ್ಸ್ ವೈಬ್ ಕಮ್ಯೂನಿಟಿಯ Positive Sports Vibe Community ಸ್ಥಾಪಕ ಹಾಗೂ ಈ ಪ್ರಶಸ್ತಿ ಕಾರ್ಯಕ್ರಮದ ರೂವಾರಿ ಪೌಲ್ ಆರ್ Paul R ಮಾತನಾಡಿ, “ತಮ್ಮ ಲೆನ್ಸ್‌ಗಳ ಮೂಲಕ ಕ್ರೀಡೆಗೆ ಜೀವ ತುಂಬಿದವರನ್ನು ಗಮನದಲ್ಲಿರಿಸಿಕೊಂಡು ISPA ಹುಟ್ಟಿಕೊಂಡಿದೆ. ಭಾರತದಲ್ಲಿ ಕ್ರೀಡಾ ಫೋಟೋಗ್ರಾಫಿಗೆ ಹೊಸ ಸಂಪ್ರದಾಯವನ್ನು ಹುಟ್ಟುಹಾಕುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರಂಬದಲ್ಲೇ ದೊರೆತ ಪ್ರತಿಭೆಗಳನ್ನು ಕಂಡಾಗ ಅದ್ಭುತ ಎನಿಸಿತು,” ಎಂದಿದ್ದಾರೆ.