Thursday, October 31, 2024

ಮನೆಯಂಗಣದಲ್ಲಿ ಮಿಂಚಿದ ವಾರಿಯರ್ಸ್

ಸ್ಪೋರ್ಟ್ಸ್ ಮೇಲ್ ವರದಿ 

 

ಆರಂಭಿಕ ಆಟಗಾರ ರಾಜು ಭಟ್ಕಳ್  ಹಾಗೂ ಹೊಯ್ಸಳ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡ ೬ ವಿಕೆಟ್ ಜಯ ಗಳಿಸಿದೆ.

ಶಿವಮೊಗ್ಗ ತಂಡವನ್ನು ೧೪೬ ರನ್‌ಗೆ ಆಲೌಟ್ ಮಾಡಿದ ಮೈಸೂರು ತಂಡ ನಂತರ ರಾಜು ಭಟ್ಕಳ್  ಹಾಗೂ ಅರ್ಜುನ್ ಹೊಯ್ಸಳ  ಮೊದಲ ವಿಕೆಟ್ ಜತೆಯಾಟದಲ್ಲಿ ೯೯ ರನ್ ಗಳಿಸುವುದರೊಂದಿಗೆ  ಲಯನ್ಸ್  ಸತತ ಮೂರನೇ ಸೋಲನುಭವಿಸಿತು.  ಅರ್ಜುನ್ ಹೊಯ್ಸಳ   ೨೮ ಎಸೆತಗಳಲ್ಲಿ ೩ ಬೌಂಡರಿ ಹಾಗೂ  ೨ ಸಿಕ್ಸರ್ ನೆರವಿನಿಂದ  ೪೦ ರನ್ ಗಳಿಸಿದರೆ, ರಾಜು ಭಟ್ಕಳ್ ೪೫ ಎಸೆತಗಳಲ್ಲಿ  ೮ ಬೌಂಡರಿ  ನೆರವಿನಿಂದ ೫೯ ರನ್ ಗಳಿಸಿದರು. ಮೈಸೂರು ವಾರಿಯರ್ಸ್ ಇನ್ನೂ ೧೬ ಎಸೆತ ಬಾಕಿ ಇರುವಾಗಲೇ ಜಯದ ನಗು ಬೀರಿತು.
ಅಭಿಮನ್ಯು ಮಿಥುನ್ ಆಗಮನದಿಂದ ಶಿವಮೊಗ್ಗ ಲಯನ್ಸ್ ತಂಡದ ಬಲ ಹೆಚ್ಚಿತು ಎಂದೇ ಊಹಿಸಲಾಗಿತ್ತು,  ಆದರೆ ರನ್ ಗಳಿಸಲು ಪರದಾಡಿದ ತಂಡ  ಮತ್ತು ಸೋಲಿಗೆ ಶರಣಾಯಿತು. ಆದಿತ್ಯ ಸೋಮಣ್ಣ  ೨೦ ಎಸೆತಗಳಲ್ಲಿ ಅಜೇಯ ೩೯ ರನ್ ಗಳಿಸಿ ತಂಡಕ್ಕೆ ಸಾಧಾರಣ ಮೊತ್ತದಲ್ಲಿ ನೆರವಾದರು. ಆರ್. ಜೊನಾಥನ್  ೨೬ ಎಸೆತಗಳಲ್ಲಿ ೨೯ ರನ್ ಗಳಿಸಿದರು. ವೈಶಾಖ್ ವಿಜಯ ಕುಮಾರ್ ೩೬ ರನ್‌ಗೆ ೨ ವಿಕೆಟ್ ಗಳಿಸಿದರು. ಶಿವಮೊಗ್ಗ ಲಯನ್ಸ್ ಕೇವಲ ೧೪೬ ರನ್‌ಗೆ ಸರ್ವ ಪತನ ಕಂಡಿತು.

Related Articles