ರಾಷ್ಟ್ರೀಯ ಮೌಂಟೇನ್ ಬೈಕ್: ಕರ್ನಾಟಕ ಸಮಗ್ರ ಚಾಂಪಿಯನ್
ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್‌ನಲ್ಲಿ ನಡೆದ 21ನೇ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಕರ್ನಾಟಕ ಒಟ್ಟು 11 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದು ಪ್ರಭುತ್ವ ಸಾಧಿಸಿದೆ. National Mountain Bike Championship Karnataka emerged as overall Champion.
ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ನಿಥಿಲಾ ದಾಸ್ ಎರಡು ವಿಭಾಗಳಲ್ಲಿ ಚಿನ್ನದ ಪದ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಈ ವಿಭಾಗದಲ್ಲಿ ರಾಜ್ಯದ ಕಿಯಾನ್ ಬರುಹ ಕಂಚಿನ ಪದಕ ಗೆದ್ದರು.
ಜೂನಿಯರ್ ವಿಭಾಗದ ಕ್ರಾಸ್ ಕಂಟ್ರಿ ರಿಲೇಯಲ್ಲಿ ಕರ್ನಾಕಟದ ಧನಯಂಜರ್ ಎಸ್ ಟಿ, ಬೀರಪ್ಪ ನವಲಿ, ಪವಿತ್ರ ಕುರ್ತುಕೋಟಿ ಹಾಗೂ ನಾಗಸಿರಿ ಎಚ್ ಎನ್ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಗೆದ್ದಿತು.
ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಧನುಶ್ ಪ್ರಶಾಂತ್ ಚಿನ್ನ ಗೆದ್ದರೆ ಇದೇ ವಿಭಾಗದಲ್ಲಿ ರಾಜ್ಯದ ರೆಹಾನ್ ರೋಷನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಬಾಲಕರ ಜೂನಿಯರ್ ಕ್ರಾಸ್ ಕಂಟ್ರಿ ಟೈಮ್ ಟ್ರಯಲ್ ವಿಭಾಗದಲ್ಲಿ ರಾಜ್ಯದ ಧನಂಜಯ್ ಎಸ್ ಟಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕ್ರಾಸ್ ಕಂಟ್ರಿ ಟೈಮ್ ಟ್ರಯಲ್ ವಿಭಾಗದಲ್ಲಿ ರಾಜ್ಯದ ಧನುಷ್ ಪ್ರಶಾಂತ್ ಬಂಗಾರದ ಪದಕ ತಮ್ಮದಾಗಿಸಿಕೊಂಡರು.
ಕ್ರಾಸ್ ಕಂಟ್ರಿ ಒಲಿಂಪಿಕ್ ವಿಭಾಗದಲ್ಲಿ ರಾಜ್ಯದ ಚರಿತ್ ಗೌಡ ಹಾಗೂ ಮಹಿಳಾ ಅಲೈಟ್ ವಿಭಾಗದಲ್ಲಿ ಸ್ಟಾರ್ ನಾರ್ಜಿ ಚಿನ್ನ ಗೆದ್ದರು. ಎಲೈಟ್ ಕ್ರಾಸ್ ಕಂಟ್ರಿ ವಿಭಾಗದಲ್ಲಿ ರಾಜ್ಯದ ವೈಶಾಖ ಕೆ ವಿ, ಚರಿತ್ ಗೌಡ, ಸ್ಟಾರ್ ನಾರ್ಜಿ ಹಾಗೂ ಕರೆನ್ ಮಾರ್ಷಲ್ ಚಿನ್ನದ ಡಬಲ್ ಸಾಧನೆ ಮಾಡಿದ್ದಾರೆ. ಜೂನಿಯರ್ ವಿಭಾಗದಲ್ಲಿ ಪವಿತ್ರಾ ಕುರ್ತುಕೋಟಿ ಸ್ವರ್ಣ ಗೆದಿದ್ದಾರೆ.