ಬೆಂಗಳೂರು: ಭಾರತ ದೇಶದಲ್ಲಿ ಕ್ರೀಡಾ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 20,000 ಹೆಚ್ಚು ಕ್ರೀಡಾಭಿಮಾನಿಗಳಿಂದ ಕೂಡಿರುವ ಪಾಸಿಟಿವ್ ಸ್ಪೋರ್ಟ್ಸ್ ವೈಬ್ ಕಮ್ಯೂನಿಟಿ (ಪಿಎಸ್‌ವಿಸಿ) The Positive Sports Vibe Community (PSVC) ಯು ರಾಷ್ಟ್ರೀಯ ಮಟ್ಟದ ಕ್ರೀಡಾ ಫೋಟೋಗ್ರಾಫಿ ಪ್ರಶಸ್ತಿಗೆ National Sports Photography Award ಅರ್ಜಿಗಳನ್ನು ಆಹ್ವಾನಿಸಿದೆ. National Sports Photography Award by Positive Sports Vibe Community (PSVC).
ಇದು ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಸ್ಪರ್ಧೆಯಾಗಿದ್ದು ಒಟ್ಟು 1 ಲಕ್ಷ ರೂ. ಬಹುಮಾನವನ್ನು ಒಳಗೊಂಡಿರುತ್ತದೆ. ದೇಶದಲ್ಲಿ ಕ್ರೀಡಾ ಅರಿವನ್ನು ಹೆಚ್ಚಿಸಿ ಎಲ್ಲ ಕಡೆ ತಲುಪಿಸಲು, ಕ್ರೀಡಾ ಛಾಯಾಗ್ರಾಹಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಯೋಜನೆಯನ್ನು ಪಿಎಸ್‌ವಿಸಿ ಆಯೋಜಿಸಿದೆ.
ಪ್ರವೇಶ ಶುಲ್ಕವಿರುವುದಿಲ್ಲ. ನೋಂದಣಿಯೂ ಸಂಪೂರ್ಣ ಉಚಿತವಾಗಿದ್ದು, ಕ್ರೀಡಾ ಫೋಟೋಗ್ರಫಿ ಕೆಲಸ ಅತ್ಯಂತ ಕಠಿಣವಾದದ್ದು, ಒಂದು ಉತ್ತಮ ಚಿತ್ರಕ್ಕಾಗಿ ಆತ ಸಾಕಷ್ಟು ಸಮಯವನ್ನು ವ್ಯಯ ಮಾಡಬೇಕಾಗುತ್ತದೆ. ಅವರ ವೃತ್ತಿ ಬದುಕಿನಲ್ಲೂ ಸಾಕಷ್ಟು ತ್ಯಾಗವಿರುತ್ತದೆ. ಒಂದು ಕ್ರೀಡೆಯ ಬಗ್ಗೆ ನೋಡಿ ಆಮೇಲೆ ಬರೆಯಬಹುದು, ಆದರೆ ಫೋಟೋಗ್ರಫಿ ಮಾಡಬೇಕಾದರೆ ಆ ಸ್ಥಳದಲ್ಲೇ ಇದ್ದು ವಿವಿಧ ಕೋನಗಳಲ್ಲಿ ಕ್ಲಿಕ್ಕಿಸಬೇಕಾಗುತ್ತದೆ. ಸಂದರ್ಭಕ್ಕಾಗಿ ಕಾಯಬೇಕಾಗುತ್ತದೆ.
subscribe our sports channel and support
ಆಯ್ಕೆ ಸಮಿತಿ: ನೀರಜ್ ಜಾ, ಜೋಷೇ ಜಾನ್, ರೂಫಾ ರಮಣಿ, ಪುರುಷಾಸ್ಪ್ ಮೆಹ್ತಾ, ಗೌರವ್ ಚೌಧರಿ, ಶಾರರ್ದಾ ಉಗ್ರಾ ಮತ್ತು ಕುಣಾಲ್ ಮಜುಂದಾರ್.
ವಿಭಾಗಗಳು: ಕ್ರಿಕೆಟ್, ಫುಟ್ಬಾಲ್, ಅಥ್ಲೆಟಿಕ್ಸ್, ಈಜು, ಮೋಟಾರ್ ಸ್ಪೋರ್ಟ್ಸ್, ರಾಕೆಟ್ ಸ್ಪೋರ್ಟ್ಸ್, ಪ್ಯಾರಾ ಸ್ಪೋರ್ಟ್ಸ್, ಸಾಂಪ್ರದಾಯಿಕ ಕ್ರೀಡೆ, ಕಂಬ್ಯಾಟ್ ಸ್ಪೋರ್ಟ್ಸ್/ ಮಾರ್ಷಲ್ ಆರ್ಟ್, ಯಾವುದೇ ಕ್ರೀಡೆ, ಯಾವುದೇ ಸನ್ನಿವೇಶಕ್ಕೆ ಸಂಬಂಧಿಸಿದ ಮುಕ್ತ ವಿಭಾಗ, ಮೊಬೈಲ್‌ನಲ್ಲಿ ತೆಗೆದ ಫೋಟೋಗಳಿಗಾಗಿ ವಿಶೇಷ ಮೊಬೈಲ್ ವಿಭಾಗವೂ ಇದೆ.
ಫೋಟೋಗಳನ್ನು ಆನ್‌ಲೈನ್ ಮೂಲಕ ಸಲ್ಲಿಸತಕ್ಕದ್ದು.
ಹೆಚ್ಚಿನ ವಿವರಗಳಿಗೆ https://sportsphotographyawards.com ಲಾಗಿನ್ ಆಗಿ. ಕರೆ ಮಾಡಿ 8073451094
ಫೋಟೋಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 1 2025