ಬ್ರುಸೆಲ್ಸ್: ಅತ್ಯಂತ ರೋಚಕವಾಗಿ ನಡೆದ ಡೈಮಂಡ್‌ಲೀಗ್ ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಅವರು 87.86 ಮೀ. ದೂರಕ್ಕೆ ಎಸೆದು ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ಬಂಗಾರದ ಪದಕದಿಂದ ವಂಚಿತರಾದರು. Neeraj Chopra missed diamond League trophy by just 1 centimeter.
ಗ್ರೆನೆಡಾದ ಆಂಡರ್ಸನ್ ಪೀಟರ್ 87.87 ಮೀ. ದೂರಕ್ಕೆ ಎಸೆದು ಡೈಮಂಡ್ ಲೀಗ್ ಟ್ರೋಫಿ ಗೆದ್ದುಕೊಂಡರು. ಚೋಪ್ರಾ 2022ರಲ್ಲಿ ಬಂಗಾರ, 2023ರಲ್ಲಿ ಎರಡನೇ ಸ್ಥಾನ ಹಾಗೂ 2024ರಲ್ಲಿ ಎರಡನೇ ಸ್ಥಾನ ಗಳಿಸಿದರು. ಮೊದಲ ಎಸೆತದಲ್ಲಿ 86.82 ಮೀ, ಎರಡನೇ ಎಸೆತದಲ್ಲಿ 83.49 ಮೀ, ಮೂರನೇ ಎಸೆತದಲ್ಲಿ 87.86 ಮೀ, ನಾಲ್ಕನೇ ಎಸೆತದಲ್ಲಿ 82.04 ಮೀ, ಐದನೇ ಎಸೆತದಲ್ಲಿ 83.30 ಮೀ ಮತ್ತು ಆರನೇ ಎಸೆತದಲ್ಲಿ 86.46 ಮೀ ದೂರಕ್ಕೆ ಜಾವೆಲಿನ್ ಎಸೆದರು. 2022ರಲ್ಲಿ ಅಗ್ರಸ್ಥಾನಿಯಾದ ನೀರಜ್ ಚೋಪ್ರಾ 2023ರಲ್ಲಿ ಎರಡನೇ ಸ್ಥಾನಿಯಾದರು ಈಗ 2024ರಲ್ಲಿ ಮತ್ತೆ ಎರಡನೇ ಸ್ಥಾನ ಗಳಿಸಿದರು.
ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಇರುವುದಿಲ್ಲ, ಬದಲಾಗಿ ಡೈಮಂಡ್ ಲೀಗ್ ಟ್ರೋಫಿ ಹಾಗೂ ನಗದು ಬಹುಮಾನ ನೀಡುತ್ತಾರೆ. ಮೊದಲ ಸ್ಥಾನ ಗಳಿಸಿದವರಿಗೆ ಟ್ರೋಫಿಯೊಂದಿಗೆ 30,000 ಡಾಲರ್ ಹಾಗೂ ಎರಡನೇ ಸ್ಥಾನ ಗಳಿಸಿದವರಿಗೆ 12,000 ಡಾಲರ್ ಮತ್ತು ಟ್ರೋಫಿ ನೀಡುತ್ತಾರೆ.