Thursday, November 21, 2024

ಕ್ರಿಕೆಟ್‌ ಮತ್ತು ಕಿಕ್‌ ಬಾಕ್ಸಿಂಗ್‌: ಇದು ಶಿವಶಂಕರನ ಮಹಿಮೆ!

ಒಂದು ತಿಂಗಳ ಹಿಂದೆ ವಿಶೇಷ ಚೇತನರ ಕ್ರಿಕೆಟ್‌ನಲ್ಲಿ ಶೇಷ ಭಾರತ ತಂಡದ ನಾಯಕನಾಗಿ ಆಡಿದ್ದ ಒಂಟಿಗೈ ಫೈಟರ್‌ ಶಿವಶಂಕರ್‌ ಅಲ್ಲಿ ಗಾಯಗೊಂಡು ಒಂದು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದರು. ಆದರೆ ಚೇರಿಸಿಕೊಂಡ ಎರಡೇ ದಿನಗಳಲ್ಲಿ ಮುಂಬೈಯಲ್ಲಿ ನಡೆದ ಕಿಕ್‌ ಬಾಕ್ಸಿಂಗ್‌ ಹೋರಾಟದಲ್ಲಿ ನುರಿತ ಫೈಟರ್‌ ವಿರುದ್ಧ ಜಯ ಗಳಿಸಿರುವುದು ಅಚ್ಚರಿ. Shivashankar fighting in Kick Boxing while playing cricket.

ಕ್ರಿಕೆಟ್‌‌ ಆಡುತ್ತಲೇ ಇನ್ನೊಂದು ಮಾರ್ಷಲ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಜಗತ್ತಿನ ವಿಶೇಷ ಕ್ರೀಡಾಪಟು ಶಿವಶಂಕರ್‌ ಈ ನಾಡಿನ ಅಚ್ಚರಿ. ಆದರೆ ಈ ವಿಶೇಷ ಸಾಧಕನಿಗೆ ಪ್ರಾಯೋಜಕರು ಇಲ್ಲದಂತಾಗಿದೆ. ಬರೇ ಅನುಕಂಪದ ಅಲೆ ಇದೆಯೇ ಹೊರತು ನಗದು ಇಲ್ಲಿ ನಗದು.

ಆರನೇ ವಯಸ್ಸಿನಲ್ಲಿ ಕೈ ಕಳೆದುಕೊಂಡ ಶಿವಶಂಕರ್‌, ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು. ಕರ್ನಾಟಕ ಕ್ರಿಕೆಟ್‌ ಇನ್‌ಸ್ಟಿಟ್ಯೂಟ್‌ನ ಇರ್ಫಾನ್‌ ಸೇಠ್‌ ಅವರು ಸಾಮಾನ್ಯರೊಂದಿಗೆ ಶಿವಶಂಕರ್‌ಗೆ ಕ್ರಿಕೆಟ್‌ ತರಬೇತಿ ನೀಡಿದರು. ಶಿವಶಂಕರ್‌ ಇದುವರೆಗೂ ಆಡಿದ್ದು ಸಾಮಾನ್ಯರೊಂದಿಗೇ ಹೆಚ್ಚು. ಶಿವು ಖಾತೆಯಲ್ಲಿ ಈಗಾಗಲೇ ನಾಲ್ಕೈದು ಶತಕ ಸೇರಿಕೊಂಡಿದೆ. ಕಾರ್ಪೊರೇಟ್‌ ಕ್ರಿಕೆಟ್‌ನಲ್ಲಿ ಶಿವು ಎಲ್ಲರ ಆಕರ್ಷಣೆ.

ಕ್ರಿಕೆಟ್‌ ಹಾಗೂ ಕಿಕ್‌ಬಾಕ್ಸಿಂಗ್‌ ಎರಡನ್ನೂ ಹೇಗೆ ಸರದೂಗಿಸಿಕೊಂಡು ಹೋಗುತ್ತಿ? ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಶಂಕರ್‌, “ನನ್ನದು ಒಂಟಿಕೈ, ನನಗೆ ಸವಾಲುಗಳೆಂದರೆ ಇಷ್ಟ. ಮನೆಯವರ ವಿರೋಧದ ನಡುವೆಯೂ ನಾನು ಇಂದಿನ ಫೈಟ್‌ನಲ್ಲಿ ಪಾಲ್ಗೊಂಡಿರುವೆ. ಈ ಬಾರಿ ಜಯ ಗಳಿಸಿದರೂ ಸಾಕಷ್ಟು ಹೊಡೆತ ಬಿದ್ದಿದೆ. ಇನ್ನೊಂದು ಹತ್ತು ನಿಮಿಷದ ಸ್ಪರ್ಧೆ ಇರುತ್ತಿದ್ದರೆ ನಾನು ಕುಸಿದು ಬೀಳುತ್ತಿದ್ದೆ. ಅಷ್ಟು ದಣಿವಾಗಿದೆ. ಸಾಮಾನ್ಯರೊಂದಿಗೆ ಒಂಟಿಗೈಯಲ್ಲಿ ಆಡುವುದು ಅಷ್ಟು ಸುಲಭವಲ್ಲ. ಅವರಿಗೆ ಹೊಡೆಯುವ ಅವಕಾಶಗಳು ಜಾಸ್ತಿ ಇರುತ್ತವೆ. ಆದರೂ ಜಯ ಗಳಿಸಿದೆ ಎನ್ನುವುದೇ ಹೆಮ್ಮೆ,” ಎಂದು ನುಡಿದರು. ಕಿಕ್‌ ಬಾಕ್ಸಿಂಗ್‌ನಲ್ಲಿ ಶಿವಶಂಕರ್‌ ಅವರದ್ದು ಇದು ಎರಡನೇ ನಾಕೌಟ್‌ ಜಯ.

Related Articles