Thursday, October 31, 2024

ಅಂತಿಮ ನಾಲ್ಕರ ಹಂತಕ್ಕೆ ಮೇರಿಕೋಮ್

ದೆಹಲಿ:

ಐದು ಬಾರಿ ವಿಶ್ವ ಚಾಂಪಿಯನ್ ಮೇರಿಕೋಮ್ ಪ್ರಸಕ್ತ ಋತುವಿನ ವಿಶ್ವ ಮಹಿಳೆಯರ  ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದು ಪದಕ ಖಚಿತಪಡಿಸಿಕೊಂಡರು.

ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮೇರಿ, ಚೀನಾದ ವು ಯು ಅವರನ್ನು 5-0 ಬೌಟ್‌ಗಳಿಂದ ಪರಾಭವಗೊಳಿಸುವಲ್ಲಿ ಯಶಸ್ವಿಯಾದರು. ಪಂದ್ಯದ ಆರಂಭದಿಂದಲೂ ಉತ್ತಮ ಆಟವಾಡುವಲ್ಲಿ ಯಶಸ್ವಿಯಾದ ಮೇರಿ ಎದುರಾಳಿಯನ್ನು ತಮ್ಮ ಬಲಿಷ್ಠ ಪಂಚ್‌ಗಳಲ್ಲಿ ಹಿನ್ನಡೆಯಾಗುವಂತೆ ಮಾಡಿದರು. ಪಂದ್ಯದ ಐದು ಸುತ್ತುಗಳಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ 30-27, 29-28, 30-27, 29-28, 30-27 ಅಂತರಗಳಿಂದ ವು ಅವರನ್ನು ಮಣಿಸಿದರು.
ನಾಲ್ಕರ ಘಟ್ಟದಲ್ಲಿ ಅವರು ಒಲಿಂಪಿಕ್ ಕಂಚಿನ ಪದಕ ವಿಜೇತೆ ಕೊರಿಯಾದ ಕಿಮ್ ಹಯಾಂಗ್ ಮಿ ಅವರನ್ನು ಎದುರಿಸುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Related Articles