Tuesday, December 3, 2024

ಮೋದಿಗೆ ಫಿಫಾ ಅಧ್ಯಕ್ಷರಿಂದ ಜರ್ಸಿ ಉಡುಗೊರೆ

ಬ್ಯೂನೊಸ್ ಐರಿಸ್: 

ಫಿಫಾ ಅಧ್ಯಕ್ಷ ಗಿಯಾನ್ನಿ ಇನ್ಫ್ಯಾಂಟಿನೊ  ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ‘ಮೋದಿ’ ಹೆಸರಿರುವ ವಿಶೇಷ ಫುಟ್ಬಾಲ್ ಜರ್ಸಿಯನ್ನು ಕೊಡುಗೆಯಾಗಿ ನೀಡಿದರು.

ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಯಲಿ ಶನಿವಾರ ಮೋದಿ ಫಿಫಾ ಅಧ್ಯಕ್ಷರನ್ನು ಭೇಟಿಯಾದರು. ಈ ವೇಳೆ ತಮ್ಮ ಹೆಸರಿರುವ ಜರ್ಸಿ ಪಡೆದ ಪ್ರದಾನ ಮಂತ್ರಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾಾರೆ.
ಅರ್ಜೆಂಟೀನಾಗೆ ಆಗಮಿಸಿ ಫುಟ್ಬಾಾಲ್ ಕುರಿತು ಯೋಚನೆ ಮಾಡುವುದು ಅಸಾಧ್ಯ. ಅರ್ಜೆಟೀನಾ ಆಟಗಾರರು ಭಾರತದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಆದರೆ, ಇಲ್ಲಿಗೆ ಬಂದು ಫಿಫಾ ಅಧ್ಯಕ್ಷ ಗಿಯಾನ್ನಿ ಬಳಿ ನನ್ನ ಹೆಸರಿರುವ ಜರ್ಸಿ ಪಡೆದಿರುವುದು ತುಂಬಾ ಖುಷಿ ನೀಡಿದೆ. ಅವರಿಗೆ ಧನ್ಯವಾದಗಳನ್ನು ಮೋದಿ ಅರ್ಪಿಸಿದರು.

Related Articles