Friday, November 22, 2024

ಮೇರಿ ಭಾರತ್ ಮಹಾನ್

ಏಜೆನ್ಸೀಸ್ ಹೊಸದಿಲ್ಲಿ

ಉಕ್ರೇನ್‌ನ ಹನ್ನಾ ಒಖೋಟ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿದ ಭಾರತದ ಮೇರಿ ಕೊಮ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಬಾರಿಗೆ ಪ್ರಶಸ್ತಿ ಗೆದ್ದು ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

ಈ ಸಾಧ ಯೊಂದಿಗೆ ಮೇರಿ ಕೊಮ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಇದುವರೆಗೂ ಆರು ಬಾರಿ ಪ್ರಶಸ್ತಿ ಗೆಲ್ಲಲಾಗಿದೆ. ಕ್ಯೂಬಾದ ಫ್ಲೆಕ್ಸಿ ಸವೊನ್ 6 ಬಾರಿ ಪ್ರಶಸ್ತಿ ಗೆದ್ದಿರುತ್ತಾರೆ. ಇದುವರರೆಗೂ ಮೇರಿ ಕೊಮ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 7 ಪದಕಗಳನ್ನು ಗೆದ್ದಿರುತ್ತಾರೆ. 6 ಚಿನ್ನ ಹಾಗೂ ಒಂದು ಬೆಳ್ಳಿ.
೫ ವರ್ಷದ ಬಾಕ್ಸರ್ ಮೇರಿಗೆ 48 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲಲು ಪ್ರಯಾಸ ಪಡಬೇಕಾಗಿ ಬರಲಿಲ್ಲ.
ನಿರಾಯಾಸವಾಗಿ ಅವರು ಜಯ ಗಳಿಸಿ ಇತಿಹಾಸ ನರ್ಮಿಸಿದರು. ಗೆದ್ದ ಸಂಭ್ರಮದಲ್ಲಿ, ಆನಂದ ಭಾಷ್ಪದಲ್ಲಿ ಮಾತನಾಡಿದ ಮೇರಿ, 2020 ರ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಚಿನ್ನ ಗೆಲ್ಲುವುದಾಗಿ ಹೇಳಿದರರು.
ಮೂರು ಮಕ್ಕಳ ತಾಯಿಯಾಗಿರುವ ಮೇರಿ 2001ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ನಂತರ 2002, 2005, 2006, 2008, 2010, 2018ರಲ್ಲಿ ಚಿನ್ನದ ಸಾಧನೆ ಮಾಡಿದರು.

Related Articles